Advertisement

ಏರುತ್ತಿದೆ ಉರಿಬಿಸಿಲು; ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಳ

01:34 AM Feb 24, 2020 | Sriram |

ವಿಶೇಷ ವರದಿಮಹಾನಗರ: ಕೆಲವು ದಿನಗಳಿಂದ ನಗರದಲ್ಲಿ ಅಬ್ಟಾ … ಏನ್‌ ಸೆಕೇನಪ್ಪಾ ! ಎಂದು ಹೇಳಿಕೊಂಡವರೇ ಹೆಚ್ಚು. ಏಕೆಂದರೆ ಕೆಲವುದಿನಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ಗರಿಷ್ಠ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ಸುಮಾರು 36 ರಿಂದ 37 ಡಿ.ಸೆ. ಇರುವ ಉಷ್ಣಾಂಶ ಈ ವರ್ಷ 39ರ ಗಡಿ ತಲುಪಿದೆ. ಇದೇ ರೀತಿ ತಾಪಮಾನ ಏರಿಕೆಯಾದರೆ ಮುಂಬರುವ ದಿನಗಳಲ್ಲಿ 40 ಡಿ.ಸೆ.ಗೆ ಗರಿಷ್ಠ ಉಷ್ಣಾಂಶ ತಲುಪಿದರೂ ಅಚ್ಚರಿಯಿಲ್ಲ.

Advertisement

ಇತ್ತ ಬಿಸಿಲಿನ ಬೇಗೆ ತಣಿಯಲು ಕೆಲವರು ತಂಪು ಪಾನೀಯದ ಮೊರೆ ಹೋಗುತ್ತಿದ್ದರೆ, ಇನ್ನು ಕೆಲವರು ಬೀಚ್‌ನ ಕಡೆಗೆ ಬರುತ್ತಿದ್ದಾರೆ.

ಮಂಗಳೂರಿನಲ್ಲಿರುವ ಪಣಂಬೂರು ಬೀಚ್‌ ಮತ್ತು ತಣ್ಣೀರುಬಾವಿ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಣಂಬೂರು ಬೀಚ್‌ಗೆ ಮಾಮೂಲಿ ದಿನಗಳಲ್ಲಿ ಸುಮಾರು 4,000ದಷ್ಟು ಪ್ರವಾಸಿಗರು ಆಗಮಿಸುತ್ತಿದ್ದು, ವೀಕೆಂಡ್‌ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ 15,000 ದಾಟುತ್ತಿದೆ.

ಇನ್ನು ತಣ್ಣೀರುಬಾವಿ ಬೀಚ್‌ನಲ್ಲಿ ಮಾಮೂಲಿ ದಿನ ಸಾವಿರಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಬರುತ್ತಿದ್ದು, ವೀಕೆಂಡ್‌ ಸಮಯದಲ್ಲಿ 6,000 ರಷ್ಟು ಏರಿಕೆಯಾಗುತ್ತಿದೆ. ಬಂಗ್ರಕೂಳೂರು, ಸುಲ್ತಾನ್‌ಬತ್ತೇರಿ ಪ್ರದೇಶ ಕೂಡ ಪ್ರವಾಸಿಗರ ಫೆವರೇಟ್‌ ತಾಣವಾಗುತ್ತಿದೆ.

ಬಿಸಿಲಿನ ಝಳ ಏರಿಕೆಯಾದಂತೆ ಸಾರ್ವಜನಿಕರಿಂದ ಕಲ್ಲಂಗಡಿ, ಕರಬೂಜ, ಸೀಯಾಳ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕೆಲವು ತಿಂಗಳಿಗೆ ಹೋಲಿಸಿದರೆ ಸೀಯಾಳಕ್ಕೆ ದರ ಕೂಡ ಜಾಸ್ತಿಯಾಗಿದ್ದು ಸದ್ಯ 35 ರಿಂದ 40 ರೂ. ಇದೆ.

Advertisement

ಪ್ರವಾಸಿ ತಾಣಗಳಲ್ಲಿ ಹೆಚ್ಚಾಗಿ ಸೀಯಾಳ ಮಾರಾಟವಾಗುತ್ತಿದೆ. ಕಲ್ಲಂಗಡಿಗೆ ಕೆ.ಜಿ.ಗೆ 25 ರೂ. ಇದ್ದು, ಜ್ಯೂಸ್‌ಗೂ ಮಾರುಕಟ್ಟೆಯಲ್ಲಿ ಡಿಮ್ಯಾಂಡ್‌ ಶುರುವಾಗಿದೆ.

ಸಾಂಕ್ರಾಮಿಕ ರೋಗ; ಎಚ್ಚರ ಅಗತ್ಯ
ತಾಪಮಾನ ಹೆಚ್ಚಿದ ಕಾರಣದಿಂದಾಗಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲಿಯೂ ಹೆಚ್ಚಿದ ತಾಪಮಾನದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ತುರಿಕೆ, ಹುಣ್ಣು, ಗಂಟಲು ನೋವು, ತಲೆನೋವು, ಶೀತ-ಜ್ವರ ಸಹಿತ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಯಾವುದೇ ಆರೋಗ್ಯ ಸಮಸ್ಯೆ ಗಳು ಕಾಣಿಸಿಕೊಂಡರು ತಜ್ಞ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

ಪ್ರವಾಸಿಗರ ಸಂಖ್ಯೆ ಹೆಚ್ಚಳ
ಮಂಗಳೂರಿನ ಬೀಚ್‌ಗಳಿಗೆ ಬರುವಂತಹ ಪ್ರವಾಸಿಗರ ಸಂಖ್ಯೆ ಏರುತ್ತಲಿದೆ. ಒಂದೆಡೆ ದಿನದಿಂದ ದಿನಕ್ಕೆ ಸೆಕೆ ಹೆಚ್ಚಾಗುತ್ತಿದ್ದು, ಬೀಚ್‌ನತ್ತ ಪ್ರವಾಸಿಗರು ಆಗಮಿಸುತ್ತಿದ್ದಾರೆ. ನಗರದ ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲಿ ವೀಕೆಂಡ್‌ಗಳಲ್ಲಂತೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿರುತ್ತಾರೆ.
-ಯತೀಶ್‌ ಬೈಕಂಪಾಡಿ, ಪಣಂಬೂರು ಬೀಚ್‌ ಅಭಿವೃದ್ಧಿ ನಿಗಮನದ ಸಿಇಒ

ಹೆಚ್ಚು ನೀರು ಕುಡಿಯಿರಿ
ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆ ಯಾಗುತ್ತಿದ್ದು, ದೇಹ ದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ನಿರ್ಜಲೀಕರಣ ತೊಂದರೆ ಅನುಭವಿಸಬಹುದು. ನಿರ್ಜಲೀಕರಣ ತಡೆ ಗಟ್ಟಲು ಲಿಂಬೆ ಪಾನಕ, ಎಳನೀರು, ನೀರು ಕುಡಿಯಬೇಕು. ಇದೇ ಕಾರಣಕ್ಕೆ ವೆನಾÉಕ್‌ ಆಸ್ಪತ್ರೆಯ ಅನೇಕ ಕಡೆಗಳಲ್ಲಿ ಶುದ್ಧ ಕುಡಿ ಯುವ ನೀರಿನ ಘಟಕ ಸ್ಥಾಪಿಸಲಾಗಿದೆ.
 - ಡಾ| ರಾಜೇಶ್ವರಿ ದೇವಿ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ

Advertisement

Udayavani is now on Telegram. Click here to join our channel and stay updated with the latest news.

Next