Advertisement

ಮೇ 12ರಂದು ಹಿರಿಯ ಪುತ್ರನ ವಿವಾಹ: ಲಾಲುಗೆ 5 ದಿನ ಪೆರೋಲ್‌

12:27 PM May 09, 2018 | udayavani editorial |

ಪಟ್ನಾ/ರಾಂಚಿ : ಈ ವಾರಾಂತ್ಯ ನಡೆಯಲಿರುವ ತನ್ನ  ಹಿರಿಯ ಮಗನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೈಲುವಾಸಿಯಾಗಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌ ಅವರಿಗೆ ಐದು ದಿನಗಳ ಪೆರೋಲ್‌ ಮಂಜೂರಾಗಿದೆ. 

Advertisement

ಲಾಲು ಹಿರಿಯ ಪುತ್ರ, ಹಾಲಿ ಶಾಸಕ ತೇಜ್‌ ಪ್ರತಾಪ್‌ ಯಾದವ್‌ ಅವರು ತಮ್ಮದೇ ಪಕ್ಷದ ಶಾಸಕರಾಗಿರುವ ಚಂದ್ರಿಕಾ ರಾಯ್‌ ಅವರ ಪುತ್ರಿ ಐಶ್ವರ್ಯಾ ರಾಯ್‌ ಅವರನ್ನು ಇದೇ ಮೇ 12ರಂದು ಪಟ್ನಾದಲ್ಲಿ ವರಿಸಲಿದ್ದಾರೆ. 

ಮೇ 10ರಿಂದ 14ರ ವರೆಗಿನ ಅವಧಿಗೆ ಲಾಲು ಅವರ ಪೆರೋಲ್‌ ಅರ್ಜಿಯನ್ನು ಬಂಧೀಖಾನೆಯ ಐಜಿ ಮಂಜೂರು ಮಾಡಿದ್ದಾರೆ ಎಂದು ಆರ್‌ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಭೋಲಾ ಯಾವ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next