Advertisement

ಪ್ಲಾಸ್ಟಿಕ್‌ ತ್ಯಾಜ್ಯದಿಂದ ರಸ್ತೆ ನಿರ್ಮಾಣ

10:17 PM Sep 21, 2019 | mahesh |

ನಗರೀಕರಣ ಅದೆಷ್ಟು ಅಪ್ಡೆಟ್‌ ಆದರೂ ಪರವಾಗಿಲ್ಲ ಆದರೆ ಅದರ ಮತ್ತೂಂದು ಮುಖದ ಹಾನಿಯನ್ನು ಗಂಭೀರವಾಗಿ ಪರಿಗಣಿಸದೆ ಹೋದಲ್ಲಿ ಸಮಸ್ಯೆ ಖಂಡಿತ ತಪ್ಪಿದಲ್ಲ. ಸದ್ಯ ಕಾಣುತ್ತಿರುವ ನಮ್ಮ ನಗರದ ಬೆಳವಣಿಗೆಯ ವೇಗ, ಮುಂದೊಂದು ದಿನ ಗಂಭೀರವಾದಂತಹ ಸಮಸ್ಯೆ ಎದುರಿಸಬೇಕಾದಿತು ಎನ್ನುವುದು ವಾಸ್ತವದ ವಾತಾವರಣ ಭವಿಷ್ಯ ಹೇಳುತ್ತಿವೆ. ನಗರ ತನ್ನೊಳಗಿನ ಬೆಳವಣಿಗೆಯ ಜತೆ ಜತೆಗೆ ನಾನಾ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿವೆ. ಇಂತಹ ಸಮಸ್ಯೆಗಳಲ್ಲಿ ಈ ಪ್ಲಾಸ್ಟಿಕ್‌ ಭೂತ ಕೂಡ ಒಂದು. ಈ ಪ್ಲಾಸ್ಟಿಕ್‌ ಜನರ ನಿತ್ಯ ಜೀವನದಲ್ಲಿ ಒಂದಾಗಿದೆ ಅನ್ನುವುದಂತು ಸತ್ಯ. ಆದರೆ ಬೆಟ್ಟದಂತೆ ಬೆಳೆಯುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯ ಅಪಾಯಕಾರಿ. ಸದ್ಯ ಈ ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆಗೆ ಕೆಲವೊಂದು ನಗರಗಳು ವಿಭಿನ್ನವಾಗಿ ಪರಿಹಾರಗಳನ್ನು ಕಂಡುಕೊಂಡಿವೆ. ಯಾವ ರೀತಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರು ಬಳಕೆ ಮಾಡಬಹುದು ಎಂಬುದನ್ನು ಯೋಚಿಸಿದೆ. ಈ ಯೋಚನೆಯಲ್ಲಿ ತಯಾರಿಗಿದ್ದು ಪ್ಲಾಸ್ಟಿಕ್‌ ರೋಡ್‌.

Advertisement

ಏನಿದು ಈ ಪ್ಲಾಸ್ಟಿಕ್‌ ರೋಡ್‌
ಈ ಪ್ಲಾಸ್ಟಿಕ್‌ ರಸ್ತೆಗಳು ಪ್ಲಾಸ್ಟಿಕ್‌ ಮತ್ತು ಇತರ ವಸ್ತುಗಳ ಸಂಯೋಜನೆಯಿಂದ ತಯಾರಿಸಲಾಗುತ್ತದೆ. ಖನಿಜ ಸಮುಚ್ಚಯಗಳು ಮತ್ತು ಡಾಂಬರುಗಳನ್ನು ಒಳಗೊಂಡಿರುವ ಕಾಂಕ್ರೀಟ್‌ನಿಂದ ಗುಣಮಟ್ಟದ ರಸ್ತೆಗಳನ್ನು ತಯಾರಿಸಲಾಗುತ್ತದೆ . ಪ್ಯಾಕೇಜಿಂಗ್‌ನಲ್ಲಿ ಬಳಸುವ ಕೆಲವು ಸಾಮಾನ್ಯ ಪ್ಲಾಸ್ಟಿಕ್‌ಗಳನ್ನು ಪಾಲಿಥಿಲೀನ್‌, ಪಾಲಿವಿನೈಲ್‌ ಕ್ಲೋರೈಡ್‌, ಪಾಲಿಪೊ›ಪಿಲೀನ್‌ ಮತ್ತು ಹೆಚ್ಚಿನ ಮತ್ತು ಕಡಿಮೆ ಸಾಂದ್ರತೆಯ ಪಾಲಿಥಿಲೀನ್‌ ವಸ್ತುಗಳನ್ನು ಮೊದಲು ಪ್ಲಾಸ್ಟಿಕ್‌ ತ್ಯಾಜ್ಯದಿಂದ ವಿಂಗಡಿಸಲಾಗುತ್ತದೆ. ವಿಂಗಡಿಸಿದ ಅನಂತರ ವಸ್ತುಗಳನ್ನು ಸ್ವತ್ಛಗೊಳಿಸಿ, ಒಣಗಿಸಿ, ಚೂರು ಚೂರು ಮಾಡಲಾಗುತ್ತದೆ. ಚೂರು ಚೂರು ಮಾಡಿದ ಪ್ಲಾಸ್ಟಿಕ್‌ ಅನ್ನು ಬೆರೆಸಿ ಕರಗಿಸಲಾಗುತ್ತದೆ. ಅನಂತರ ಬಿಸಿ ಬಿಟುಮೆನ್‌ ಅನ್ನು ಸೇರಿಸಲಾಗುತ್ತದೆ ಮತ್ತು ಕರಗಿದ ಪ್ಲಾಸ್ಟಿಕ್‌ನೊಂದಿಗೆ ಬೆರೆಸಲಾಗುತ್ತದೆ.

ಮಿಶ್ರಣವನ್ನು ಬೆರೆಸಿದ ಸಾಮಾನ್ಯ ಕಾಂಕ್ರೀಟ್‌ನೊಂದಿಗೆ ಮಿಶ್ರಣ ಮಾಡಿ ಹಾಕಲಾಗುತ್ತದೆ. ಈ ಮಿಶ್ರಣದ ಮೂಲಕ ಹೊಸ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಇದು ಪ್ಲಾಸ್ಟಿಕ್‌ ತ್ಯಾಜ್ಯದ ಮರುಬಳಕೆಗೆ ಕಂಡುಕೊಂಡ ಮಾರ್ಗ.

ಮಂಗಳೂರಿಗೂ ಅಗತ್ಯ
ನಗರೀಕರಣದ ಪ್ರಭಾವದ ಒತ್ತಡದಿಂದ ಹೊಸ ಹೊಸ ಸಂಪರ್ಕ ಮಾರ್ಗ ನಿರ್ಮಾಣದ ಬೇಡಿಕೆ ಇರುವಾಗ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯದ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತಿರುವಾಗ ಈ ರೀತಿಯ ಪರ್ಯಾಯ ಮಾರ್ಗಗಳು ನಗರಕ್ಕೆ ಬಂದರೆ ಒಳ್ಳೆಯದು. ಇಂತಹ ನೂತನ ಕಲ್ಪನೆಗಳ ಜೋಡಿಸುವಿಕೆಗೆ ಇಲ್ಲಿನ ನಗರಾಡಳಿತ ಮಂಡಳಿಯವರು ಚಿಂತಿಸಬೇಕಾಗಿದೆ.

ಯಾವ ದೇಶಗಳಲ್ಲಿವೆ?
ಆಸ್ಟ್ರೇಲಿಯಾ, ಇಂಡೋನೇಷ್ಯಾ, ಭಾರತ, ಯುಕೆ, ಯುಎಸ್‌ ಮತ್ತು ಹಲವು ದೇಶಗಳು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಡಾಂಮರು ಮಿಶ್ರಣಕ್ಕೆ ಸೇರಿಸಿಕೊಳ್ಳುವ ತಂತ್ರಜ್ಞಾನವನ್ನು ಬಳಸಿಕೊಂಡಿವೆ.

Advertisement

ಪ್ಲಾಸ್ಟಿಕ್‌ ರೋಡ್‌ನ‌ ಉಪಯೋಗ
· ತ್ಯಾಜ್ಯ ಪ್ಲಾಸ್ಟಿಕ್‌ನ ಮರುಬಳಕೆ.
· ಕಡಿಮೆ ಡಾಂಮರು ಬಳಸುವುದರಿಂದ ವೆಚ್ಚ ಮತ್ತು ಸಂಪನ್ಮೂಲದ‌ ಉಳಿತಾಯ
· ಕಾಂಕ್ರೀಟ್‌ ರಸ್ತೆಗಳಿಗಿಂತ ಉತ್ತಮ ಪ್ರತಿರೋಧವನ್ನು ಹೊಂದಿವೆ. ಉದಾ: ನೀರನ್ನು ಹೀರಿಕೊಳ್ಳುವುದಿಲ್ಲ,
· ಕಡಿಮೆ ಮಟ್ಟದ ದುರಸ್ತಿ ಅಗತ್ಯ.

-   ವಿಶ್ವ

Advertisement

Udayavani is now on Telegram. Click here to join our channel and stay updated with the latest news.

Next