Advertisement

ನೀರಿನ ಪೈಪ್‌ಗಾಗಿ ರಸ್ತೆ ಅಗೆತ: ಗ್ರಾಮಸ್ಥರ ಪ್ರತಿಭಟನೆ 

12:44 PM Jan 29, 2018 | |

ಬಜಪೆ : ರಸ್ತೆ ಡಾಮರುಗೊಂಡ ಮಾರನೆ ದಿನವೇ ಕಂದಾವರ ವ್ಯಾಪ್ತಿಯ ಮಹಿಳೆಯೊರ್ವರು ನೀರು ಸರಬರಾಜಿನ ಪೈಪ್‌ಗಾಗಿ ರಸ್ತೆ ಅಗೆದಿದ್ದು ಗ್ರಾಮಸ್ಥರು ತೀವ್ರವಾಗಿ ಪ್ರತಿಭಟಿಸಿದರು. ಜಿಲ್ಲಾ ಮತ್ತು ಇತರೆ ರಸ್ತೆಗಳ-ನವೀಕರಣ ಯೋಜನೆಯಡಿ 1ಕೋಟಿ ರೂ. ಅನುದಾನದಲ್ಲಿ ಬಜಪೆ ವಿಮಾನ ನಿಲ್ದಾಣ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದ ಎರಡು ದಿನದಲ್ಲಿ ಈ ಅಗೆತ ನಡೆದಿದೆ. ಜ.15ರಂದು ಈ ರಸ್ತೆ ಕಾಮಗಾರಿಗೆ ಶಾಸಕ ಕೆ. ಅಭಯಚಂದ್ರ ಅವರು ಗುದ್ದಲಿ ಪೂಜೆ ನಡೆಸಿದ್ದರು. ಇಲ್ಲಿನ ಗ್ರಾಮಸ್ಥರು ಈ ಹದೆಗೆಟ್ಟ ರಸ್ತೆಯ ಬಗ್ಗೆ ಹಲವಾರು ಬಾರಿ ಪ್ರತಿಭಟನೆ ನಡೆಸಿ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು.

Advertisement

ಯಾಕೆ ಅಗೆತ ?
ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಹಿಳೆಯೊರ್ವರಿಗೆ ನೀರಿನ ಸರಬರಾಜಿನ ಪೈಪು ಬಂದಿಲ್ಲ. ಈ ಬಗ್ಗೆ ಪಂಚಾಯತ್‌ಗೆ ಹಲವು ಬಾರಿ ಮನವಿ ಮಾಡಿದ್ದರು. ಇದು ಈಡೇರದಿದ್ದಾಗ ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನೀರು ಸಂಪರ್ಕಕ್ಕಾಗಿ ಡಾಮರುಗೊಂಡ ರಸ್ತೆಯನ್ನು ಅಗೆಯಲು ಸಿದ್ದರಾಗಿದ್ದರು. ಇದಕ್ಕೆ ಗುತ್ತಿಗೆದಾರರು ಸಮ್ಮತಿಸಿದ್ದರು ಎಂದು ಹೇಳಲಾಗಿದೆ. ಬಳಿಕ ಪರಿಸ್ಥಿತಿ ಹದಗೊಳಿಸಲು ಬಜಪೆ ಪೊಲೀಸರು ಸ್ಥಳಕ್ಕೆ ಬರಬೇಕಾಯಿತು.

ಹಣ ಕಟ್ಟಿದರೆ ಮಳವೂರು ಗ್ರಾ.ಪಂ.ನೀರು
ಈಗಾಗಲೇ ಮಳವೂರು ವೆಂಟೆಡ್‌ ಡ್ಯಾಂನ ನೀರು ಈ ಪ್ರದೇಶಕ್ಕೆ ಸರಬರಾಜು ಮಾಡಲು ಪೈಪುಗಳ ಜೋಡಣೆಯಾಗಿದೆ. ಸದ್ಯದಲ್ಲಿ ನೀರು ಸಂಪರ್ಕ ಕಲ್ಪಿಸಲಾಗುವುದು. ಸಂಪರ್ಕದ ಬಾಬ್ತು ಹಣ ಕಟ್ಟಿದರೆ ನೀರು ನೀಡಲಾಗುವುದು.
ಪ್ರಸಿಲ್ಲಾ
  ಗ್ರಾಮ ಪಂಚಾಯತ್‌ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next