Advertisement

ತಗ್ಗು ತೆಗೆದು ಮಹಾ ರಸ್ತೆ ಬಂದ್

08:18 PM Mar 25, 2021 | Team Udayavani |

ಸಂಬರಗಿ : ಪಕ್ಕದ ಮಹಾರಾಷ್ಟ್ರದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಅಥಣಿ ಭಾಗದ ಗ್ರಾಮಗಳಲ್ಲಿ ಗ್ರಾಮಸ್ಥರು ಮುಂದಾಗಿ ರಸ್ತೆಯಲ್ಲಿ ಗುಂಡಿ ತೆಗೆದು ವಾಹನ ಸಂಚಾರ ಸ್ಥಗಿತಗೊಳಿಸಿ ನೆರೆ ರಾಜ್ಯದಿಂದ ಜನರು ಬಾರದಂತೆ ತಡೆದಿದ್ದಾರೆ.

Advertisement

ಗ್ರಾಮಸ್ಥರು ಮುಂದಾಗಿ ಮಹಾರಾಷ್ಟ್ರದ ಎಲ್ಲ ಸಂಪರ್ಕ ರಸ್ತೆಗಳಲ್ಲಿ ಗುಂಡಿ ತೆಗೆದು ರಸ್ತೆ ಸಂಚಾರ ಬಂದ್‌ ಮಾಡಿದ್ದಾರೆ. ಮದಭಾವಿ-ಖಟಾಂವಿ, ಮದಭಾವಿ -ಜಾನರವಾಡಿ, ಅರಳಿಹಟ್ಟಿ-ಸಲಗರ, ಬೊಮ್ಮನಾಳ-ಸಲಗರ ಸೇರಿದಂತೆ ಗಡಿ ಸಂಪರ್ಕ ರಸ್ತೆಗಳು ಈಗಾಗಲೇ ಬಂದ್‌ ಆಗಿವೆ. ಕೆಲವೆಡೆ ಒಳ ರಸ್ತೆಗಳಲ್ಲಿ ಹಗಲು ರಾತ್ರಿ ಗ್ರಾಮಸ್ಥರೇ ಕಾವಲು ಕಾಯುತ್ತಿದ್ದಾರೆ. ಈ ಕುರಿತು ಕರ್ನಾಟಕ ರಕ್ಷಣಾ ವೇದಿ ಕೆ ಅಧ್ಯಕ್ಷ ಪ್ರತಿಕ್ರಿಯೆ ನೀಡಿ ಕಳೆದ ವರ್ಷ ಪ್ರಾರಂಭಿಸಿದಷ್ಟೇ ಸಂಖ್ಯೆಯಲ್ಲಿ ಈಗ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಬೇಕು. ಗಡಿಯಲ್ಲಿ ಕೊರೊನಾ ನೆಗೆಟಿವ್‌ ಪ್ರಮಾಣಪತ್ರದ ಕಟ್ಟುನಿಟ್ಟಿನ ಪರಿಶೀಲನೆಯಾಗಬೇಕು.

ಕೊರೊನಾ ನಿರ್ಮೂಲನೆಯಾಗುವವರೆಗೆ ಜಾತ್ರೆ, ಸಭೆ, ಸಮಾರಂಭಗಳನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು. ಅಥಣಿ ಗ್ರೇಡ್‌-2 ತಹಶೀಲ್ದಾರ ಎಮ್‌. ವ್ಹಿ. ಬಿರಾದಾರ ಅವರನ್ನು ಸಂಪರ್ಕಿಸಿದಾಗ, ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಅವಶ್ಯವಿದ್ದಲ್ಲಿ ಚೆಕ್‌Rಪೋಸ್ಟ್‌ ಪ್ರಾರಂಭ ಮಾಡಿದ್ದೇವೆ. ಪ್ರತಿಯೊಬ್ಬರ ಪರಿಶೀಲನೆ ಮಾಡಿ ಕರ್ನಾಟಕಕ್ಕೆ ಪ್ರವೇಶ ನೀಡುತ್ತಿದ್ದೇವೆ. ಪ್ರಮಾಣಪತ್ರ ಇಲ್ಲವಾದರೆ ಮರಳಿ ಮಹಾರಾಷ್ಟ್ರಕ್ಕೆ ಕಳುಹಿಸುತ್ತಿದ್ದೇವೆ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next