Advertisement

ದೇವಪುರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ

05:09 PM Feb 05, 2022 | Team Udayavani |

ಸುರಪುರ: ಗಣರಾಜ್ಯೋತ್ಸವದಂದು ಡಾ| ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ (ಡಾ| ಡಿ.ಜಿ. ಸಾಗರ ಬಣ) ಶುಕ್ರವಾರ ದೇವಪುರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

Advertisement

ಬಳಿಕ ಸಮಿತಿ ಮುಖಂಡರು ಮಾತನಾಡಿ, ರಾಯಚೂರು ಜಿಲ್ಲಾ ನ್ಯಾಯಾಧೀಶರು ಸಂವಿಧಾನ ಶಿಲ್ಪಿ ಮತ್ತು ನ್ಯಾಯಪೀಠಕ್ಕೆ ಅವಮಾನ ಮಾಡಿದ್ದಾರೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ದ್ರೋಹವೆಸಗಿದಂತಾಗಿದೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಜಿಲ್ಲಾ ನ್ಯಾಯಾಧೀಶರ ಮೇಲೆ ರಾಷ್ಟ್ರ ದ್ರೋಹ, ಎಸ್ಸಿ-ಎಸ್ಟಿ ಜಾತಿ ನಿಂದನೆ ಪ್ರಕರಣ ದಾಖಲಿಸಿ ಸೇವೆಯಿಂದ ವಜಾಗೊಳಿಸಿ, ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ನಂತರ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪರ, ತಾಲೂಕು ಸಂಚಾಲಕ ವೀರಭದ್ರಪ್ಪ ದೊಡ್ಡಮನಿ, ತಿಪ್ಪಣ್ಣ ಶೆಳ್ಳಗಿ, ಚನ್ನಬಸಪ್ಪ ತಳವಾರ, ಬಸವರಾಜ ಜಾನಕರ, ಎಂ.ಪಟೇಲ್‌, ಶೇಖರ ಮಂಗಳೂರು, ಖಾಜಾ ಅಜ್ಮಿàರ್‌, ಮರಲಿಂಗ ಗುಡಿಮನಿ, ಬಾಲರಾಜ, ಮಾನಪ್ಪ ಶೆಳ್ಳಗಿ, ವೆಂಕಟೇಶ ದೇವಪುರ, ಹಸನಪ್ಪ ದೇವಪುರ, ಮೌನೇಶ ತಳವಾರ, ದೇವಪ್ಪ, ಭೀಮಾಶಂಕರ, ಭೀಮಣ್ಣ, ಅಯ್ಯಪ್ಪ, ಪರಶುರಾಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next