Advertisement
ಕಂಪ್ಯೂಟರ್ ಕಾರಣದಿಂದ ಬರುವ ಬಹುಮುಖ್ಯ ರೋಗಗಳ ಪೈಕಿ ಕತ್ತು ನೋವೂ ಒಂದು. ಪ್ರಸ್ತುತ ದಿನಗಳಲ್ಲಿ ಕುತ್ತಿಗೆ ನೋವಿನ ಕಾರಣ ಸಾಮಾನ್ಯವಾಗಿಬಿಟ್ಟಿದೆ. ಕುತ್ತಿಗೆ ನೋವಿನ ಕಾರಣ ಕುತ್ತಿಗೆಗೆ ಪಟ್ಟಿ ಧರಿಸಿಕೊಂಡು ಓಡಾಡುವವರ ಸಂಖ್ಯೆಯೂ ಜಾಸ್ತಿಯಾಗಿದೆ.
ಬೆನ್ನೆಲುಬಿನಲ್ಲಿರುವ ಬೆನ್ನು ಹುರಿಯ ಜೋಡಣೆಯಲ್ಲಿ ನಮಗೇ ಗೊತ್ತಿಲ್ಲದಂತೆ ಸ್ವಲ್ಪ ವ್ಯತ್ಯಾಸವಾದಾಗ ಕತ್ತು ನೋವು ಬರುತ್ತದೆ. ಕುತ್ತಿಗೆಯಲ್ಲಿ ಶುರುವಾಗುವ ನೋವು ಬೆನ್ನು, ಭುಜ, ಕೈ ಬೆರಳಿಗೂ ಹರಡುವುದು ಸಾಮಾನ್ಯವಾಗುತ್ತಿದೆ. ಕುಳಿತುಕೊಳ್ಳುವ ಭಂಗಿಯೂ ಕತ್ತು ನೋವಿಗೆ ಕಾರಣವಾಗುತ್ತದೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಹಲವರಿಗೆ ಕತ್ತು ನೋವು ಬರುವುದು ಇದೇ ಕಾರಣಕ್ಕಾಗಿ ಕಂಪ್ಯೂಟರ್‌ನ ಪರದೆ ಕಣ್ಣಿಗೆ ಸಮಾನಾರ್ಥವಾಗಿ ಇರಬೇಕು. ಸ್ವಲ್ಪ ಎತ್ತರ ತಗ್ಗು ಇದ್ದರೂ ಕತ್ತು ನೋವು ಬರುವ ಸಾಧ್ಯತೆ ಇರುತ್ತದೆ. ಮಲಗುವುವ ರೀತಿಯಿಂದಲೂ ಕತ್ತು ನೋವು
ಮಲಗುವುವ ರೀತಿಯಿಂದಲೂ ಕತ್ತು ನೋವು ಬರುತ್ತದೆ. ಶಿಸ್ತುಬದ್ಧವಾಗಿ ಮಲಗದೆ, ಒಟ್ಟಾರೆಯಾಗಿ ಮಲಗಿದರೆ ಕತ್ತು ನೋವು ಕಾಡಬಹುದು. ಕವಚಿ ಮಲಗುವ ಅಭ್ಯಾಸ ಇದ್ದವರು ಉಸಿರಾಡಲು ತಲೆಯನ್ನು ಎಡ ಅಥವಾ ಬಲಕ್ಕೆ ಇಡುತ್ತಾರೆ. ಇದರಿಂದ ನರಗಳಿಗೆ ಒತ್ತಡ ಲಭಿಸಿ ಕತ್ತು ನೋವು ಬರುವ ಸಾಧ್ಯತೆ ಇರುತ್ತದೆ.
Related Articles
Advertisement
ಪ್ರಥಮ ಚಿಕಿತ್ಸೆಕತ್ತು ನೋವು ಅಥವಾ ಕುತ್ತಿಗೆ ನೋವು ಪ್ರಸ್ತುತ ಸರ್ವ ಸಾಮಾನ್ಯವಾಗಿ ಕಾಡುವ ರೋಗವಾಗಿದೆ. ಹೆಚ್ಚು ಸಮಯ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಕತ್ತು ನೋವು ಸಹಜವಾಗಿಯೇ ಕಾಡುತ್ತದೆ. ನೋವು ಕಾಣಿಸಿಕೊಂಡ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ಬರುವುದಕ್ಕೆ ಮುಂಚೆಯೇ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಸಣ್ಣ ಮಟ್ಟಿನಲ್ಲಿ ನೋವು ಕಾಣಿಸಿಕೊಂಡರೆ ಕುತ್ತಿಗೆಯನ್ನು ನಿಧಾನಕ್ಕೆ ಸುತ್ತಲೂ ತಿರುಗಿಸುತ್ತಿರಬೇಕು. ಗಡಿಯಾರದಂತೆ ಎಡ-ಬಲ, ಮೇಲೆ-ಕೆಳಗೆ ಕುತ್ತಿಗೆಯನ್ನು ವಾಲಿಸುತ್ತಿರುವುದರಿಂದ ಕುತ್ತಿಗೆ ನೋವು ಕಡಿಮೆ ಮಾಡಬಹುದು. ಕುರ್ಚಿ ಮೇಲೆ ನೇರವಾಗಿ ಕುಳಿತು ಎದೆಯ ಮಟ್ಟಕ್ಕೆ ಗದ್ದವನ್ನು ಭಾಗಿಸಿದರೆ ಸ್ವಲ್ಪ ಶಮನಕಾರಿಯಾಗುತ್ತದೆ. ಎಡಕಿವಿಯನ್ನು ಎಡಭುಜಕ್ಕೆ, ಬಲಕಿವಿಯನ್ನು ಬಲಭುಜಕ್ಕೆ ತಾಕುವುದರಿಂದ ಮತ್ತು 20 ಸೆಕೆಂಡ್ ಕಾಲ ಹಾಗೆಯೇ ಇರುವುದರಿಂದ ಸಣ್ಣ ಮಟ್ಟಿನ ಕುತ್ತಿಗೆ ನೋವು ನಿವಾರಣೆಯಾಗುತ್ತದೆ. ವ್ಯಾಯಾಮವೇ ಮದ್ದು
ಯಾವುದೇ ನೋವು ಕಾಣಿಸಿಕೊಂಡರೂ ಆರಂಭಿಕ ಹಂತದಿಂದ ಬೆಳೆಯಲು ಬಿಡದೆ, ತತ್‌ಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಸೂಕ್ತ ವ್ಯಾಯಾಮಶೈಲಿಯನ್ನು ದಿನನಿತ್ಯದ ಭಾಗವಾಗಿಸಿದರೆ ಕತ್ತು ನೋವಿನಿಂದ ಮುಕ್ತಿ ಪಡೆಯಬಹುದು. ಕತ್ತುನೋವಿಗೆ ಹಲವು ಕಾರಣ
ಕಂಪ್ಯೂಟರ್ ಕೆಲಸ ಮಾಡುವವರಲ್ಲಿ ಕತ್ತು ನೋವು ಸಾಮಾನ್ಯ. ವಯಸ್ಸಾದಂತೆ ಎಲುಬಿನ ಸವೆತ ಉಂಟಾಗಿ ಕತ್ತು ನೋವು ಬರುತ್ತದೆ. ತಲೆ ಮೇಲೆ ಭಾರ ಹೊರುವವರು, ಅರ್ಹವಲ್ಲದ ಭಂಗಿಯಲ್ಲಿ ಕುಳಿತು ಮೊಬೈಲ್, ಲ್ಯಾಪ್‌ಟಾಪ್ ಬಳಕೆ ಮಾಡುವುದು, ಕುತ್ತಿಗೆ ಬಗ್ಗಿಸಿ ಮೊಬೈಲ್ ನೋಡುತ್ತಾ ಕೂರುವುದು, ನಿರಂತರ ತಲೆ ಅಲುಗಾಡಿಸದೆ, ಒಂದೇ ಭಂಗಿಯಲ್ಲಿ ಕುಳಿತು ನಿರಂತರ ಕೆಲಸ ಮಾಡುವುದು ಮುಂತಾದವು ಬೆನ್ನು ನೋವಿಗೆ ಕಾರಣ. - ಧನ್ಯಾ ಬಾಳೆಕಜೆ