Advertisement
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಮೇಲೆ ಹೊರೆ ಹಾಕಿ ಬಜೆಟ್ ಗಾತ್ರ ಹೆಚ್ಚಿಸುವ ಅಗತ್ಯವಿಲ್ಲ. ಕೇಂದ್ರದಿಂದ ರಾಜ್ಯಕ್ಕೆ 30 ಸಾವಿರ ಕೋಟಿ ರೂ. ಅನುದಾನ ಕಡಿತಗೊಂಡಿದೆ. ಮೊದಲು ಬಾಕಿ ಹಣವನ್ನು ನೀಡಲಿ. ಅನುದಾನ ಕಡಿತ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿ ಸೇರಿದಂತೆ ರಾಜ್ಯದ ಸಮಸ್ಯೆಗಳ ಕುರಿತು ಸದನದಲ್ಲಿ ಹೋರಾಟ ನಡೆಸಲಾಗುವುದು. ರಾಜ್ಯದಲ್ಲಿ ಹುಚ್ಚರ ಸಂತೆಯಂತೆ ಆಡಳಿತ ನಡೆಯುತ್ತಿದೆ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಮುಖವಾಡ ಬಯಲಾಗಲಿದೆ. ಅರಣ್ಯ ಒತ್ತುವರಿಗೆ ಸಂಬಂಧಿ ಸಿ ಸಚಿವ ಆನಂದಸಿಂಗ್ ವಿರುದ್ಧ 15 ಪ್ರಕರಣಗಳಿವೆ. ಅಂಥವರಿಗೆ ಅರಣ್ಯ ಇಲಾಖೆ ಸಚಿವ ಸ್ಥಾನ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾರು ಅಪಘಾತ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವುದಿಲ್ಲ. ಬಿಜೆಪಿ ಪ್ರಜಾಪ್ರಭುತ್ವ ಉಳಿಸುತ್ತಿಲ್ಲ ಎನ್ನುವದಂತೂ ಸತ್ಯ. ಮನಸ್ಸಿಗೆ ಬಂದವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ನನ್ನ ವಿರುದ್ಧ ಸೆಕ್ಷನ್ 144 ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಇಲಾಖೆಯನ್ನೇ ಮನಸೋ ಇಚ್ಛೆ ನಡೆಸಿಕೊಳ್ಳಲಾಗುತ್ತಿದೆ. ಪೊಲೀಸರ ತಾರತಮ್ಯದ ಕುರಿತೂ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ ಎಂದರು.