Advertisement

ರಸ್ತೆ ವಿಭಾಜಕಗಳು ಅಗಲವಾಗಿರಲಿ

06:38 AM Apr 28, 2019 | Team Udayavani |

ನಗರದ ಬಹುತೇಕ ರಸ್ತೆಗಳಲ್ಲಿ ಡಿವೈಡರ್‌ಗಳಿದ್ದು, ಆದರೆ ರಸ್ತೆಗಳು ಅಗಲ ಕಿರಿದಾಗಿರುವುದರಿಂದ ಹೆಚ್ಚಿನ ಸಮಸ್ಯೆಗೆ ಕಾರಣವಾಗುತ್ತಿದೆ.

Advertisement

ಘನವಾಹನಗಳಾದ ಬಸ್‌ ಮತ್ತು ಲಾರಿಗಳಲ್ಲಿ ವಾಹನಗಳನ್ನು ಚಾಲನೆ ಮಾಡುತ್ತಿರುವಾಗ ಹಿಂದಿನ ದೃಶ್ಯವನ್ನು ನೋಡುವ ಸಲುವಾಗಿ ಎರಡೂ ಕಡೆಗೆ ಕನ್ನಡಿಗಳನ್ನಿಟ್ಟಿರುತ್ತಾರೆ. ಅದು ವಾಹನದ ಜಾಗವಲ್ಲದೆ ಹೊರಗಿನ ಜಾಗವನ್ನು ಆವರಿಸಿರುತ್ತದೆ. ಇದರಿಂದಾಗಿ, ರಸ್ತೆ ದಾಟುವವರು, ಅರ್ಧ ರಸ್ತೆ ದಾಟಿ, ವಿಭಜಕದಲ್ಲಿ ನಿಂತಿದ್ದಾಗ ಬಸ್‌ ಮತ್ತು ದೊಡ್ಡ ವಾಹನಗಳ ಕನ್ನಡಿಗಳು ತಾಗಿ ಜನರಿಗೆ ಅಪಘಾತಗಳಾದ ಹಲವು ಉದಾಹರಣೆಗಳಿವೆ.

ಆದ್ದರಿಂದ ರಸ್ತೆಗೆ ವಿಭಾಜಕ ನಿರ್ಮಿಸುವುದಾದರೆ ಅದು ಹೆಚ್ಚು ಅಗಲವಾಗಿರಬೇಕು ಮತ್ತು ಅದರಲ್ಲಿ ಹೂಕುಂಡಗಳನ್ನು ಇರಿಸುವುದರೊಂದಿಗೆ ರಸ್ತೆಯು ಸುಂದರವಾಗಿ ಕಾಣುವಂತೆ ಮಾಡಬೇಕು. ಹೀಗೆ ಮಾಡಿದರೆ ಜನರಿಗೆ ಚಲಿಸುವ ವಾಹನಗಳ ಕನ್ನಡಿ ತಾಗುವ ಅಪಾಯ ಕಡಿಮೆಯಿರುತ್ತದೆ.

ಒಂದು ವೇಳೆ ಸಪೂರ ವಿಭಾಜಕಗಳೇ ಇದ್ದಲ್ಲಿ, ವಿಭಾಜಕದ ನಡುವಿನಲ್ಲಿ ಸುಮಾರು ನಾಲ್ಕು ಅಡಿ ಎತ್ತರದ ಕಬ್ಬಿಣದ ಬೇಲಿಯನ್ನು ಹಾಕಬೇಕು. ಆಗ ಜನರು ಎಲ್ಲ ಕಡೆ ರಸ್ತೆ ದಾಟದೆ, ರಸ್ತೆ ದಾಟಲು ಅವಕಾಶವಿದ್ದಲ್ಲಿ ಮಾತ್ರ ದಾಟುತ್ತಾರೆ. ರಸ್ತೆ ವಿಭಾಜಕಗಳಲ್ಲಿ ಸ್ವಲ್ಪ ಎತ್ತರದ ಗಿಡಗಳನ್ನು ನಡೆಬೇಕು ಮತ್ತು ವಿಭಾಜಕದ ಹತ್ತಿರ ವಾಹನಗಳು ಚಲಿಸದಂತೆ ರಸ್ತೆಯಲ್ಲಿ ಸ್ವಲ್ಪ ಉಬ್ಬುಗಳನ್ನು ಮಾಡಬೇಕು. ಆಗ ರಸ್ತೆ ವಿಭಾಜಕಗಳು ಪಾದಚಾರಿಗಳಿಗೂ ಸುರಕ್ಷೆಯನ್ನು ಒದಗಿಸಬಲ್ಲದು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕಿದೆ.

– ವಿಶ್ವನಾಥ್‌ ಕೋಟೆಕಾರ್‌, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next