Advertisement

ಬೇಡಿಕೆ ಈಡೇರಿಕೆಗಾಗಿ ರಸ್ತೆ ತಡೆ

11:11 AM Jul 16, 2019 | Suhan S |

ಹೊಸಪೇಟೆ: ಅಟೋ ಚಾಲಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಆಟೋ ಸಂಘ ಮತ್ತು ವಿಜಯನಗರ ಆಟೋ ಚಾಲಕರ ಸಂಘ ಹಾಗೂ ತುಂಗಭದ್ರಾ ಆಟೋ ಚಾಲಕರ ಸಂಘಗಳ ನೇತೃತ್ವದಲ್ಲಿ ನೂರಾರು ಆಟೋ ಚಾಲಕರು ಸೋಮವಾರ ನಗರದ ರೋಟರಿ ವೃತ್ತದ ರಸ್ತೆ ತಡೆದು ಪ್ರತಿಭಟನೆ ಮಾಡಿದರು.

Advertisement

15 ವರ್ಷದ ವಾಹನಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರಿಂದ ಬಡ ಆಟೋ ಚಾಲಕ ಹಾಗು ಮಾಲೀಕರಿಗೆ ವಿಪರೀತ ತೊಂದರೆಯಾಗುತ್ತಿದೆ. ಕಾರಣ ಹೊಸ ಆಟೋ ಖರೀದಿಗೆ ಹಣಕಾಸಿನ ನೆರವು ನೀಡಬೇಕು, ಆಟೋ ರಿಕ್ಷಾಗಳ ಮೇಲಿನ ವಿಮೆ ದರವನ್ನು ಕಡಿತ ಮಾಡಬೇಕು. ಚಾಲಕರಿಗೆ ನಗರಸಭೆ ವತಿಯಿಂದ ಎಸ್ಸಿ-ಎಸ್ಟಿ ನಿಗಮ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ನೀಡಲು ಕ್ರಮ ವಹಿಸಬೇಕು. ಸುಪ್ರೀಂ ಕೋರ್ಟ್‌ನ ಆದೇಶದಂತೆ 7500 ಕೆಜಿ ತೂಕದ ವಾಹನಗಳಿಗೆ ಲೈಸೆನ್ಸ್‌ ಬ್ಯಾಡ್ಜ್ ಕಡ್ಡಾಯ ಇರುವುದಿಲ್ಲ. ರಾಜ್ಯದಲ್ಲೂ ಈ ನೀತಿ ಜಾರಿಯಾಗಬೇಕು ಎಂಬ ಬೇಡಿಕೆಗಳಿಗೆ ಪ್ರಧಾನಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ ಎಚ್.ವಿಶ್ವನಾಥ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆಟೋ ಚಾಲಕರ ಮುಖಂಡರಾದ ಕೃಷ್ಣ, ಸಂತೋಷ, ಗೋಪಾಲ, ರಾಮಚಂದ್ರ, ಭಾಸ್ಕರ್‌ ರೆಡ್ಡಿ, ಈ. ಸಿದ್ಧಲಿಂಗ, ಬಸವರಾಜ, ಚಂದ್ರಶೇಖರ್‌, ಶ್ರೀನಿವಾಸ್‌ ಸೇರಿದಂತೆ ನೂರಾರು ಅಟೋಚಾಲಕರು ಪ್ರತಿಭಟನೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next