Advertisement

ರಸ್ತೆಗೆ ತೆಗ್ಗುತೋಡಿ ಸಂಚಾರ ಬಂದ್ : “ಮಹಾ’ಜನ ಕಳ್ಳಮಾರ್ಗಗಳಲ್ಲಿ ಬಾರದಂತೆ ಕ್ರಮ­’

04:29 PM Apr 28, 2021 | Team Udayavani |

ಕಾಗವಾಡ: ರಾಜ್ಯದ ಗಡಿಗ್ರಾಮಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಬಾರದೆಂದು ತಹಶೀಲ್ದಾರ್‌ ಪ್ರಮೀಳಾ ದೇಶಪಾಂಡೆ, ಪಿಎಸ್‌ಐ ಹನುಮಂತ ಧರ್ಮಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ಗಡಿ ಗ್ರಾಮಗಳನ್ನು ಸಂಪರ್ಕಿಸುವ 3 ಮುಖ್ಯ ಮಾರ್ಗಗಳು ಹಾಗೂ 4 ಉಪಮಾರ್ಗಗಳಲ್ಲಿ ತೆಗ್ಗುತೋಡಿ, ಮುಳ್ಳುಕಂಟಿ ಹಾಕಿಸಿ ಸಂಚಾರ ಸ್ಥಗಿತಗೊಳಿಸಿದ್ದಾರೆ.

Advertisement

ಬೆಳಗಾವಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯ ಸಂಪರ್ಕಿಸುವ ಎಲ್ಲ ಮಾರ್ಗಗಳನ್ನು ಬಂದ್‌ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ.

ಈಗಾಗಲೇ ಕಾಗವಾಡ-ಮಿರಜ, ಕಾಗವಾಡ-ಗಣೇಶವಾಡಿ, ಮಂಗಸೂಳಿ- ಅರಗ ಮಾರ್ಗಗಳಲ್ಲಿ ಚೆಕ್‌ಪೋಸ್ಟ್‌ ಪ್ರಾರಂಭಿಸಿ ಸಂಚಾರಿಸುವ ಎಲ್ಲ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ. ಗಡಿಗ್ರಾಮಗಳಿಗೆ ಸಂಪರ್ಕಿಸುವ ಉಪ ಮಾರ್ಗಗಳಾದ ಜುಗೂಳ-ರಾಜಾಪುರ, ಮಂಗಾವತಿ- ಅಲಾಸ, ಲೋಕುರ-ನರವಾಡ, ಕಾಗವಾಡ- ನರವಾಡ, ಮಂಗಸೂಳಿ-ಶಿಂದೆವಾಡಿ ಈ ಮಾರ್ಗಗಳ ಮಧ್ಯೆ ತೆಗ್ಗು ತೋಡಿ ಮುಳ್ಳುಕಂಟಿ ಹಾಕಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next