ಪಾಟ್ನಾ: ಆರ್‌ಜೆಡಿ ನಾಯಕ ಮತ್ತು ಬಿಹಾರ ಸಚಿವರಾಗಿರುವ ತೇಜ್ ಪ್ರತಾಪ್ ಯಾದವ್ ಅವರ ʼಕೃಷ್ಣನ ಕನಸಿನʼ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಚಿವ ತೇಜ್ ಪ್ರತಾಪ್ ಶ್ರೀಕೃಷ್ಣ ದೇವರ ವೇಷಭೂಷಣವನ್ನು ತೊಟ್ಟು ತನ್ನನ್ನು ತಾನು ಹಿಂದೂ ದೇವರಿಗೆ ಹೋಲಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಇವರು ಹಿಂದೂ ದೇವರ ವೇಷಭೂಷಣವನ್ನು ತೊಟ್ಟು ಹಾಕುವ ವಿಡಿಯೋಗಳು ಅವರ ಅಪಾರ ಬೆಂಬಲಿಗರನ್ನು ಸೆಳೆಯುತ್ತದೆ.
ಇಂಥದ್ದೇ ಒಂದು ವಿಡಿಯೋವನ್ನು ಸಚಿವ ತೇಜ್ ಪ್ರತಾಪ್ ಯಾದವ್ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಲಗಿರುವ ಸಚಿವ, ಮಹಾಭಾರತ ಯುದ್ದ ಹಾಗೂ ಅದರಲ್ಲಿ ಶ್ರೀಕೃಷ್ಣ ದೇವರನ್ನು ಕಂಡಿದ್ದಾರೆ. ಮಿನುಗುವ ಚಕ್ರದಿಂದ ಅಲಂಕೃತವಾದ ಕಿರೀಟ ಮತ್ತು ಗದೆಯಿಂದ ಅಲಂಕೃತವಾದ ಆಯುಧಗಳೊಂದಿಗೆ ನಿಮ್ಮ ವಿಶ್ವರೂಪವನ್ನು ನಾನು ನೋಡುತ್ತಿದ್ದೇನೆ, ಬ್ರಹ್ಮಾಂಡದ ಅದ್ಭುತ ಬೆಳಕಿನಂತೆ ಎಲ್ಲೆಡೆ ಹೊಳೆಯುತ್ತಿದೆ, ”ಎಂದು ಮಲಗುವ ವೇಳೆ ಬಿದ್ದ ಕನಸನ್ನು ಅಕ್ಷರ ರೂಪಕ್ಕಿಳಿಸಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋದ ಕೊನೆಯಲ್ಲಿ ಕನಸಿನಲ್ಲಿ ಕೃಷ್ಣನನ್ನು ನೋಡಿ ಸಚಿವ ಬೆಚ್ಚಿಬಿದ್ದು ಏಳುತ್ತಾರೆ.
ಈ ರೀತಿಯಾಗಿ ಕನಸಿನ ವಿಚಾರಗಳನ್ನು ಹಂಚಿಕೊಂಡು ತಮ್ಮ ಬೆಂಬಲಿಗರ ಗಮನ ಸೆಳೆಯುವುದು ಇದೇ ಮೊದಲಲ್ಲ ,ಇದಕ್ಕೂ ಮೊದಲು ಫೆ.22 ರಂದು ಪಾಟ್ನಾದಲ್ಲಿ ಸೈಕಲ್ ತುಳಿಯುತ್ತ ತೆರಳಿದ್ದರು. ಸಮಾಜವಾದಿ ಪಕ್ಷದ (ಎಸ್‌ಪಿ) ದಿವಂಗತ ಮುಲಾಯಂ ಸಿಂಗ್ ಯಾದವ್ ಅವರನ್ನು “ಕನಸಿನಲ್ಲಿ ನೋಡಿದ” ನಂತರ ಅವರಿಂದ ಸ್ಫೂರ್ತಿ ಪಡೆದು ಸೈಕಲ್ ನಲ್ಲಿ ತೆರಳಿದೆ ಎಂದು ಹೇಳಿಕೊಂಡಿದ್ದರು.
ಸಚಿವ ತೇಜ್ ಪ್ರತಾಪ್ ಶ್ರೀಕೃಷ್ಣ ದೇವರ ವೇಷಭೂಷಣವನ್ನು ತೊಟ್ಟು ತನ್ನನ್ನು ತಾನು ಹಿಂದೂ ದೇವರಿಗೆ ಹೋಲಿಸಿ ಅವರ ಸಹೋದರ ತೇಜಸ್ವಿ ಯಾದವ್ ಅವರನ್ನು ʼಅರ್ಜುನʼನಿಗೆ ಹೋಲಿಸಿದ್ದಾರೆ. ತನ್ನನ್ನು ತಾನು ʼಕೃಷ್ಣʼನನ್ನು ಹೋಲಿಸಿದ್ದಾರೆ. ಪಾಟ್ನಾದ ಶಿವನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವರು ಶಿವನ ವೇಷವನ್ನು ಧರಿಸಿದ್ದರು.