Advertisement
ಮಣ್ಣಿನಲ್ಲಿ ಹೂತ ಲಾರಿಬುಧವಾರ ಮುಂಜಾನೆ ಸ್ಥಳೀಯ ಅಂಗಡಿಗೆ ದಿನಸಿಗೆ ಹೊತ್ತು ಈ ಮಾರ್ಗದಲ್ಲಿ ಬಂದ ಲಾರಿ ಮಣ್ಣಿನಲ್ಲಿ ಹುದುಗಿ ಮಧ್ಯಾಹ್ನದವರೆಗೂ ಪರದಾಡಬೇಕಾಗಿ ಬಂತು. ಬಳಿಕ ಒಂದು ಬೈಕ್ ಒಂದು ಕಾರು ಕೂಡ ಈ ಕೆಸರ ರಸ್ತೆಗೆ ಸಿಲುಕಿತು.
ರಸ್ತೆ ದುರಸ್ತಿ ಪ್ರಗತಿಯ ಬಗ್ಗೆ ಸೂಚನೆ ಫಲಕಗಳಿಲ್ಲದಿರುವುದರಿಂದ ವಾಹನ ಸವಾರರು ಅಂದಾಜು ಸಿಗದೆ ಈ ಅಗೆದ ಗುಂಡಿಗಳಿಗೆ ಬಿದ್ದೇಳುವಂತಾಗಿದೆ. ಪರ ಊರಿನಿಂದ ಬರುವವರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಈಗಾಗಲೇ ಹಲವು ದ್ವಿಚಕ್ರ, ಕಾರುಗಳು ಅಪಘಾತಕ್ಕೆ ಒಳಗಾಗುತ್ತಿವೆೆ ಎನ್ನುತ್ತಾರೆ ಸ್ಥಳೀಯರು. ವಾರದೊಳಗೆ ಕೆಲಸ
ತತ್‌ಕ್ಷಣ ಡಾಮರು ಕಾಮಗಾರಿ ಕೈಗೊಂಡಲ್ಲಿ ಒಳಗಿಂದೊಳಗೆ ಮಣ್ಣು ಕುಸಿದು ಹೊಂಡ ಬಿದ್ದು ಮತ್ತೆ ಹಿಂದಿನಂತೆಯೆ ಈ ಡ್ರೈನೇಜ್ ಕೊಳವೆಗೆ ಹಾನಿಯಾಗಲಿದೆ. ಸದ್ಯ ನೀರು ಹಾಕಿ ಮಣ್ಣನ್ನು ಸರಿಯಾಗಿ ಹುದುಗುವಂತೆ ಮಾಡಿ ಬಳಿಕ ಅದರ ಮೇಲೆ ಮಣ್ಣು ತುಂಬಿ ವಾರದೊಳಗೆ ಡಾಮರು ಕೆಲಸ ನಡೆಸಲಾಗುತ್ತದೆ. ಸದ್ಯ ಸೂಚನೆ ಫಲಕ ಅಳವಡಿಕೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು. ಸಾರ್ವಜನಿಕರ ಸಹಕಾರ ಬೇಕಿದೆ.
-ಮಾನಸಾ ಪೈ,
ತೆಂಕಪೇಟೆ ನಗರಸಭೆ ಸದಸ್ಯರು, ಉಡುಪಿ