Advertisement

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

05:22 PM Feb 17, 2020 | Suhan S |

ಮಾಗಡಿ: ಇತಿಹಾಸ ಪ್ರಸಿದ್ಧ ಮಾಂಡವ್ಯ ಕ್ಷೇತ್ರ ತಿರುಮಲೆ ರಂಗನಾಥಸ್ವಾಮಿ ಪುಷ್ಕರಣಿ ಪಕ್ಕದ ರಸ್ತೆ ತೀರ ಹಾಳಾಗಿತ್ತು. ಗುಣಮಟ್ಟದ ರಸ್ತೆ ಡಾಂಬರೀಕರಣಕ್ಕೆ ಅಗತ್ಯ ಕ್ರಮ ಕೈಗೊಂಡಿದೇವೆ ಎಂದು ಪುರಸಭಾ ಸದಸ್ಯ ಎಚ್‌. ಜೆ.ಪುರುಶೋತ್ತಮ್‌ ತಿಳಿಸಿದರು.

Advertisement

ಪಟ್ಟಣದ ತಿರುಮಲೆ ರಂಗನಾಥಸ್ವಾಮಿ ಪುರಸ್ಕರಣಿ ಪಕ್ಕದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆರಾಧ್ಯ ದೈವ ಶ್ರೀರಂಗನಾಥಸ್ವಾಮಿ. ಇಲ್ಲಿಗೆ ಸಹಸ್ರಾರು ಭಕ್ತರು ದೇವರ ದರ್ಶನಕ್ಕಾಗಿ ದೂರದ ಊರುಗಳಿಂದ ಆಗಮಿಸುತ್ತಾರೆ. ದೇವಸ್ಥಾನ ಸುತ್ತಲು ಉತ್ತಮ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.

ದೇವರ ಕೃಪೆ ಮತ್ತು ಮತದಾರರ ಆಶೀರ್ವಾದಿಂದ ಪುರಸಭಾಸದಸ್ಯನಾಗಿ ಚುನಾಯಿತನಾಗಿದ್ದು, ಅವರ ಋಣ ನನ್ನ ಮೇಲಿದೆ. ಋಣ ತೀರಿಸುವ ಕೆಲಸ ಮಾಡಬೇಕು ಎಂದು ವಾರ್ಡ್‌ಗಳ ಸರ್ವತೋಮುಖ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಂಡಿದ್ದೇನೆ. ಅಗತ್ಯವಿರುವೆಡೆ ಸಿಸಿರಸ್ತೆ ಕಾಮಗಾರಿ ಕೈಗೊಳ್ಳುವುದು. ಹಾಳಾಗಿರುವ ರಸ್ತೆ ದುರಸ್ಥಿ ಪಡಿಸುವುದು, ಡಾಂಬರೀಕರಣ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಬದ್ಧನಾಗಿದ್ದೇನೆ. ಅಭಿವೃದ್ಧಿಯೆ ನನ್ನ ಧ್ಯೇಯವಾಕ್ಯವಾಗಿದೆ. ದೇವಸ್ಥಾನದ ಸುಂದರ ಪರಿಸರಕ್ಕೆ ನಾಗರಿಕರು ಸಹ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕರಿಸಬೇಕು ಎಂದು ತಿಳಿಸಿದರು. ದೇವಸ್ಥಾನದ ಸಿಬ್ಬಂದಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next