Advertisement

60 ಅಡಿ ವಿಶಾಲ ಚತುಷ್ಪಥ ಕನಸು ಭಗ್ನ

12:38 PM Apr 13, 2021 | Team Udayavani |

ಹೊನ್ನಾವರ: ಚತುಷ್ಪಥ ನಿರ್ಮಾಣದ ಆರಂಭದಲ್ಲಿ ಹಲವು ಜಿಲ್ಲಾ ಕೇಂದ್ರಗಳನ್ನು ಜೋಡಿಸುವ ಭಟ್ಕಳ-ಹೊನ್ನಾವರ-ಕುಮಟಾದಲ್ಲಿ 60 ಅಡಿ ವಿಸ್ತಾರದ ಚತುಷ್ಪಥ ನಿರ್ಮಾಣವಾಗುತ್ತದೆ, ಮೇಲ್ಸೇತುವೆ ಬರುತ್ತದೆ, ವಿವಿಧ ಭಾಗಗಳಿಂದ ತಾಲೂಕು ಕೇಂದ್ರಕ್ಕೆ ಬಂದು-ಹೋಗುವವರಿಗೆ ಸುರಕ್ಷಿತ ಓಡಾಟ ಸಾಧ್ಯವಾಗುತ್ತದೆ ಎಂದು ಮೂರೂ ತಾಲೂಕಿನ ಜನ ಕನಸು ಕಂಡಿದ್ದರು. ಅದು ಈಗ ಭಗ್ನವಾಗಿದೆ.

Advertisement

ನಮಗೆ ಎಲ್ಲಿ 60 ಅಡಿ ಹೆದ್ದಾರಿ ನಿರ್ಮಾಣಕ್ಕೆ ರಾಜ್ಯಸರ್ಕಾರ ಭೂಮಿ ಕೊಟ್ಟಿದೆಯೋ ಅಲ್ಲೆಲ್ಲಚತುಷ್ಪಥ ಮಾಡಿ ಮುಗಿಸಿದ್ದೇವೆ. ಇನ್ನೂ ಕೆಲವೆಡೆ40 ಅಡಿ ನಿರ್ಮಾಣವಾದರೆ ಅದಕ್ಕೆ ಐಆರ್‌ಬಿಕಂಪನಿ ಜವಾಬ್ದಾರರಲ್ಲ. ರಾಜ್ಯ ಸರ್ಕಾರ ಭೂಮಿ ಮಂಜೂರು ಮಾಡಿದರೆ ಕೇಂದ್ರ ಸರ್ಕಾರ ಮತ್ತುಭೂಸಾರಿಗೆ ಮಂತ್ರಾಲಯ ಒಪ್ಪಿದರೆ ಈಗಲೂ ಜನಬಯಸಿದಂತೆ ರಸ್ತೆ ವಿಸ್ತರಿಸಬಹುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 60 ಅಡಿ ರಸ್ತೆಗೆ ಸಮೀಕ್ಷೆಯಾಗಿತ್ತು. ಮೂರೂ ತಾಲೂಕುಗಳಲ್ಲಿ ಮತ್ತು ಮಧ್ಯದ ಕೆಲವು ಹಳ್ಳಿಗಳಲ್ಲಿ ಬೇಕಾದ ಎಲ್ಲ ಸಮೀಕ್ಷೆ ಮಾಡಲಾಗಿತ್ತು. ನಂತರ 40 ಅಡಿಗೆ ಇಳಿಸುವ ಆದೇಶ ಬಂದ ಕಾರಣಇದ್ದುದರಲ್ಲಿಯೇ ಮುಗಿಸಿದ್ದೇವೆ ಎನ್ನುತ್ತಾರೆ ಐಆರ್‌ಬಿ ಅಧಿಕಾರಿಗಳು.

ಜಿಲ್ಲೆಯ ಎಲ್ಲ ನದಿಗಳಿಗೆ ಎರಡು ಸೇತುವೆಗಳಾಗಿದ್ದರೆ ಶರಾವತಿ ಹಳೆಯ ಸೇತುವೆ ಹಾಗೆಯೇ ಇದೆ. ರಸ್ತೆಯ ಬದಿಗೆ ಬಿದ್ದ ಮಣ್ಣು, ಅರ್ಧ ಕುಸಿದ ಧರೆ, ಎಲ್ಲೆಡೆ ಕಾಣುತ್ತದೆ. ಅಧಿಕಾರವಿರುವಾಗತಪ್ಪು ಮಾಡುವವರು ಕೆಲವರು, ಅಧಿಕಾರ ಇದ್ದರೂ ಸುಮ್ಮನಿರುವವರು ಇನ್ನೂ ಕೆಲವರು. ಎರಡೂ ಒಂದೇ. ಸುಲಭವಾಗಿ ಸಾಧ್ಯವಿದ್ದಾಗ ಮಾಡದ ಕೆಲಸವನ್ನುರಾಜಕಾರಣಿಗಳು ಈಗ ಮಾಡುತ್ತಾರೆಯೇ? ಜಿಲ್ಲೆಯ ಎಲ್ಲ ದೊಡ್ಡ ಯೋಜನೆಗಳ ಗತಿ ಹೀಗೇ ಆಗಿದೆ. ಅಮೂಲ್ಯ ಜಮೀನು, ಅಂಗಡಿ, ಮನೆ ಕಳೆದುಕೊಳ್ಳಲು ಎಲ್ಲರೂ ಸುಲಭವಾಗಿ ಒಪ್ಪುವುದಿಲ್ಲ. ಹಣ ಇದ್ದವರು ರಾಜಕಾರಣಿಗಳನ್ನು ಹಿಡಿದು ತಮ್ಮ ಹಿತ ಸಾಧಿಸಿಕೊಳ್ಳುತ್ತಾರೆ. ಇಡೀ ಸಮಾಜದ ಹಿತವನ್ನು ಗಮನಿಸುವವರು ಯಾರೂ ಇಲ್ಲ.

ತಾಕತ್ತಿಲ್ಲದವರು ಭೂಮಿ ಬಿಟ್ಟುಕೊಟ್ಟು ಸಿಕ್ಕ ಪರಿಹಾರದಲ್ಲಿ ತೃಪ್ತರಾಗಿದ್ದಾರೆ. ವಸ್ತುಸ್ಥಿತಿಯನ್ನು ಅರಿಯದೆ ಅಂದು ಅಧಿಕಾರಸ್ಥ ರಾಜಕಾರಣಿಗಳು ಕೆಲವರ ಒತ್ತಡಕ್ಕೆ ಮಣಿದು 40 ಅಡಿಗೆ ಮಿತಿಗೊಳಿಸುವ ಆದೇಶ ಹೊರಡಿಸುವಂತೆ ಮಾಡಿದರು. ಇದು ಜನಕ್ಕೆ ಗೊತ್ತಾಗಲೇ ಇಲ್ಲ. ಇಲ್ಲಿ ಹಲವು ಹೋರಾಟ ನಡೆಸಿದರು. ಕುಮಟಾದಲ್ಲಿ ಬೈಪಾಸ್‌ ಬೇಕು-ಬೇಡರಾಜಕೀಯ ನಡೆದು ಹೋಯಿತು. ಹೊನ್ನಾವರದಲ್ಲಿಮೇಲ್ಸೇತುವೆ ಸಮೀಕ್ಷೆ ಮುಗಿದು ಮಂಜೂರಾತಿಹಂತದಲ್ಲಿ ರಸ್ತೆ 40 ಅಡಿಗೆ ಮಿತಿಗೊಂಡಿತು. ಆಗಬೇರೆ ಪಕ್ಷ ಅಧಿಕಾರದಲ್ಲಿತ್ತು. ಈಗ ಆಡಳಿತದಲ್ಲಿದ್ದವರುಇದಕ್ಕೆ ಅಂದು ಅಧಿಕಾರದಲ್ಲಿದ್ದವರು ಕಾರಣ ಎಂದು ಆರೋಪ ಹೊರಿಸುತ್ತಿದ್ದಾರೆ.

ಆರೋಪ ಅಲ್ಲಗಳೆಯುತ್ತ ಅವರ ಶಿಷ್ಯರು ಅಧಿಕಾರ ಇದ್ದಾಗ ಅರ್ಜಿ ಕೊಡುತ್ತಾರೆ, ಹಾಗೆ ಕೊಟ್ಟಿರ ಬಹುದು,ಶಿಫಾರಸ್ಸು ಮಾಡಿರಬಹುದು ಅನ್ನುತ್ತಾರೆ. ಸರಿ ಈಗಆರೋಪ ಮಾಡುವವರು ಅಧಿಕಾರಕ್ಕೆ ಬಂದುಎರಡು ವರ್ಷಗಳಾದವು. ಸಂಸದರು, ಬಹುಪಾಲುಶಾಸಕರು ಈಗ ಒಂದೇ ಪಕ್ಷದಲ್ಲಿದ್ದಾರೆ. ಜನ ಇವರಎದುರು ಹಲವು ಬಾರಿ ಹೋರಾಡಿದರು, ಬಂದ್‌ಆಚರಿಸಲಾಯಿತು. ಮನವಿಗಳನ್ನು ಸ್ವೀಕರಿಸಿ ಭರವಸೆ ಕೊಟ್ಟಿದ್ದರ ಹೊರತಾಗಿ ಮೇಲಿನ ಮಟ್ಟದಲ್ಲಿ ಪತ್ರವ್ಯವಹಾರ ನಡೆಸಿ, ಅಗತ್ಯಬಿದ್ದರೆ ಕೇಂದ್ರ ಭೂಸಾರಿಗೆಸಚಿವ ನಿತಿನ್‌ ಗಡ್ಕರಿಯವರನ್ನು ಕಂಡು ಅವರತಪ್ಪನ್ನು ಇವರು ಸರಿಪಡಿಸಬಹುದಿತ್ತು. ಈಗ ಪರಸ್ಪರಆಪಾದನೆಯ ಪರ್ವ ನಡೆದಿದೆ.

Advertisement

ಮುಂದಿನ ದಿನಗಳಲ್ಲಿಅಪಾಯ ಎದುರಿಸುವವರು ಶ್ರೀಸಾಮಾನ್ಯರು ಮಾತ್ರ. ಮಂಗಳೂರಿನಿಂದ ಸುರತ್ಕಲ್‌, ಉಡುಪಿ, ಕುಂದಾಪುರ ಸಹಿತ ಎಲ್ಲ ತಾಲೂಕು ಕೇಂದ್ರ ಹಾಯ್ದು ಹೋಗುವಲ್ಲಿ,ಬೇಕಾದಲ್ಲಿ ಮೇಲ್ಸೇತುವೆಗಳಿವೆ. ಎಲ್ಲೆಡೆ ಸರ್ವಿಸ್‌ರಸ್ತೆಗಳಿವೆ. 60 ಅಡಿ ಹೆದ್ದಾರಿ ನಿರ್ಮಾಣವಾಗಿದೆ.ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಹೆದ್ದಾರಿಯ ಬದಿಗೆ ಹೇರಳ ಅಮೂಲ್ಯ ಆಸ್ತಿಗಳಿದ್ದವು, ದೇವಸ್ಥಾನ, ಚರ್ಚ್‌, ಮಸೀದಿಗಳಿದ್ದವು. ಚತುಷ್ಪಥಕ್ಕೆ ಬೈಪಾಸ್‌ ಮಾಡಿ ಎಂಬ ಬೇಡಿಕೆಯೂ ಇತ್ತು.

ಕೆಲವರು ತಮ್ಮಆಸ್ತಿ ಉಳಿಸಿಕೊಳ್ಳಲು ಅಲ್ಲಿಂದ ದಿಲ್ಲಿಯತನಕ ಓಡಾಡಿ ಕಾಂಗ್ರೆಸ್‌ನ ಆಸ್ಕರ್‌ ಫರ್ನಾಂಡೀಸ್‌, ಬಿಜೆಪಿಯ ವಿ.ಎಸ್‌. ಆಚಾರ್ಯ ಸಹಿತ ಎಲ್ಲ ಮುಖಂಡರುವ ಶೀಲಿಯನ್ನು ಕಳೆದುಕೊಳ್ಳುವವರೂ ಮಾಡಿದರು, ಕಳೆದುಕೊಳ್ಳದವರೂ ಮಾಡಿದರು. ಅಲ್ಲಿಯ ರಾಜಕಾರಣಿಗಳೆಲ್ಲ ಒಂದೇ ನಿಲುವಿಗೆ ಬದ್ಧರಾದಕಾರಣ ಅಲ್ಲಿ ಚತುಷ್ಪಥ ಯೋಜನೆಯಂತೆ ಮುಗಿದಿದೆ.  ಊರು ಸೂರೆಹೋದ ಮೇಲೆ ದಿಡ್ಡಿಬಾಗಿಲುಹಾಕಿದಂತೆ ಈಗ ರೋದಿಸಿ ಪ್ರಯೋಜನವಿಲ್ಲ,ಆರೋಪ ಪ್ರತ್ಯಾರೋಪಗಳಿಗೆ ಅರ್ಥವಿಲ್ಲ. ಒಟ್ಟಾರೆ ಜನ ಅನುಭವಿಸುವುದು ತಪ್ಪುವ ಕಾಲ ಬಂದಿಲ್ಲ

 

-ಜೀಯು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next