Advertisement

ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

06:50 AM May 20, 2020 | Lakshmi GovindaRaj |

ಅರಸೀಕೆರೆ: ನಗರದ ಪ್ರಮುಖ ರಸ್ತೆಯಾದ ರೈಲ್ವೆ ನಿಲ್ದಾಣದ ಕಾಂಕ್ರೀಟ್‌ ರಸ್ತೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಅತ್ಯಂತ ತ್ವರಿತವಾಗಿ ಉತ್ತಮ ಗುಣಮಟ್ಟದ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಪೂರೈಸಬೇಕೆಂದು ಶಾಸಕ ಕೆ.ಎಂ.ಶಿವಲಿಂಗೇ ಗೌಡ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ನಗರದ ರೈಲ್ವೆ ನಿಲ್ದಾಣದ ಕಾಂಕ್ರೀಟ್‌ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಮಂಗಳ ವಾರ ಪರಿಶೀಲಿಸಿದ ನಂತರ ಮಾತನಾಡಿದ ಶಾಸಕರು, ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ನಾಲ್ಕೈದು ತಿಂಗಳು ಕಳೆದಿದೆ, ಸರ್ಕಾರ ಲಾಕ್‌ಡಾನ್‌ ಘೋಷಣೆ ಮಾಡಿರುವ ಕಾರಣದಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತ ಗೊಳಿಸಲಾಗಿತ್ತು,

ಆದರೆ ಈಗ ಪ್ರಾರಂಭ  ವಾಗಿರುವ ಒಳಚರಂಡಿ ಪೈಪ್‌ಲೈನ್‌ ಜೋಡಣೆ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ ಜೋಡಣೆ ಕಾರ್ಯ ಅತ್ಯಂತ ತ್ವರಿತವಾಗಿ ನಗರಸಭೆ ಆಡಳಿತ ಅಳವಡಿಸಿದರೆ ನಿಗದಿತ ಸಮಯದಲ್ಲಿ ಅತ್ಯಂತ ತ್ವರಿತವಾಗಿ ಉತ್ತಮ ಗುಣಮಟ್ಟದ  ಕ್ರೀಟ್‌ ರಸ್ತೆ ಹಾಗೂ ರಸ್ತೆಯ  ಎರಡೂ ಬದಿಯಲ್ಲಿ ಚರಂಡಿಗಳನ್ನು ನಿರ್ಮಿ ಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಒಂದು ವಾರದೊಳಗೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲು ತಾವುಸೂಚನೆ ನೀಡುವುದಾಗಿ ಹೇಳಿದರು.

ಈ ಸಂಧರ್ಭದಲ್ಲಿ  ಪೌರಾಯುಕ್ತ ಕಾಂತ ರಾಜ್‌ ನಗರಸಭೆ ಸದಸ್ಯ ಗಿರೀಶ್‌, ಜೆಡಿಎಸ್‌ ಮುಖಂಡ ಧರ್ಮಶೇಖರ್‌, ಬಿಜೆಪಿ ಮುಖಂಡ ರಮೇಶ್‌ ಬಾಬು ನಾಯ್ಡು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಭಿ ವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ  ಅಭಿಯಂತರ ಜಗದೀಶ್‌, ಸಹಾಯಕ ಅಭಿಯಂತರ ಕೃಷ್ಣಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next