ಕುಣಿಗಲ್: ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯತೆಯಿಂದಾಗಿ ಪಟ್ಟಣದ ಹಳೇಯ ರಾಷ್ಟ್ರೀಯ ಹೆದ್ದಾರಿ 48ರ ಹುಚ್ಚಮಾಸ್ತಿಗೌಡ ಸರ್ಕಲ್ನಲ್ಲಿ ಕೋಟ್ಯಂತರ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದ್ದು ವಾಹನ ಹಾಗೂ ನಾಗರೀಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
ಇಷ್ಟೆಲ್ಲಾ ಜನರು ಸಮಸ್ಯೆ ಅನುಭವಿಸುತ್ತಿದ್ದರೂ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಅಧಿಕಾರಿ ವರ್ಗ ಹಾಗೂ ಜನ ಪ್ರತಿನಿಧಿಗಳು ವರ್ತಿ ಸುತಿರುವುದು ನಾಗರೀಕರಲ್ಲಿ ಅಸಮಾಧಾನಕ್ಕೆ ಕಾರಣ ವಾಗಿದೆ. ಕಳೆದ ಎರಡು ವರ್ಷದ ಹಿಂದೆ ಶಾಸಕ ಡಿ.ನಾಗರಾಜಯ್ಯ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ಕಾಮ ಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ವೇಳೆ ಪಟ್ಟಣದ ಜನತೆ ರಸ್ತೆ ಬಗ್ಗೆ ನಾನಾ ನಿರೀಕ್ಷೆ ಇಟ್ಟುಕೊಂಡಿದ್ದರು. ಪಟ್ಟಣದ ಚಿತ್ರಣವೇ ಸಂಪೂರ್ಣ ಬದಲಾಗುತ್ತದೆ ಎಂದು ಕೊಂಡಿದ್ದರು.
ಸಂಚಾರಕ್ಕೆ ತೊಂದರೆ: ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದ ಕಲ್ಲುಬಿಲ್ಡಿಂಗ್ ಬಳಿ ಗುಂಡಿಗಳು ಬಿದ್ದಿದ್ದು, ಜನರಿಗೆ ಓಡಾಡಲು ಕಿರಿಕಿರಿಯಾಗುತ್ತಿದೆ. ಸಾರ್ವ ಜನಿಕರು ತಿರುಗಾಡುವ ರಸ್ತೆಯಲ್ಲಿ ಆಳು ದ್ದದ ಗುಂಡಿಗಳು ನಿರ್ಮಾಣ ಮಾಡಿರು ವುದ್ದರಿಂದ ಹಾಗೂ ಅದೇ ಸ್ಥಳದಲ್ಲಿ ಕಲ್ಲುಗಳನ್ನು ಹಾಕಿರುವುದರಿಂದ ಸಾರ್ವ ಜನಿಕರು ಮತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಇನ್ನೂ ಕಾಮಗಾರಿ ಇಲ್ಲ: ತುಮಕೂರು ರಸ್ತೆಯ ಹಳೆಯ ಮಂದೇಮಾರಮ್ಮ ದೇವಸ್ಥಾನದ ತಿರುವಿನಿಂದ ಹುಚ್ಚಮಾಸ್ತಿ ಗೌಡ ವೃತ್ತದ ಮೂಲಕ ಮದ್ದೂರು ರಸ್ತೆಗೆ ಹೋಗುವ ರಸ್ತೆ ನಿರ್ಮಾಣ ಮಾಡಲು ಕೆಶಿಪ್ ಮತ್ತು ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಜಗಲ್ಬಂದಿ ನಡೆಸಿದ್ದಾರೆ. ಈ ಮಾರ್ಗವನ್ನು ನಾವು ಮಾಡುವುದಿಲ್ಲ ಎಂದು ಕೆಶಿಪ್ ಅಧಿಕಾರಿಗಳು ಪಟ್ಟು ಹಿಡಿದಿದ್ದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿ ಗಳು ನಾವು ಸುತರಾಂ ಮಾಡುವುದಿಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ವಿಷಯ ಶಾಸಕ ಡಾ.ರಂಗನಾಥ್ ಗೊತ್ತಾಗಿ ಅಧಿಕಾರಿಗಳನ್ನು ಕರೆದು ಚರ್ಚಿಸಿದ್ದರು. ಬಳಿಕ ಅಪೂರ್ಣ ಗೊಂಡಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವುದುದಾಗಿ ಕೆಶಿಪ್ ಅಧಿಕಾರಿಗಳು ಶಾಸಕರಿಗೆ ಭರವಸೆ ನೀಡಿದ್ದರು. ಕೆಲ ತಿಂಗಳ ಹಿಂದೆ ಸ್ಥಳ ಪರಿಶೀಲಿಸಿ ಹೊದ ಕೆಶಿಪ್ ಅಧಿಕಾರಿಗಳು ಈವರೆಗೂ ಕಾಮಗಾರಿಯನ್ನು ಪ್ರಾರಂಭಿ ಸಿಲ್ಲ. ಇದರಿಂದ ಈ ಮಾರ್ಗದ ರಸ್ತೆ ನಿರ್ಮಾಣ ಕಾಮಗಾರಿ ಕಗ್ಗಂಟಾಗಿ ಪರಿಣಮಿಸಿದೆ.
Advertisement
ಕಳೆದ ಎರಡು ವರ್ಷಗಳ ಹಿಂದೆ ಬರೋಬ್ಬರೀ 25 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ತಾಲೂಕಿನ ಅಂಚೇಪಾಳ್ಯ ಹಾಗೂ ಕುಣಿಗಲ್ ಪಟ್ಟಣದ ಮಾರ್ಗವಾಗಿ ಅಲಪ್ಪನಗುಡ್ಡೆ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿ ಕೊಳ್ಳಲಾಯಿತು. ಆದರೆ, ಜನಸಂಖ್ಯೆ ಹೆಚ್ಚಳ ಹಾಗೂ ವಾಹನಗಳ ದುಪ್ಪಟ ಸಂಚಾರದಿಂದಾಗಿ ಪಟ್ಟಣದ ಮಲ್ಲಾಘಟ್ಟದಿಂದ ವೀರಭದ್ರೇಶ್ವರ ಕಲ್ಯಾಣ ಮಂಟ ಪದ ವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಕಳೆದರೂ ಪಟ್ಟಣದ ಮದ್ದೂರು, ಮಂಗಳೂರು, ಬೆಂಗಳೂರು ಹಾಗೂ ತುಮಕೂರು ಕಡೆ ಸಂಪರ್ಕ ಕಲ್ಪಿಸುವ ಗ್ರಾಮ ದೇವತೆ ಹಾಗೂ ಎನ್.ಹುಚ್ಚಮಾಸ್ತಿಗೌಡ ವೃತ್ತದ ರಸ್ತೆ ಕಾಮಗಾರಿ ಈವರೆಗೂ ಕೈಗೆತ್ತಿ ಕೊಂಡಿಲ್ಲ. ಇದರಿಂದ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಕಿರಿಕಿರಿ ಉಂಟಾಗಿದಲ್ಲದೇ ರಸ್ತೆ ಧೂಳಿನಿಂದ ಕೂಡಿ ನಾಗರೀಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.
Related Articles
Advertisement
ಕಳಪೆ ಕಾಮಗಾರಿ: ಗುತ್ತಿಗೆದಾರರು ಏನೆಲ್ಲಾ ಕಸರತ್ತು, ತುಸು ಸಂಕೀರ್ಣ ಸಮಸ್ಯೆ ಇರುವ ಕಡೆ ರಾಜಿ ಸಂಧಾನ ಮಾಡಿಕೊಂಡು ಕಾಮಗಾರಿ ಪೂರ್ಣ ಗೊಳಿಸಿ ಬಿಲ್ ಪಡೆಯುವ ಕಡೆ ತಮ್ಮ ಚಿತ್ತ ಹರಿಸಿದ್ದಾರೆ. ರಸ್ತೆಯಲ್ಲಿರುವ ವಿದ್ಯುತ್ ಕಂಬಗಳು ಈವರೆಗೂ ತೆರವು ಗೊಳಿಸಿಲ. ಆದರೆ, ಚತುಷ್ಪಥ ರಸ್ತೆಯ ಕಲ್ಪನೆಯ ಕೂಸು ಈಗ ತಲೆ ಕೆಳಕಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಪಟ್ಟಣದ ಪ್ರವಾಸಿ ಮಂದಿರದಿಂದ ಮಲ್ಲಿಪಾಳ್ಯದ ವೀರಭದ್ರೇಶ್ವರ ಕಲ್ಯಾಣ ಮಂಟಪದ ವರೆಗೆ ಕೈಗೊಂಡಿರುವ ಕೋಟ್ಯಂತರ ರೂ. ವೆಚ್ಚದ ಕಾಮಗಾರಿ ಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ನಾಗರೀ ಕರ ದೂರಾಗಿದೆ. ಈ ಹಿಂದೆ 75 ಅಡಿ ಮೀಸಲಿರಿಸಲಾಗಿತ್ತು. ಆದರೆ, ಇದನ್ನು ಉಲ್ಲಂಘಿಸಿ ಅದನ್ನು ಈಗ ಮನ ಬಂದಂತೆ ಕೆಲವೆಡೆ 50 ಅಡಿ, ಕೆಲವೆಡೆ 40 ಅಡಿಗೆ ಮಾತ್ರ ವಿಸ್ತರಿಸಿ ತಾರತಮ್ಯ ಮಾಡಲಾಗಿದೆ.
ಇಡೀ ರಸ್ತೆಯುದ್ದಕ್ಕೂ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಕೆಲ ಬಲಾಡ್ಯರ ಪ್ರಭಾವಕ್ಕೆ ಒಳಗಾಗಿ ಕೆಲವೆಡೆ ಕಡಿಮೆ ವಿಸ್ತೀರ್ಣ ತೆಗೆದುಕೊಳ್ಳಲಾಗಿದೆ ಎಂಬ ಆರೋಪವಿದೆ. ಸರ್ಕಾರಿ ಜಾಗ ದಲ್ಲಿ ಮಾತ್ರ 75 ಅಡಿಯಷ್ಟೂ ಅಗಲ ವಿಸ್ತಾರ ವಾಗಿ ತೆಗೆದುಕೊಳ್ಳಲಾಗಿದೆ. ಆದರೆ, ಈ ಹಿಂದೆ ಇದೇ ಪುರಸಭೆಯ ವರು 75 ಅಡಿ ಬಿಟ್ಟು ಅಂಗಡಿ ಮಳಿಗೆ ನಿರ್ಮಿಸಿ ಕೊಳ್ಳುವಂತೆ ಮಾತ್ರ ಪರ ವಾನಗಿ ನೀಡುತ್ತಿದ್ದರು. ಆದರೆ, ಈಗ ಅದರ ವಿಸ್ತೀರ್ಣ ವನ್ನು ಸ್ವಯಂಘೋಷಿತ ವಾಗಿ 50 ಅಡಿಗೆ ಇಳಿಸಿದ ಬಳಿಕ ಉಳಿಕೆ ಜಾಗದಲ್ಲಿ ಖಾಸಗಿಯವರು ಅಕ್ರಮವಾಗಿ ಅಂಗಡಿ ಮತ್ತು ಮಳಿಗೆ ನಿರ್ಮಿಸಿ ಕೊಳ್ಳುತ್ತಿದ್ದಾರೆ. ಗುತ್ತಿಗೆ ಪಡೆದ ಕರಾರಿ ನನ್ವಯ ಈ ಹೊತ್ತಿಗಾಗಲೇ ರಸ್ತೆ ಕಾಮ ಗಾಗಿ ಪೂರ್ಣ ಗೊಳ್ಳಬೇಕಾಗಿತ್ತು. ಆದರೆ, ಸ್ಥಳೀಯ ಪುರಸಭೆ ಆಡಳಿತ ಮತ್ತು ಜನಪ್ರತಿನಿಧಿ ಗಳ ನಿರುತ್ಸಾಹ ದಿಂದ ವರ್ಷ ಎರಡು ವರ್ಷ ಕಳೆದರೂ ಕಾಮಗಾರಿ ಮುಗಿದಿಲ್ಲ. ಹೀಗಾಗಿ ಶಾಸಕ ಡಾ.ರಂಗನಾಥ್, ಸಂಸದ ಡಿ.ಕೆ.ಸುರೇಶ್ ಕೂಡಲೇ ಈ ಸಂಬಂಧ ಕ್ರಮಕೈ ಗೊಂಡು ಅಪೂರ್ಣ ಗೊಂಡಿರುವ ಕಾಮಗಾರಿ ಯನ್ನು ಪೂರ್ಣಗೊಳಿಸಿ ಸಾರ್ವಜನಿಕ ರಿಗೆ ಅನುಕೂಲ ಮಾಡಿಕೊಡಬೇಕೆಂದು ನಾಗರೀಕರ ಆಗ್ರಹವಾಗಿದೆ.
ಕೆ.ಎನ್.ಲೋಕೇಶ್