ಮುಂಬಯಿ: ದೇಶದ ಮಟ್ಟಿಗೆ “ಕೋವಿಡ್ ಕ್ಯಾಪಿಟಲ್’ ಆಗಿ ಮಾರ್ಪಟ್ಟಿರುವ ಮುಂಬಯಿನಲ್ಲಿ ಮತ್ತೂಂದು ಎಡವಟ್ಟು ಉಂಟಾಗಿದೆ. ಮೃತಪಟ್ಟ ರೋಗಿಯ ಕೋವಿಡ್ ಟೆಸ್ಟ್‌ನ ವರದಿಗೂ ಕಾಯದೆ ಆಸ್ಪತ್ರೆ ಸಿಬ್ಬಂದಿ ಆತನ ಮೃದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು. ನಂತರ ಫಲಿತಾಂಶ ಬಂದಾಗ ಅಸುನೀಗಿದ ವ್ಯಕ್ತಿಗೆ ಸೋಂಕು ಇದ್ದದ್ದು ದೃಢವಾಗಿತ್ತು. ಹೀಗಾಗಿ, 500ಕ್ಕೂ ಅಧಿಕ ಮಂದಿಗೆ ಸಮಸ್ಯೆ ಉಂಟಾಗಿದೆ. ಈ ಪೈಕಿ ಅತಿ ಹತ್ತಿರದ 40 ಮಂದಿಯ ಸ್ಥಿತಿ ಅಪಾಯದಲ್ಲಿದೆ ಎಂದು ತಿಳಿದು ಬಂದಿದೆ. ಪಿತ್ತಜನಕಾಂಗದ ಸಮಸ್ಯೆಯೆಂದು 55 ವರ್ಷದ ವ್ಯಕ್ತಿಯೊಬ್ಬ ವಸಾಯ್‌ನಲ್ಲಿರುವ ದಿ ಕಾರ್ಡಿನಲ್ ಗ್ರೇಸಿ ಯಸ್ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ. ಜ್ವರ ಲಕ್ಷಣವೂ ಇದ್ದಿದ್ದರಿಂದ ಆತನ ಗಂಟಲು ದ್ರವ ಮಾದರಿಯನ್ನು ಲ್ಯಾಬ್‌ಗ ಕಳಿಸಲಾಗಿತ್ತು. ಫಲಿತಾಂಶ ಬರುವುದಕ್ಕೂ ಮುನ್ನವೇ ಆಸ್ಪತ್ರೆ ಸಿಬ್ಬಂದಿ ಆತನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು. ನಂತರ
ಫಲಿತಾಂಶ ಬಂದಾಗ ಆತನಿಗೆ ಸೋಂಕು ದೃಢಪಟ್ಟಿತ್ತು.
ಶವ ಎಸೆದೆ ಅವಮಾನ: ಪುದುಚೇರಿಯ ಆರೋಗ್ಯ ಸಿಬ್ಬಂದಿ, ಕೋವಿಡ್ ಸೋಂಕಿನಿಂದ ಮೃತಪಟ್ಟವನ ಪಾರ್ಥಿವ ಶರೀರವನ್ನು ಎಸೆದು ಅಪಮಾನಿಸಿದ್ದಾರೆ. ಸ್ಮಶಾನದ ಹೊಂಡದೊಳಗೆ ಶವವನ್ನು ನಿಧಾನಕ್ಕೆ ಇಡುವ ಬದಲು, ಮೇಲಿನಿಂದಲೇ ಎಸೆದಿರುವ ದೃಶ್ಯದ ವಿಡಿಯೊ ವೈರಲ್ ಆಗಿದೆ. 30 ಸೆಕೆಂಡಿನ ವಿಡಿಯೊದಲ್ಲಿ ಶವ ಹಿಡಿದು ಕೊಂಡಿದ್ದ ನಾಲ್ಕು ಮಂದಿಯಲ್ಲಿ ಒಬ್ಟಾತ “ಇಲ್ಲಿಂದಲೇ ಎಸೆಯೋಣ’ ಎಂದಿರುವುದು ಸ್ಪಷ್ಟವಾಗಿದೆ. “ಕೋವಿಡ್ ದಿಂದ ಮೃತಪಟ್ಟ ವ್ಯಕ್ತಿಗೆ ಅಪಮಾನಿಸಿರುವುದು ಕೇಂದ್ರ ಸರಕಾರದ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ.