Advertisement

ರಿಸ್ಕ್ ಎದುರಿಸಿದಾಗಲೇ ಯಶಸ್ಸು

01:24 PM Mar 05, 2017 | Team Udayavani |

ಹುಬ್ಬಳ್ಳಿ: ಉದ್ಯಮ ಸೇರಿದಂತೆ ಯಾವುದೇ ಕ್ಷೇತ್ರವಿರಲಿ ಅಪಾಯ (ರಿಸ್ಕ್) ಎದುರಾಗತ್ತದೆ. ಲೆಕ್ಕಾಚಾರದ ಅಪಾಯ ತೆಗೆದುಕೊಂಡು ಅದನ್ನು ಎದುರಿಸಿದಾಗಲೇ ಯಶಸ್ಸು- ಸಾಧನೆ ನಿಮ್ಮದಾಗಲಿದೆ ಎಂಬುದನ್ನು ಮರೆಯಬಾರದು ಎಂದು ಸವೊìಕಂಟ್ರೋಲ್ಸ್‌ ಇಂಡಿಯಾ ಕಂಪೆನಿ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ ಧಡೋತಿ ಅಭಿಪ್ರಾಯಪಟ್ಟರು.

Advertisement

ಕೆಎಲ್‌ಇ-ಸಿಟಿಐಇ ಆಯೋಜಿಸಿದ್ದ ಉದ್ಯಮಶೀಲತೆ ಸಮ್ಮೇಳನದಲ್ಲಿ ಮಾತನಾಡಿದ ಅವರು, ಅಪಾಯದ ಜೀವನದಲ್ಲಿದ್ದಾಗಲೇ ಅದನ್ನು ಎದುರಿಸಲು ಹೊಸ ಚಿಂತನೆ, ಪರಿಹಾರ ಮಾರ್ಗ ಗೋಚರವಾಗುತ್ತದೆ. ಆರಾಮ ವಲಯದಲ್ಲಿದ್ದರೆ ಸಾಧನೆ ಸಾಧ್ಯವಾಗದು. ಹಾಗೆಂದು ಮಿತಿಮೀರಿದ ಅಪಾಯ ತೆಗೆದುಕೊಂಡರೆ ವೈಫ‌ಲ್ಯ ಕಾಣಬೇಕಾಗುತ್ತದೆ.

ಅದಕ್ಕಾಗಿಯೇ ಲೆಕ್ಕಾಚಾರದ ಅಪಾಯ ಎದುರಿಸುವುದು ಉತ್ತಮ ಮಾರ್ಗ ಎಂದರು. ಉದ್ಯಮ ಎಂದರೇನೆ ಫ‌ುಟ್‌ಬಾಲ್‌ ಇದ್ದಂತೆ. ಸರಕಾರ, ತೆರಿಗೆ, ಉತ್ಪನ್ನ, ಮಾರುಕಟ್ಟೆ ಸಮಸ್ಯೆಯಂತಹವುಗಳು ಒದೆಯುತ್ತಲೇ ಇರುತ್ತವೆ. ಇವೆಲ್ಲವನ್ನು ಎದುರಿಸಿದಾಗ ಉದ್ಯಮ ಯಶಸ್ಸಿನ ದಾರಿ ಹಿಡಿಯಲಿದೆ. 

ಮುಖ್ಯವಾಗಿ ಭಾರತದಲ್ಲಿ ವಿಶ್ವಾಸ ಮತ್ತು ಜ್ಞಾನ ಕೊರತೆ ಸಾಕಷ್ಟಿದೆ ಎಂದರು. ಇಂಜನೀಯರ್‌ಗಳು ಸೇರಿದಂತೆ ಅನೇಕರು ನಿಜವಾದ ಕೌಶಲ ಕಳೆದುಕೊಳ್ಳುತ್ತಿದ್ದಾರೆಯೇ ಎಂದೆನಿಸುತ್ತಿದೆ. ಸಣ್ಣದಾದ ಎಲೆಕ್ಟ್ರಿಕ್‌ ಸಮಸ್ಯೆ ಎದುರಾದರೂ ಇಂಜನಿಯರ್‌ ಆಗಿದ್ದವರು ದುರಸ್ತಿದಾರ ಬರುವವರೆಗೆ ಕಾಯುತ್ತಾರೆ ವಿನಃ ಅದರ ದುರಸ್ತಿ ಉಸಾಬರಿಗೆ ಹೋಗುವುದಿಲ್ಲ.

ನಮಗೆಲ್ಲ ಗೂಗಲ್‌ ಇಂದು ಗುರುವಾಗಿದೆ. ಇಂದಿನ ಇಂಟರ್‌ ನೆಟ್‌ ಯುಗದಲ್ಲಿ ಎಲ್ಲ ಮಾಹಿತಿಯೂ ಲಭ್ಯವಾಗುತ್ತಿದ್ದು, ಇಂಜನಿಯರಿಂಗ್‌ ಪಠ್ಯ ಬದಲಾವಣೆ ಕಾಣಬೇಕಾಗಿದೆ ಎಂದು ಹೇಳಿದರು. ನವೋದ್ಯಮಿಗೆ ಇಂದು ಸಾಕಷ್ಟು ಸಂಪರ್ಕ ಸೌಲಭ್ಯ ಇದೆ. ವಿಶ್ವದ ಯಾವುದೇ ಮೂಲಕ ಸಂಪರ್ಕ, ಮಾಹಿತಿ ಕ್ಷಣ ಮಾತ್ರದಲ್ಲಿ ತೆಗೆಯಬಹುದು.

Advertisement

ಸ್ಥಳ ಮುಖ್ಯವಲ್ಲ, ನಮ್ಮ ಸಾಧನೆ ಏನಾಬೇಕೆಂಬ ಲಕ್ಷ್ಯ ಮುಖ್ಯವಾಗಿರುತ್ತದೆ. ನಾವು ಯಾವಾಗಲೂ ಅರಳುವ ಕಮಲವಾಗಬೇಕು. ಕಮಲಕ್ಕೆ ಕೊಚ್ಚೆ, ಐಷಾರಾಮಿ ಹೊಟೇಲ್‌ ಎಂಬುದಿಲ್ಲ. ಅದು ಬೆಳಗಾದರೆ ಅರಳುತ್ತದೆ ಎಂದರು. ಅಪ್ಪೋರೆಸ್ಟ್‌ ಸಂಸ್ಥಾಪಕ, ಸಿಇಒ ಸುಭೆಂದು ಶರ್ಮಾ ಮಾತನಾಡಿ, ಅರಣ್ಯ ಬೆಳೆಸುವುದನ್ನೇ ಸಾಮಾಜಿಕ ಉದ್ಯಮವಾಗಿಸಿಕೊಂಡ ಬಗ್ಗೆ ವಿವರಿಸಿದರು.

ಮನೆ, ಕಚೇರಿ ಹಿತ್ತಲು ಪ್ರದೇಶವನ್ನು ಅರಣ್ಯ ಪ್ರದೇಶವಾಗಿ ಬೆಳೆಸುವ ಕಾರ್ಯವನ್ನು ತಮ್ಮ ಕಂಪೆನಿ ಮಾಡಿಕೊಡುತ್ತಿದ್ದು, ಇದೀಗ ಆರು ದೇಶಗಳಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತಿದೆ ಎಂದರು. ನೆದರ್‌ಲೆಂಡ್‌ನ‌ಲ್ಲಿ 5-6ನೇ ತರಗತಿಯಲ್ಲಿಯೇ ಅರಣ್ಯ ಕುರಿತ ಪಠ್ಯ ಅಳವಡಿಸಲಾಗಿದೆ. ನನ್ನ ಅರಣ್ಯೀಕರಣ ವಿಧಾನವನ್ನು ಮುಕ್ತವಾಗಿರಿಸಿದ್ದೇನೆ.

ಇಂಜನೀಯರಿಂಗ್‌ ಶಿಕ್ಷಣವನ್ನು ಇದೇ ಹುಬ್ಬಳ್ಳಿಯಲ್ಲಿ ಮುಗಿಸಿ ಟೊಯೋಟಾ ಕಂಪೆನಿಯಲ್ಲಿ ಮ್ಯಾಕಾನಿಕಲ್‌ ಇಂಜನೀಯರ್‌ ಆಗಿ ಕೆಲಸಕ್ಕೆ ಸೇರಿದೆ. ಅರಣ್ಯ ಬೆಳೆಸುವ ನನ್ನ ಹವ್ಯಾಸವೇ ಇದೀಗ ನನ್ನ ಉದ್ಯಮವಾಗಿದೆ ಎಂದರು. ಅನಂತರ ವಿವಿಧ ತಾಂತ್ರಿಕ ಗೋಷ್ಠಿ ನಡೆದವು.

ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಶ ಶೆಟ್ಟರ ಸೇರಿದಂತೆ ಅನೇಕರು ಇದ್ದರು. ಪ್ರೊ| ನಿತಿನ್‌ ಕುಲಕರ್ಣಿ ಸ್ವಾಗತಿಸಿದರು. ಅನಂತರ ಉದ್ಯಮಾಸಕ್ತವಿದ್ಯಾರ್ಥಿಗಳಿಂದ ಉದ್ಯಮ ಚಿಂತನೆ  ಪ್ರದರ್ಶನ ಸ್ಪರ್ಧೆ ನಡೆಯಿತು. ವಿಜೇತರ ವಿದ್ಯಾರ್ಥಿಗಳಿಗೆ 50 ಸಾವಿರ ರೂ. ಬಹುಮಾನ ನೀಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next