Advertisement

ಎರಡು ತಿಂಗಳ ಹಿಂದೆ ಮದುವೆಯಾದ ದಂಪತಿ ಕಾರು ಅಪಘಾತದಲ್ಲಿ ಸಾವು

10:03 AM Dec 25, 2019 | keerthan |

ಕ್ಯಾನ್ ಬೆರಾ: ದೂರದ ಆಸ್ಟ್ರೇಲಿಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಮೃತಪಟ್ಟ ಘಟನೆ ಇತ್ತೀಚೆಗೆ ನಡೆದಿದೆ.

Advertisement

ಎರ್ನಾಕುಲಂನ ವೆಂಗೋಲಾ ಮೂಲದ ಅಲ್ವಿನ್ ಮ್ಯಾಥ್ಯೂ (30) ಮತ್ತು ನಿನು ಸುಸೇನ್ ಎಲ್ಬೋ (28) ಕಾರು ಅಪಘಾತದಲ್ಲಿ ಮೃತಪಟ್ಟವರು.

ಅಲ್ವಿನ್ ಮತ್ತು ನಿನು ಸುಸೇನ್ ದಂಪತಿ ಕಳೆದ ಅಕ್ಟೋಬರ್ ನಲ್ಲಿ ವಿವಾಹವಾಗಿದ್ದರು. ನಿನು ಆಸೀಸ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುವ ಕಾರಣ ದಂಪತಿಗಳು ನವೆಂಬರ್ ನಲ್ಲಿ ಆಸ್ಟ್ರೇಲಿಯಾಗೆ ತೆರಳಿದ್ದರು.

ನ್ಯೂಸೌತ್ ವೇಲ್ಸ್ ನಲ್ಲಿ ಕಾರು ಅಪಘಾತ ನಡೆದಿದ್ದು, ದಂಪತಿಗಳಿಬ್ಬರೂ ಸ್ಥಳದಲ್ಲೇ ಮೃತರಾಗಿದ್ದಾರೆ. ದಂಪತಿ ಪ್ರಯಾಣಿಸುತ್ತಿದ್ದ ಕಾರು ಸ್ಕಿಡ್ ಆಗಿ ಉರುಳಿ ಬಿದ್ದಿದ್ದು, ಕಾರಿಗೆ ಬೆಂಕಿ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next