ಮುಂಬಯಿ: 2019ರ ಮೊದಲ ತ್ತೈಮಾಸಿಕ ಅವಧಿಯಲ್ಲಿ ರಾಜ್ಯಾದ್ಯಂತ ಸಂಭವಿಸಿದ ಒಟ್ಟು 9,096 ಅಪಘಾತಗಳಲ್ಲಿ, ಕೇವಲ ಮುಂಬಯಿ ರಸ್ತೆಗಳಲ್ಲಿ ಅತೀ ಹೆಚ್ಚು ಸಂಖ್ಯೆಯ ಅಪಘಾತಗಳು ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ನಗರದಲ್ಲಿ 99 ಮಂದಿ ಸಾವು
ಅದರಲ್ಲೂ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದ ಪಕ್ಷದಲ್ಲಿ ರಸ್ತೆ ಸಾವುಗಳಲ್ಲಿ ಶೇ. 20ರಷ್ಟು ಕುಸಿತ ಕಂಡುಬಂದಿದೆ ಎಂದು ರಾಜ್ಯ ರಸ್ತೆ ಅಪಘಾತದ ಅಂಕಿ ಅಂಶಗಳು ತಿಳಿಸಿವೆ. ಮುಂಬಯಿಯಲ್ಲಿ ಜನವರಿ ಮತ್ತು ಮಾರ್ಚ್ 2019ರ ನಡುವೆ ರಸ್ತೆ ಅಪಘಾತಗಳಲ್ಲಿ 99 ಜನರು ಸಾವನ್ನಪ್ಪಿದ್ದರೆ, 769 ಮಂದಿ ಗಾಯಗೊಂಡಿ¨ªಾರೆ. ರಾಜ್ಯಾದ್ಯಂತ 434 ಜನರು ಮೃತಪಟ್ಟಿದ್ದು, 3,434 ಮಂದಿ ಗಾಯಗೊಂಡಿ¨ªಾರೆ.
2018ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ರಸ್ತೆ ಸಾವುಗಳಲ್ಲಿ ಯಾವುದೇ ಗಮನಾರ್ಹ ಕುಸಿತ ಕಂಡು ಬಂದಿಲ್ಲ ಎಂದು ಆರ್‌ಟಿಒ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ 35,717 ರಸ್ತೆ ಅಪಘಾತಗಳಲ್ಲಿ 13,261 ಮಂದಿ ಮೃತಪಟ್ಟರೆ, 31 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ರಸ್ತೆಯ ಸುರಕ್ಷಾ ವಿಭಾಗದ ದತ್ತಾಂಶದ ಪ್ರಕಾರ ಮಹಾರಾಷ್ಟ್ರದ ಎರಡು ಡಜನ್ ಜಿಲ್ಲೆ ಗಳು ಮತ್ತು ನಗರಗಳಲ್ಲಿ ಹಿಂದಿನ ವರ್ಷದ ಮೊದಲ ತ್ತೈಮಾಸಿಕಕ್ಕೆ ಹೋಲಿಸಿದರೆ ಸಾವುಗಳ ಸಂಖ್ಯೆ ಹೆಚ್ಚಾಗಿದೆ.
ಜಿಲ್ಲೆ ಯ ರಸ್ತೆ ಸುರಕ್ಷತಾ ಸಮಿತಿಗಳ ಮೂಲಕ ಇತರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ರಸ್ತೆ ಸುರಕ್ಷತೆ ಅಭಿಯಾನವನ್ನು ನಡೆಸಲು ಅವರನ್ನು ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ. ಮುಂಬಯಿಯಲ್ಲಿ ಕಳೆದ ಮೂರು ತಿಂಗಳಿನಲ್ಲಿ ರಸ್ತೆ ಅಪಘಾತದಿಂದ 24 ಮಂದಿ ಸಾವನ್ನಪ್ಪಿದ್ದಾರೆ. ಪುಣೆ ನಗರವು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ನಗರವಾಗಿದೆ. ಪುಣೆ ನಗರದಲ್ಲಿ 56 ಮಂದಿ ಸಾವನ್ನಪ್ಪಿದ್ದಾರೆ. ಥಾಣೆ ನಗರದಲ್ಲಿ ಕೂಡ ರಸ್ತೆ ಅಪಘಾತ ಸಾವುಗಳ ಸಂಖ್ಯೆ ಶೇ. 42 ರಷ್ಟು ಕಡಿಮೆಯಾಗಿದ್ದು, ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 37 ಕಡಿಮೆ ಸಾವುಗಳು ಸಂಭವಿಸಿದೆ. ನವಿ ಮುಂಬಯಿ ನಗರವೂ ರಸ್ತೆ ಅಪಘಾತದಿಂದ ಸಾವನ್ನಪ್ಪುವಲ್ಲಿ ಸ್ವಲ್ಪ ಕುಸಿತ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ರಸ್ತೆ ಸುರಕ್ಷಾ ವಿಭಾಗದಿಂದ ವಿಶೇಷ ಕ್ರಮ
ಪ್ರಸ್ತುತ ವರ್ಷದ ಮೂರು ತಿಂಗಳಲ್ಲಿ 39 ರಸ್ತೆ ಅಪಘಾತ ಸಾವುಗಳನ್ನು ಕಂಡ ಸತಾರಾ ಜಿಲ್ಲೆ ಯು ಈ ಪಟ್ಟಿಯಲ್ಲಿ ಮೊದಲ ಸ್ಥಾನದ ಲ್ಲಿದೆ. ಸತಾರಾದಲ್ಲಿ ಶೇ. 91ರಷ್ಟು ಮಂದಿ ಸಾವನ್ನಪ್ಪಿದ್ದರೆ, ಔರಂಗಾಬಾದ್ ನಗರ ಮತ್ತು ಲಾತೂರ್ ಜಿಲ್ಲೆ ಗಳಲ್ಲಿ ಕ್ರಮವಾಗಿ ಶೇ. 83 ಮತ್ತು ಶೇ. 62 ರಷ್ಟು ಮಂದಿ ಸಾವಿಗೀಡಾಗಿದ್ದಾರೆದು ಮೂಲಗಳು ತಿಳಿಸಿವೆ. ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆ ಉಂಟಾಗಿರುವ ಕಾರಣ ಈಗಾಗಲೇ ಆರ್‌ಟಿಒ ಅಧಿಕಾರಿಗಳನ್ನು ಸಂಪರ್ಕಿಸಿ ಇದರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ರಸ್ತೆ ಸುರಕ್ಷತಾ ವಿಭಾಗದ ಮುಖ್ಯಸ್ಥ ಜೆ. ಬಿ. ಪಾಟೀಲ್ ತಿಳಿಸಿದ್ದಾರೆ.