Advertisement
ಸುಮಾರು 350 ಮನೆಗಳು ಹಾಗೂ 1,200 ಜನಸಂಖ್ಯೆಯನ್ನು ಹೊಂದಿರುವ ಒಂದನೇ ವಾರ್ಡ್ ನೋಡಲು ಸುಂದರವಾದ ಪ್ರದೇಶ. ಸುತ್ತಲೂ ಶಾಂಭವಿ ನದಿ ವ್ಯಾಪಿಸಿರುವುದರಿಂದ ಸುಮಾರು 10 ಅಡಿ ಆಳ ತೋಡಿ ಬಾವಿ ತೆರೆದರೂ ನೀರಿನ ಬಲವಾದ ಒರತೆ ಸಿಗುತ್ತದೆ. ಆದರೆ ಈ ನೀರು ಯಾವುದಕ್ಕೂ ಪ್ರಯೋಜನವಿಲ್ಲವಾಗಿದೆ. ಹೀಗಾಗಿ ಇಲ್ಲಿನ ಜನ ಶುದ್ಧ ಕುಡಿ ಯುವ ನೀರಿಗಾಗಿ ಪರದಾಡುವಂತಾಗಿದೆ.
ಮೂಲ್ಕಿ ಒಂದನೇ ವಾರ್ಡ್ ಗೆ ನಿರಂತರವಾಗಿ ನೀರು ಸರಬರಾಜು ಮಾಡುವ ಹೊಣೆಗಾರಿಕೆ ನಗರ ಪಂಚಾಯತ್ ಮೇಲಿದೆ. ವಾರ್ಡ್ ಸುಂದರವಾಗಿದ್ದು, ಜನವಸತಿಗೆ ಯೋಗ್ಯವಾಗಿರುವುದರಿಂದ ಇಲ್ಲಿ ಜನ ವಸತಿ ಸಂಖ್ಯೆ ಏರುತ್ತಲೇ ಇದೆ. ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಬಹುತೇಕ ಪ್ರದೇಶಗಳಲ್ಲಿ ಶಾಂಭವಿ ನದಿ ವ್ಯಾಪಿಸಿರುವುದರಿಂದ ಎಲ್ಲ ಕಡೆಗೂ ನೀರಿನ ಪೂರೈಕೆಯೇ ಇಲ್ಲಿರುವ ಬಹು ದೊಡ್ಡ ಸವಾಲು.
Related Articles
Advertisement
ಹೆದ್ದಾರಿ ಪಾಲಾದ ಬಾವಿಹೆದ್ದಾರಿ ನಿರ್ಮಾಣಕ್ಕೂ ಮೊದಲು ಹೆಜಮಾಡಿ ಟೋಲ್ ಗೇಟ್ ಬಳಿ ಈ ಪ್ರದೇಶ ಮತ್ತು ಮೂಲ್ಕಿ ಜನರ ಸಮಸ್ಯೆಗೆ ಪರಿಹಾರವಾಗಿ ದೊಡ್ಡ ಬಾವಿಯನ್ನು ಮೂಲ್ಕಿ ನ.ಪಂ. ಹಿಂದಿನ ಆಡಳಿತ ಕಾಲದಲ್ಲಿ ನಿರ್ಮಿಸಲಾಗಿತ್ತು. ಇಲ್ಲಿಂದ ನೀರು ಪಂಪ್ ಮಾಡಿ ತರಿಸಲಾಗುತ್ತಿತ್ತು. ಹೆದ್ದಾರಿ ನಿರ್ಮಾಣವಾಗುವಾಗ ಬಾವಿಯು ಹೆದ್ದಾರಿಯೊಳಗೆ ಬಿದ್ದು ಮುಚ್ಚಿ ಹೋಗಿದೆ. ಈಗ ಮೂಲ್ಕಿ ಪರಿಸರದಲ್ಲಿ ಶಾಸಕ ಅಭಯ ಚಂದ್ರ ಜೈನ್ ನೇತೃತ್ವದಲ್ಲಿ ಕುಡಿಯುವ ನೀರಿಗಾಗಿ ಹಾಕಿರುವ ಮಟ್ಟು ಅಣೆಕಟ್ಟು ಯೋಜನೆ, ನಗರ ಪಂಚಾಯತ್‌ನ 15 ಕೋಟಿ ರೂ. ವೆಚ್ಚದ ಯೋಜನೆ ಹಾಗೂ ಮಡಿವಾಳ ಕೆರೆಯ ಅಭಿವೃದ್ಧಿ ಯೋಜನೆಯಿಂದ ಮುಂದಿನ ದಿನಗಳಲ್ಲಿ ಇಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ ಎನ್ನುತ್ತಾರೆ ಸ್ಥಳೀಯರು. ಆರಂಭದ ಹಂತದಲ್ಲಿದೆ ಹಲವು ಯೋಜನೆ
ಇಲ್ಲಿ ನೀರಿನ ಸಮಸ್ಯೆಗೆ ಭೌಗೋಳಿಕ ವ್ಯವಸ್ಥೆಯು ಮುಖ್ಯ ಕಾರಣ. ನಗರ ಪಂಚಾಯತ್ ಆದಷ್ಟು ಪ್ರಮಾಣದಲ್ಲಿ ನಳ್ಳಿ, ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದೆ. ಈ ವಾರ್ಡ್ ನಲ್ಲಿ ಜನ ವಸತಿ ಹೆಚ್ಚಾಗಿರುವುದರಿಂದ ಹೆದ್ದಾರಿ, ಪೇಟೆಗೆ ಹತ್ತಿ ರವಾಗಿ ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ಸುಲಭ ಸಂಪರ್ಕ ಇರುವ ಪ್ರದೇಶವಾಗಿರುವ ಜತೆಗೆ ಪ್ರಕೃತಿದತ್ತವಾದ ಸುಂದರ ಪರಿಸರವಿರುವುದರಿಂದ ಹೆಚ್ಚಿನವರು ಇಲ್ಲಿ ವಾಸ ಮಾಡಲು ಇಷ್ಟಪಡುತ್ತಾರೆ. ಉತ್ತಮ ನೀರಿನ ವ್ಯವಸ್ಥೆಗಾಗಿ ಹಲವಾರು ಯೋಜನೆಗಳು ರೂಪುಗೊಳ್ಳುತ್ತಿವೆ. ಇದರಲ್ಲಿ ತುಂಬೆಯಿಂದ ಬರುವ ಬೃಹತ್ ನೀರಿನ ಯೋಜನೆ ಕಾಮಗಾರಿ ಆರಂಭಗೊಂಡಿದೆ.
– ಪುರುಷೋತ್ತಮ ರಾವ್,ನಂ. 1 ವಾರ್ಡ್ ಸದಸ್ಯ, ಮೂಲ್ಕಿ ನಗರ ಪಂಚಾಯತ್ ಶುದ್ಧ ನೀರು ಪೂರೈಕೆ ಅನಿವಾರ್ಯ
ನಮ್ಮ ವ್ಯಾಪ್ತಿಗೆ ಪರಿಶುದ್ಧ ನೀರಿನ ವ್ಯವಸ್ಥೆ ಅನಿವಾರ್ಯವಾಗಿದೆ. ಕೆಲವೊಂದು ಕೆಲಸ ಕಾರ್ಯಗಳಿಗೆ ಬಾವಿ ನೀರನ್ನು ಬಳಸಿದರೂ ಅಡುಗೆ, ಬಟ್ಟೆ ಒಗೆಯಲು, ಕುಡಿಯುವುದಕ್ಕೆ ಬಳಸಲಾಗದ ಪರಿಸ್ಥಿತಿ ಇದೆ. ಹೀಗಾಗಿ ಸ್ಥಳೀಯಾಡಳಿತ ಉತ್ತಮ ನೀರು ಇರುವ ಪ್ರದೇಶದಲ್ಲಿ ಬಾವಿ ತೆರೆದು ಪೂರೈಕೆ ಮಾಡಿದರೆ ಎಲ್ಲ ಸಮಸ್ಯೆಗಳು ಪರಿಹಾರ ವಾಗುವುವು. ನಗರ ಪಂಚಾಯತ್ ಸಾಧ್ಯವಾದಷ್ಟು ಪ್ರಮಾಣದಲ್ಲಿ ಟ್ಯಾಂಕರ್ ನೀರು ಒದ ಗಿ ಸು ತ್ತಿದೆ. ಆದರೆ ಇದ ರಿಂದ ಶಾಶ್ವತ ಪರಿಹಾರ ಸಾಧ್ಯವಾ ಗುವುದಿಲ್ಲ.
-ಕಮಲಾಕ್ಷ ಬಡಗಿತ್ಲು, ಅಧ್ಯಕ್ಷರು, ಬಡಗಿತ್ಲು ಯುವ ಸಂಘ. ಸರ್ವೋತ್ತಮ ಅಂಚನ್