Advertisement
ಮಂಗಳವಾರ ದಾಖಲಾದ ದೇಶದಲ್ಲಿ ಅತೀ ಹೆಚ್ಚು ಉಷ್ಣಾಂಶವಿರುವ 10 ನಗರಗಳಲ್ಲಿ ಕರ್ನಾಟಕದ ಕಲಬುರಗಿ ಜಿಲ್ಲೆ ಕೂಡ ಇದೆ. ಕಲಬುರಗಿಯಲ್ಲಿ ಮಂಗಳವಾರ 43 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿತ್ತು.
ಮಳೆ ಇಲ್ಲದೆ ನೀರಿನ ಸಮಸ್ಯೆ ದಿನ ದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಬೇಗನೆ ಮಳೆ ಸುರಿಯುವಂತೆ ಪ್ರಾರ್ಥಿಸಿ ವಿವಿಧ ದೇಗುಲಗಳಲ್ಲಿ ಈಗಾಗಲೇ ಸೀಯಾಳ ಅಭಿಷೇಕ ನಡೆದಿದೆ. ಮೇ 15ರಂದು ಎಲ್ಲ ಧರ್ಮದವರು ಅವರವರ ಶ್ರದ್ಧಾಕೇಂದ್ರ ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸುವಂತೆ ಈಗಾಗಲೇ ಮನವಿ ಮಾಡಲಾಗಿದ್ದು, ಅದಕ್ಕೆ ಹೆಚ್ಚಿನವರು ತಯಾರಿ ನಡೆಸಿದ್ದಾರೆ.
Related Articles
ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯು ಮಾರ್ಚ್‌ನಿಂದ ಮೇ ತಿಂಗಳಿನವರೆಗೆ ಬೀಳುತ್ತದೆ. ಬಳಿಕ ಮೇ ಕೊನೆಯ ವಾರದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶ ಪಡೆಯುತ್ತದೆ. ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ 227.1 ಮಿ.ಮೀ. ವಾಡಿಕೆ ಮಳೆಯ ಪೈಕಿ 616.9 ಮಿ.ಮೀ. ಸರಾಸರಿ ಮಳೆಯಾಗಿ ಶೇ.172ರಷ್ಟು ಮಳೆ ಹೆಚ್ಚಳವಾಗಿತ್ತು. ಆದರೆ ಈವರೆಗೆ ಹೋಲಿಕೆ ಮಾಡಿದರೆ ಪೂರ್ವ ಮುಂಗಾರು ದುರ್ಬಲವಾಗಿದೆ.
Advertisement
ಮಳೆ ಕೊರತೆದ.ಕ.ದಲ್ಲಿ ಸದ್ಯ ಶೇ.53ರಷ್ಟು ಮಳೆ ಕೊರತೆ ಇದೆ. ಅಲ್ಲದೆ, ಜಿಲ್ಲೆಗೆ ಹೋಲಿಕೆ ಮಾಡಿದರೆ ಮಂಗಳೂರು ನಗರದಲ್ಲಿ ಅತೀ ಕಡಿಮೆ ಪೂರ್ವ ಮುಂಗಾರು ಮಳೆಯಾಗಿದೆ. ಸದ್ಯ ಶೇ.90ರಷ್ಟು ಮಳೆ ಕೊರತೆ ಅನುಭವಿಸುತ್ತಿದೆ. ಬೆಳ್ತಂಗಡಿಯಲ್ಲಿ ಶೇ. 43, ಬಂಟ್ವಾಳ ತಾಲೂಕಿನಲ್ಲಿ ಶೇ. 72 ಮಳೆ ಕೊರತೆ ದಾಖಲಾಗಿದೆ. ಸುಳ್ಯದಲ್ಲಿ ಶೇ. 30, ಪುತ್ತೂರಿನಲ್ಲಿ ಶೇ.55 ಮಳೆ ಕೊರತೆ ಇದೆ. ಕರಾವಳಿಯ ಸೆಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಧ್ಯಾಹ್ನ ವೇಳೆ ಸುಮಾರು 37 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಸರಾಸರಿ ಉಷ್ಣಾಂಶ ದಲ್ಲಿಯೂ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2018ರಲ್ಲಿ ಮೇ ತಿಂಗಳ 6 ಮತ್ತು 8ನೇ ತಾರೀಕಿನಂದು ಅತೀ ಹೆಚ್ಚು ಅಂದರೆ 36.9 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಇನ್ನು, 2017ರ ಮೇ 1ರಂದು 37 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾದದ್ದು ಮೇ ತಿಂಗಳ ದಾಖಲೆಯಾಗಿದೆ. ಮಳೆ ತರುವ ಮಾರುತಗಳಿಲ್ಲ
ಕಳೆದ ಬಾರಿಯ ಪೂರ್ವ ಮುಂಗಾರು ಮಳೆಗೆ ಹೋಲಿಕೆ ಮಾಡಿದರೆ ಈ ಬಾರಿ ಕಡಿಮೆ ಮಳೆಯಾಗಿದೆ. ಸದ್ಯ ಉತ್ತಮ ಮಳೆ ತರುವಂತಹ ಯಾವುದೇ ಮಾರುತವಿಲ್ಲ. ಮುಂದಿನ ದಿನಗಳಲ್ಲಿ ಕರಾವಳಿಯ ಕೆಲವು ಪ್ರದೇಶದಲ್ಲಿ ಸಾಧಾರಣ ಮಳೆಯಾಗಬಹುದು. ಮುಂದಿನ ದಿನಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗಬಹುದು.
– ಶ್ರೀನಿವಾಸ ರೆಡ್ಡಿ, ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ತಾಲೂಕುವಾರು ಮಳೆ ಕೊರತೆ
ಮಳೆ ಕೊರತೆ (ಶೇ)
ಮಂಗಳೂರು 91
ಸುಳ್ಯ 30
ಪುತ್ತೂರು 55