Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ತನಿಖೆಗೆ ಮೊದಲೇ ಅಪರಾಧದ ಹಣೆ ಪಟ್ಟಿ ಕಟ್ಟಲು ಬರುವುದಿಲ್ಲ, ನಿರಪರಾಧಿ ಎಂದು ಹೇಳಲೂ ಆಗುವುದಿಲ್ಲ. ಸ್ವಾಮೀಜಿ ಮೂರು ದಶಕಗಳಿಂದ ದುರ್ಬಲ ವರ್ಗದವರ ಸೇವೆ ಮಾಡುತ್ತಾ ಬಂದಿದ್ದಾರೆ. ಆಳಿ ನಿಂದ ಹಿಡಿದು ಅರಸನವರೆಗೆ ಎಲ್ಲರಿಗೂ ಈ ನೆಲದ ಕಾನೂನು ಒಂದೇ, ಈ ವಿಷಯದಲ್ಲಿ ನಾವು ಯಾವುದೇ ಹೇಳಿಕೆ ಕೊಟ್ಟರೂ ತಪ್ಪು ಅರ್ಥ ಬರುತ್ತದೆ. ನಾನು ಹೆಚ್ಚೇನೂ ಹೇಳುವುದಿಲ್ಲ” ಎಂದರು.
Related Articles
Advertisement
8 ನೇ ತರಗತಿಯ ಪುಸ್ತಕದಲ್ಲಿ ಸಾವರ್ಕರ್ ಅವರ ಪಾಠದಲ್ಲಿ ಬುಲ್ ಬುಲ್ ಪಕ್ಷಿಯ ಮೂಲಕ ಅಂಡಮಾನ್ ಜೈಲಿನಿಂದ ಭಾರತಕ್ಕೆ ಹಾರಿ ಬರುತ್ತಿದ್ದರು ಎನ್ನುವ ಬಹುಚರ್ಚಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಮನೋವಿಜ್ಞಾನ ಅಂತ ಒಂದಿದೆ. ಒಬ್ಬ ಜೈಲಿನಲ್ಲಿದ್ದ ರಾಜಕೀಯ ಕೈದಿ ತಾನು ನೇರವಾಗಿ ತನ್ನ ದೇಶಕ್ಕೆ ಹೋಗಲು ಸಾಧ್ಯವಾಗದಿದ್ದಾಗ ಭಾವನೆಯನ್ನು ದೇಶದ ಒಳಗಿನ ಸಂಬಂಧವನ್ನು ಅಲ್ಲಿ ವ್ಯಕ್ತಪಡಿಸಲಾಗಿದೆ. ನಾವು ಇಲ್ಲಿದ್ದರೂ ಮನಸ್ಸಿನ ಮೂಲಕ, ಭಾವನೆಗಳ ಮೂಲಕ ವಿಹರಿಸಿ ಬರಬಹುದು. ತಾಂತ್ರಿಕವಾಗಿ, ವಿಪರೀತ ಅರ್ಥದಲ್ಲಿ ನೋಡಲು ಹೋಗಬೇಡಿ” ಎಂದರು.
”ಕೆಲವರು ಭಾರತದಲ್ಲೇ ಇದ್ದಾರೆ ಆದರೆ ಭಾರತೀಯತೆಯೇ ಇರುವುದಿಲ್ಲ. ಸಾವರ್ಕರ್ ಅವರು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ. ರಾಜಿ ಮಾಡಿಕೊಂಡಿದ್ದರೆ ಪುಸ್ತಕ ಬರೆಯಲು ಅವಕಾಶವೂ ಸಿಗುತ್ತಿತ್ತು. ಡಿಸ್ಕವರಿ ಆಫ್ ಇಂಡಿಯಾ ಬರೆಯಲು ಅವಕಾಶ ಸಿಗುತ್ತಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿಯ ಹೆಗಲ ಮೇಲೆ ಕೈ ಹಾಕುವ ಅವಕಾಶವೂ ಸಿಗುತ್ತಿತ್ತು. ಆ ಅವಕಾಶ ಸಿಗಲಿಲ್ಲ” ಎಂದು ಪರೋಕ್ಷವಾಗಿ ಮಾರ್ಮಿಕ ಉತ್ತರದ ಮೂಲಕ ಕಾಂಗ್ರೆಸ್ ನತ್ತ ಆಕ್ರೋಶ ಹೊರ ಹಾಕಿದರು.
ನಾನು ಮೊದಲು ಮತ ಹಾಕಿದ್ದು ಜನತಾ ಪಕ್ಷಕ್ಕೆ
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಜಯಂತಿ ಯಂದು ಅವರನ್ನು ಸ್ಮರಿಸಿದರು. ಅವರ ಹೆಸರಿನಲ್ಲೇ ಚುನಾವಣೆ ನಡೆದಿತ್ತು. 85 ರಲ್ಲಿ ಮೊದಲ ಬಾರಿಗೆ ಮತ ಹಾಕಲು ಅವಕಾಶ ಸಿಕ್ಕಾಗ ನಾನು ಜನತಾ ಪಕ್ಷಕ್ಕೆ ಮತ ಹಾಕಿದ್ದೆ ಎಂದರು.