Advertisement

ಲಾಲು ಪ್ರಸಾದ್‌ ಯಾದವ್‌ಗೆ ಡಿಪ್ರೆಶನ್ : ರಿಮ್ಸ್‌ ವೈದ್ಯಕೀಯ ವರದಿ

11:46 AM Sep 11, 2018 | Team Udayavani |

ರಾಂಚಿ : ಬಹುಕೋಟಿ ವೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಸೆರೆಮನೆಯಲ್ಲಿ ಮಾನಸಿಕ ಒತ್ತಡದಿಂದ (ಡಿಪ್ರೆಶನ್) ಬಳಲುತ್ತಿದ್ದಾರೆ ಎಂದು ಇಲ್ಲಿನ ರಾಜೇಂದ್ರ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸಯನ್ಸಸ್‌ (ಆರ್‌ಐಎಂಎಸ್‌)ನ ನಿರ್ದೇಶಕ ಆರ್‌ ಕೆ ಶ್ರೀವಾಸ್ತವ ತಿಳಿಸಿದ್ದಾರೆ. 

Advertisement

ಲಾಲು ಡಿಪ್ರೆಶನ್ ನಿಂದ ಬಳಲುತ್ತಿರುವುದು ಈ ಹಿಂದೆ ಏಮ್ಸ್‌ ಮೆಡಿಕಲ್‌ ಡಿಸ್‌ಚಾರ್ಜ್‌ ಸ್ಲಿಪ್‌ನಲ್ಲಿ ಕೂಡ ಉಲ್ಲೇಖೀಸಲಾಗಿತ್ತು. ಇದೀಗ “ರಿಮ್ಸ್‌’ನಲ್ಲಿ ಲಾಲು ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೂಡ ಇದನ್ನೇ ತಮ್ಮ ವರದಿಯಲ್ಲೂ ಉಲ್ಲೇಖೀಸಿದ್ದಾರೆ ಎಂದು ಶ್ರೀವಾಸ್ತವ ಹೇಳಿದರು. 

ಲಾಲು ಅವರ ಇಡಿಯ ಕುಟುಂಬವೇ ಒಂದೆಡೆ ಭ್ರಷ್ಟಾಚಾರದ ಕೇಸುಗಳಲ್ಲಿ ಮುಳುಗಿ ಹೋಗಿದೆಯಾದರೆ ಇನ್ನೊಂದೆಡೆ ಅವರ ಇಬ್ಬರು ಪುತ್ರರಲ್ಲಿ ರಾಜಕೀಯ ಪಾರಮ್ಯದ ಜಟಾಪಟಿ ನಡೆಯುತ್ತಿದೆ. ಈ ಕಾರಣಗಳೇ ಲಾಲು ಡಿಪ್ರೆಶನ್ಗೆ ಕಾರಣವಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

ಲಾಲು ಅವರು ತಮ್ಮ ಕಿರಿಯ ಪುತ್ರ ತೇಜಸ್ವಿ ಯಾದವ್‌ ತಮ್ಮ ಉತ್ತರಾಧಿಕಾರಿಯಾಗಬೇಕೆಂಬ ಒಲವನ್ನು ಬಹಿರಂಗವಾಗಿ ತೋರಿಸಿಕೊಂಡಿದ್ದಾರೆ. ಆದರೆ ಲಾಲು ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ (ಹಿಂದಿನ ಮಹಾ ಘಟಬಂಧನ ಸರಕಾರದಲ್ಲಿ ಹಿರಿಯ ಸಚಿವರಾಗಿದ್ದವರು) ಅವರಿಗೆ ಸಾರ್ವಜನಿಕವಾಗಿ ಉತ್ತಮ ಪ್ರತಿಷ್ಠೆ,  ಸ್ಥಾನಮಾನ, ಗೌರವಾದರಗಳಿವೆ ಎಂದು ವರದಿಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next