ಕೊಲ್ಕತ್ತಾ: ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ದುಪ್ಗುರಿಗೆ ತೆರಳುತ್ತಿದ್ದ ಟಾಟಾ ಮ್ಯಾಜಿಕ್ ಮತ್ತು ಮಾರುತಿ ವ್ಯಾನ್ ಹಿಮದಿಂದ ಆವೃತವಾದ ವಾತಾವರಣದ ಕಾರಣದಿಂದಾಗಿ ಚಾಲಕರಿಗೆ ದಾರಿ ಕಾಣದೆ ಢಿಕ್ಕಿ ಹೊಡೆದ ಪರಿಣಾಮ ಭಾರಿ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ಜಲ್ದಡ್ಕ ಬ್ರಿಡ್ಜ್ ಬಳಿ ಟಾಟಾ ಮ್ಯಾಜಿಕ್ ವಾಹನ ಲಾರಿಗೆ ಢಿಕ್ಕಿ ಹೊಡೆದ ಕಾರಣ ಲಾರಿ ಚಾಲಕ ನಿಯಂತ್ರಣ ತಪ್ಪಿ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಿನಿವ್ಯಾನ್‌ಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, 18 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಕೆರೆಗೆ ಇಳಿದ ಶುಂಠಿ ತುಂಬಿದ್ದ ಲಾರಿ: ಪ್ರಾಣಾಪಾಯದಿಂದ ಪಾರಾದ ಚಾಲಕ, ಸಹಾಯಕ
ಗಂಭೀರ ಸ್ಥಿತಿಯಲ್ಲಿರುವ ನಾಲ್ಕು ಮಂದಿಯನ್ನು ಜಲ್‌ಪೈಗುರಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ಗೆ, ಮೂವರನ್ನು ಉತ್ತರ ಬಂಗಾಲದ ಮೆಡಿಕಲ್ ಕಾಲೇಜ್‌ಗೆ, ಒಬ್ಬರನ್ನು ಜಲ್‌ಪೈಗುರಿ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.