Advertisement

ಒಡಿಶಾದಲ್ಲಿ ರಸ್ತೆ ಅಪಘಾತ: ಇಬ್ಬರ ಸಾವು; 35 ಮಂದಿಗೆ ಗಾಯ

04:06 PM May 23, 2017 | udayavani editorial |

ಭುವನೇಶ್ವರ : ಒಡಿಶಾದ ಮಯೂರ್‌ಭಂಜ್‌ ಮತ್ತು ಕಂಧಮಾಲ್‌ ಜಿಲ್ಲೆಯಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟು ಇತರ 35 ಮಂದಿ ಗಾಯಗೊಂಡರು. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಿದೆ.

Advertisement

ಮಯೂರ್‌ಭಂಜ್‌ ಜಿಲ್ಲೆಯ ಶರತ್‌ಚಂದ್ರಪುದಲ್ಲಿ ಮದುವೆ ದಿಬ್ಬಣವನ್ನು ಒಯ್ಯುತ್ತಿದ್ದ ವ್ಯಾನೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರಣ ಇಬ್ಬರು ಮೃತಪಟ್ಟು ಇತರ 23 ಮಂದಿ ಗಾಯಗೊಂಡರು. 

ಕಂಧಮಾಲ್‌ ಜಿಲ್ಲೆಯ ರಾಣಿಪಥರ್‌ ಘಾಟಿ ಸಮೀಪ ಬಸ್ಸೊಂದು ಮಗುಚಿ ಬಿದ್ದು 12 ಮಂದಿ ಗಾಯಗೊಂಡರು. ಇವರ ಪೈಕಿ ಇಬ್ಬರ ಸ್ಥಿತಿ ಗಂಭೀರವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next