Advertisement
ಮಾರುಕಟ್ಟೆ ಎದುರು ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ಸ್ಥಳಕ್ಕೆ ನಗರಸಭಾ ಆಯುಕ್ತರು ಆಗಮಿಸುವಂತೆ ಒತ್ತಾಯಿಸಿದರು.
Related Articles
Advertisement
ಕಳಪೆ ಮಟ್ಟದ ಕಾಮಗಾರಿಈ ಹಿಂದೆ ರಸ್ತೆಯನ್ನು ತರಾತುರಿಯಲ್ಲಿ ಕಾಂಕ್ರಿಟೀಕರಣಗೊಳಿಸಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ. ನಡೆದಿರುವ ಕಾಮ ಗಾರಿ ಕೂಡ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದ ಅವರು, ಇಂಟರ್ ಲಾಕ್ ಮತ್ತು ಚರಂಡಿಗೆ ಸ್ಲಾಬ್‌ನ್ನು ಅಳವಡಿಸುವ ಕಾರ್ಯಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕರಿಗೆ ಹಾಗೂ ಆಟೋ ಚಾಲಕರಿಗೆ ರಸ್ತೆ ಅವ್ಯವಸ್ಥೆಯಿಂದ ತೊಂದರೆ ಉಂಟಾಗಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದರು. ಸ್ಥಳಕ್ಕೆ ಆಗಮಿಸಿದ ನಗರಸಭಾ ಅಭಿಯಂತರರಾದ ವನಿತಾ ಹಾಗೂ ಗೋಪಾಲಯ್ಯ ಸ್ಥಳ ಪರಿಶೀಲಿಸಿ, ಒಂದು ವಾರದಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಮಡಿಕೇರಿ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ರವಿಗೌಡ, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ದಾವುದ್, ಕಾರ್ಯದರ್ಶಿ ಹುಸೇನ್, ಮಡಿಕೇರಿ ಮಾರುಕಟ್ಟೆ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅಭಿಮಾನಿ ಸಂಘದ ಮುನೀರ್ ಮಾಚರ್, ಸವಿತಾ ರಾಕೇಶ್, ಪ್ರಭು ರೈ, ಕಲೀಲ್, ಅಮೀನ್ ಮೊಹಿಸಿನ್ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು