Advertisement

ಬೆಳೆ ಪರಿಹಾರಕ್ಕಾಗಿ ಒತ್ತಾಯಿಸಿ ರಸ್ತೆ ತಡೆ

10:22 AM Oct 15, 2019 | Suhan S |

ಅಫಜಲಪುರ: ಅತಿ ವೃಷ್ಟಿಯಿಂದಾಗಿ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿದೆ. ನೂರಾರು ಸಾವು ನೋವುಗಳಾಗಿವೆ. ಮನೆ, ಆಸ್ತಿ ಕಳೆದುಕೊಂಡು ಜನ ಬೀದಿ ಪಾಲಾಗಿದ್ದಾರೆ. ಸರ್ಕಾರ ಆದಷ್ಟು ಬೇಗ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ತುಂಬಿ ಹರಿಯುತ್ತಿರುವ ಭೀಮಾ ನದಿಯಿಂದ ತಾಲೂಕಿನ ಕೆರೆ ತುಂಬಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್‌ ತಾಲೂಕು ಘಟಕದಿಂದ ರಸ್ತೆ ತಡೆ ನಡೆಸಲಾಯಿತು.

Advertisement

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಮಾತನಾಡಿದ ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜು ಬಡದಾಳ, ಭೀಮಾ ನದಿ ತುಂಬಿದೆ. ಆದರೆ ಅದು ಉಪಯೋಗಕ್ಕೆ ಬಾರದಂತಾಗಿದೆ. ಇನ್ನೊಂದು ಕಡೆ ಸಮರ್ಪಕ ಮಳೆಯಾಗದೆ ಕೆರೆ ಕುಂಟೆಗಳೆಲ್ಲ ಖಾಲಿಯಾಗಿವೆ. ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಭೀಮಾ ನದಿ ನೀರನ್ನು ತಾಲೂಕಿನ ಕೆರೆಗಳಿಗೆ ತುಂಬಿಸುವ ಕೆಲಸ ಮಾಡಬೇಕು. ಅಲ್ಲದೆ ನದಿ ಪ್ರವಾಹದಿಂದ ಬೆಳೆ ಹಾಳಾಗಿದ್ದರಿಂದ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್‌ ಮಧುರಾಜ್‌ ಕೂಡಲಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಸುನೀಲ ಹೊಸ್ಮನಿ, ಹಣಮಂತ ಬಿರಾದಾರ, ಸಂಜು ಕೋಳಿಗೇರಿ, ಗುಂಡುರಾವ್‌ ಬಂದರವಾಡ, ಅಸ್ಲಂ ನಗರಚಿ, ರಾಜು ಬಂದರವಾಡ, ಶರಣು ಸೂಲೇಕರ, ವಾಸುದೇವ ದೊಡ್ಮನಿ, ಶಿವು ಮಲ್ಲಾಬಾದ, ಪ್ರಕಾಶ ಕಲ್ಯಾಣಿ, ಕುಮಾರಸ್ವಾಮಿಮಠ, ಹರಿಸಿಂಗ ರಾಠೊಡ, ರಮೇಶ ರಾಠೊಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next