ನಗರದ ಸೆಂಟ್ರಲ್ ಮಾರ್ಕೆಟ್-ಲೇಡಿಗೋಷನ್ ರಸ್ತೆಯ ಒಂದು ಬದಿಯಲ್ಲಿ ಬೀದಿ ವ್ಯಾಪಾರಿಗಳಿದ್ದರೆ ಇನ್ನೊಂದು ಬದಿಯಲ್ಲಿ ವಾಹನಗಳಿವೆ. ಹಿಂದೆ ಎರಡೂ ಬದಿಯಲ್ಲಿದ್ದ ಬೀದಿ ವ್ಯಾಪಾರಿಗಳನ್ನು ಇಲ್ಲಿಂದ ತೆರವು ಮಾಡಲಾಗಿತ್ತು. ಪ್ರಸ್ತುತ ಒಂದು ಬದಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ರಸ್ತೆಯನ್ನು ಬ್ಯಾರಿಕೇಡ್‌ಗಳು ಹಾಗೂ ಕಬ್ಬಿಣದ ರಾಡ್‌ಗಳನ್ನು ಹಾಕಿ ವಿಭಜಿಸಿಕೊಡಲಾಗಿದ್ದು ಇದರಿಂದ ವಾಹನಗಳು ಸ್ವಲ್ಪ ಸರಾಗವಾಗಿ ಸಾಗಲು ಸಾಧ್ಯವಾಗಿದೆ. ಆದರೆ ಈ ರೀತಿ ಅಳವಡಿಸಲಾಗಿರುವ ಬ್ಯಾರಿಕೇಡ್, ಕಬ್ಬಿಣದ ರಾಡ್‌ಗಳಲ್ಲಿ ಕೆಲವು ಬಾಗಿ ಹೋಗಿ ತುಂಡಾಗುವ ಸ್ಥಿತಿಯಲ್ಲಿವೆ. ಅನಗತ್ಯವಾಗಿ ಕೆಲವು ಬ್ಯಾರಿಕೇಡ್‌ಗಳನ್ನು ಇಲ್ಲಿ ಅಳವಡಿಸಲಾಗಿದೆ. ಸೆಂಟ್ರಲ್ ಮಾರ್ಕೆಟ್ ಕಡೆಯಿಂದ ಬರುವಾಗ ಈ ರಸ್ತೆಯಲ್ಲಿ ಇರುವ ಕಬ್ಬಿಣದ ರಾಡ್‌ಗೆ ವಾಹನಗಳು ಸಿಲುಕುವ ಅಪಾಯವಿದೆ. ಇನ್ನೊಂದು ಭಾಗದಲ್ಲಿಯೂ ರಾಡ್‌ಗಳು ಬಾಗಿನಿಂತು ಅಪಾಯಕಾರಿಯಾಗಿವೆ. ಇಲ್ಲಿ ವ್ಯವಸ್ಥಿತವಾಗಿ ಡಿವೈಡರ್ ಅಳವಡಿಸುವ ಆವಶ್ಯಕತೆ ಇದೆ.