Advertisement

Road Mishap ನಿಡ್ಲೆ: ಟೆಂಪೋ ಟ್ರಾವೆಲರ್‌- ಕಾರು ಢಿಕ್ಕಿ; ಮೂವರಿಗೆ ಗಾಯ

09:54 PM Nov 26, 2023 | Team Udayavani |

ಬೆಳ್ತಂಗಡಿ: ಧರ್ಮಸ್ಥಳ- ಗುಂಡ್ಯ ರಸ್ತೆಯ ನಿಡ್ಲೆಯ ಶಾಂತಿನಗರದಲ್ಲಿ ಟೆಂಪೋ ಟ್ರಾವೆಲರ್‌ ಹಾಗೂ ಕಾರಿನ ಮಧ್ಯೆ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬೆಂಗಳೂರು ಮೂಲದ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ನ. 26 ರಂದು ನಡೆದಿದೆ.

Advertisement

ಘಟನೆಯಲ್ಲಿ ಬೆಂಗಳೂರು ಉತ್ತರ ತಿಂಡ್ಲು ನಿವಾಸಿಗಳಾದ ಕಾರು ಚಾಲಕ ವಿನಯಕುರ್ಮಾ, ಆತನ ಪುತ್ರ ಮೋಕ್ಷಿತ್‌ ಹಾಗೂ ಸಂಬಂಧಿ ಮಹಿಳೆ ಅನುಷಾ ಗಾಯಗೊಂಡು ಉಜಿರೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಕಾರಿನಲ್ಲಿದ್ದ ಚಾಲಕನ ಪತ್ನಿ ನಂದಿತಾ ಹಾಗೂ ಸಂಬಂಧಿಕ ವಿನಾಯಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ಟ್ರಾವೆಲರ್‌ಚಾಲಕ ವಾಹನವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬೆಳ್ತಂಗಡಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next