ತಿಪಟೂರು: ಎತ್ತಿನಹೊಳೆ ಯೋಜನೆಯಡಿ ತಿಪಟೂರು ತಾಲೂಕಿಗೆ ನೀರು ಹಂಚಿಕೆಗೆ ಆಗ್ರಹಿಸಿ ಜೂ.10ರಂದು ರಸ್ತೆ ತಡೆ ಚಳುವಳಿಗೆ ರಾಜ್ಯ ರೈತ ಸಂಘ ಕರೆ ನೀಡಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ದೇವರಾಜ್ ತಿಳಿಸಿದರು.
ರೈತಭವನದಲ್ಲಿ ವಿವಿಧ ಸಂಘಟನೆಗಳ ನೇತೃತ್ವ ದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿದ ಅವರು, ಕಲ್ಪತರು ನಾಡು ತೀವ್ರ ಬರಗಾಲದಿಂದ ತೊಂದರೆಪಡುತ್ತಿದ್ದು, ರೈತರು ತೋಟ ಉಳಿಸಿಕೊಳ್ಳಲು ಸಾವಿರಾರು ಅಡಿಗಳ ಕೊಳವೆ ಬಾವಿಗಳನ್ನು ಕೊರೆಯಿಸಿ ಈಗ ಸಾಲಗಾರರಾಗಿದ್ದಾರೆ ಎಂದು ವಿಷಾದಿಸಿದರು.
ಎತ್ತಿನಹೊಳೆಯಿಂದ ತಾಲೂಕಿಗೆ ಹನಿ ನೀರು ನೀಡದೆ ರೈತರ ಗಾಯಕ್ಕೆ ಬರೆ ಎಳೆಯ ಲಾಗಿದೆ. ಅಲ್ಲದೆ ಯೋಜನೆಗೆ ಸಂಬಂಧ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ತಾಲೂಕಿನ ರೈತರನ್ನು ಒಕ್ಕಲೆಬ್ಬಿಸುತ್ತಿದ್ದು, ಮಾರುಕಟ್ಟೆ ದರದ ಪರಿಹಾರ ನಿಗದಿ ಮಾಡದೆ ರೈತರ ಬದು ಕನ್ನು ಸರ್ಕಾರ ಅವನತಿಗೆ ತಳ್ಳುತ್ತಿದೆ ಎಂದು ಆರೋಪಿಸಿದರು.
ದಕ್ಷಿಣ ಒಳನಾಡು ನೀರಾವರಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ, ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಹಾದು ಹೋಗುತ್ತಿರುವ ಎತ್ತಿನಹೊಳೆ ಯೋಜನೆಯಲ್ಲಿ ತಾಲೂಕಿನ ಯಾವ ಕೆರೆಗೂ ನೀರು ಹಂಚಿಕೆಯಾಗ ದಿರುವುದು ನೋವಿನ ಸಂಗತಿಯಾಗಿದೆ. ಪಕ್ಕದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸುಮಾರು 34 ಸಣ್ಣ ನೀರಾವರಿ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಡಿ ನೀರು ಒದಗಿಸಲು ವಿಶೇಷ ಆದ್ಯತೆ ಮೇರೆಗೆ ಹೊಳೆನೀರು ಹಂಚಿಕೆ ಮಾಡ ಲಾಗಿದೆ. ಜೊತೆಗೆ ತಿಪಟೂರು ತಾಲೂಕಿನ ಭಾಗದಲ್ಲಿ ಯೋಜನಾ ನಿರಾಶ್ರಿತ ಪ್ರದೇಶಗಳಲ್ಲಿ ಬರುವ ಜಲಾ ನಯನ ಪ್ರದೇಶಗಳು ಹಾಗೂ ಅನೇಕ ಕೆರೆಗಳು, ನೈಸರ್ಗಿಕ ಮಳೆ ನೀರು ಹರಿವಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತಿದ್ದರೂ, ಅಂತಹ ಜಲಕಾಯಗಳಿಗೂ ನೀರು ಹಂಚಿಕೆ ಮಾಡದಿರುವುದನ್ನು ನೋಡಿದರೆ ಯೋಜನ ಅನುಷ್ಠಾನದಲ್ಲಿ ತಾಲೂಕನ್ನು ನಿರ್ಲಕ್ಷಿಸ ಲಾಗಿದೆ. ಇದರಿಂದ ಭವಿಷ್ಯದಲ್ಲಿ ಜನ, ಜಾನು ವಾರು, ಜೀವವೈವಿಧ್ಯತೆ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಹಾಗೂ ಎತ್ತಿನಹೊಳೆ ಯೋಜನೆಯ ಭೂ ಸಂತ್ರಸ್ತ ಸಮಿತಿಯ ಅಧ್ಯಕ್ಷ ಮನೋರ್ ಪಟೇಲ್, ರೈತ ಸಂಘ ತಿಪಟೂರು ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ರೈತ ಸಂಘದ ಕಸಬಾ ಹೋಬಳಿ ಅಧ್ಯಕ್ಷ ಬೇಲೂರನಳ್ಳಿ ಷಡಕ್ಷರಿ, ಜಗದೀಶ, ಟಿ.ಎಸ್.ನಂಜಾಮರಿ ಹಾಗೂ ಹಸಿರು ಸೇನೆಯ ತಾಲೂಕು ಅಧಕ್ಷ ದೇವರಾಜ್ ತಿಮ್ಮಲಾ ಪುರ, ಸಿಐಟಿಯುನ ಅಲ್ಲಾ ಬಕಾಶ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಸಂಗಮೇಶ್ ಮಾರನಗೆರೆ, ಜಾಗೃತಿ ಸಂಘದ ರೇಣುಕಾರಾಧ್ಯ, ಜನಸ್ಪಂದನ ಟ್ರಸ್ಟ್‌ನ ಶಶಿಧರ್ ಸಿ.ಬಿ. ಭೂಮಿ ಸಂಸ್ಥೆಯ ಸತೀಶ್ ತಿಪಟೂರು, ಪರಿಸರವಾದಿ ನಿಸರ್ಗ ಮುರಳೀಧರ್, ಮುಖಂಡರಾದ ಸೈಯದ್ ಮೆಹಮೂದ್, ಮಹಮದ್ ಗೌಸ್, ಮೋಹಿನ್ ಖಾನ್, ಪ್ರಾಂತ್ಯ ರೈತ ಸಂಘದ ಚನ್ನಬಸವಣ್ಣ, ರಾ.ಹೆ. 206 ಹಾಗೂ ಎತ್ತಿನಹೊಳೆ ಭೂ ಸಂತ್ರಸ್ತ ಹೋರಾಟ ಸಮಿತಿಯ ರಂಗಧಾಮಯ್ಯ ಗೋಪಾಲಣ್ಣ, ಮಾರುಗೊಂಡನ ಹಳ್ಳಿ ದಯಾನಂದ್ ಹಾಗೂ ಇತರರು ಇದ್ದರು.