Advertisement

ರಿಷಿ ಮೂರನೇ ಚಿತ್ರ ಮಹಾರಥಿ

10:58 AM Jul 26, 2017 | Team Udayavani |

“ಆಪರೇಷನ್‌ ಅಲಮೇಲಮ್ಮ’ ಸಿನಿಮಾ ಹೊರಬರುತ್ತಿದ್ದಂತೆಯೇ, ಚಿತ್ರದ ನಾಯಕ ರಿಷಿಗೆ ಒಂದೊಂದೇ ಅವಕಾಶಗಳು ಹುಡುಕಿ ಬರತೊಡಗಿವೆ. ಹೇಮಂತ್‌ರಾವ್‌ ನಿರ್ದೇಶನದಲ್ಲಿ “ಕವಲು ದಾರಿ’ ಚಿತ್ರ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, ನಿರ್ಮಾಪಕ ಜಯಣ್ಣ ಅವರ ಬ್ಯಾನರ್‌ನಲ್ಲಿ ರಿಷಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ವೀರೇಂದ್ರ ಶೆಟ್ಟಿ ಆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಈ ಹೊತ್ತಿನ ಹೊಸ ಸುದ್ದಿ. ಅಂದಹಾಗೆ, ರಿಷಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ “ಮಹಾರಥಿ’ ಎಂದು ನಾಮಕರಣ ಮಾಡಲಾಗಿದೆ.

Advertisement

ನಿರ್ದೇಶಕ ವೀರೇಂದ್ರ ಶೆಟ್ಟಿ ಅವರಿಗೆ ಇದು ಕನ್ನಡದ ಮೊದಲ ಸಿನಿಮಾ. ಈ ಹಿಂದೆ ವೀರೇಂದ್ರ ಶೆಟ್ಟಿ ತುಳು ಭಾಷೆಯ “ಚಾಲಿಪೋಲಿಲು’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರ, ತುಳುನಾಡಿನಲ್ಲಿ ಅತ್ಯಂತ ಯಶಸ್ಸು ಪಡೆದಿತ್ತು. ವೀರೇಂದ್ರ ಶೆಟ್ಟಿ ಅವರು ಹೇಳಿದ ರೊಮ್ಯಾಂಟಿಕ್‌ ಕಾಮಿಡಿ ಕಥೆ, ನಿರ್ಮಾಪಕ ಜಯಣ್ಣ ಅವರಿಗೆ ಇಷ್ಟವಾಗಿದ್ದೇ ತಡ, ಅದನ್ನು ರಿಷಿ ಅವರಿಗೆ ಕೇಳಿಸಿ, ಅವರಿಂದ ಗ್ರೀನ್‌ಸಿಗ್ನಲ್‌ ಪಡೆದು, “ಮಹಾರಥಿ’ ಹೆಸರಲ್ಲಿ ಆ ಸಿನಿಮಾ ಮಾಡೋಕೆ ಅಣಿಯಾಗಿದ್ದಾರೆ ಜಯಣ್ಣ.

ಅಂದಹಾಗೆ, ರಿಷಿ ಅಭಿನಯದ “ಆಪರೇಷನ್‌ ಅಲಮೇಲಮ್ಮ’ ಈಗಷ್ಟೇ ಬಿಡುಗಡೆಯಾಗಿದೆ. ಆಗಸ್ಟ್‌ ಎರಡನೇ ವಾರದಲ್ಲಿ “ಕವಲು ದಾರಿ’ ಸಿನಿಮಾ ಶುರುವಾಗಲಿದೆ. ಆ ಚಿತ್ರದ ಬಳಿಕ ಜಯಣ್ಣ ನಿರ್ಮಾಣದ “ಮಹಾರಥಿ’ ಸಿನಿಮಾ ಮಾಡಲಿದ್ದಾರೆ ರಿಷಿ. ಅಂದಹಾಗೆ, ಈ ಚಿತ್ರಕ್ಕೆ ನಾಯಕಿ ಸೇರಿದಂತೆ ಇನ್ನುಳಿದ ತಾರಾಬಳಗದ ಆಯ್ಕೆ ಆಗಬೇಕಿದೆ. ಚಿತ್ರಕ್ಕೆ ಚರಣ್‌ರಾಜ್‌ ಸಂಗೀತ ನೀಡುತ್ತಿರುವುದು ಪಕ್ಕಾ ಆಗಿದೆ. ಉಳಿದಂತೆ, ಇಷ್ಟರಲ್ಲೇ ಇನ್ನಷ್ಟು ಮಾಹಿತಿ ಹೊರಬೀಳಲಿದೆ.

ಅದೇನೆ ಇರಲಿ, ರಿಷಿ ಈಗ ಬಿಜಿಯಾಗಿರುವುದಂತೂ ನಿಜ. ಕಳೆದ ಎರಡು ತಿಂಗಳಿನಿಂದಲೂ ಸುಮಾರು ಇಪ್ಪತ್ತು ಕಥೆಗಳನ್ನು ಕೇಳಿದ್ದಾರಂತೆ ರಿಷಿ. ಅವರು ಕೇಳಿದ ಕಥೆಗಳೆಲ್ಲವೂ ಬಹುತೇಕ ಹೊಸಬರದ್ದೇ ಎಂಬುದು ವಿಶೇಷ. ಸದ್ಯಕ್ಕೆ ಕೈಯಲ್ಲಿರುವ ಮೂರು ಸಿನಿಮಾ ಮುಗಿಸಿದ ಬಳಿಕವಷ್ಟೇ ಬೇರೆ ಸಿನಿಮಾ ಮಾಡಲು ನಿರ್ಧರಿಸಿರುವ ರಿಷಿ, ನವೆಂಬರ್‌ ಬಳಿಕ “ಮಹಾರಥಿ’ ಸಿನಿಮಾ ಮಾಡಲಿದ್ದಾರೆ. ಕಥೆಯಲ್ಲಿ ಹೊಸತನ ಇರಬೇಕು,

ಪಾತ್ರದಲ್ಲಿ ಗಟ್ಟಿತನ ಇರಬೇಕು ಎಂಬುದನ್ನು ಹೇಳುವ ರಿಷಿ ಅವರ ಮುಂದೆ ಇನ್ನೊಂದು ಸ್ಕ್ರಿಪ್ಟ್ ಕೂಡ ಬಂದಿದೆಯಂತೆ. ಅವರೇ ಹೇಳುವಂತೆ, ಅದು ಕನ್ನಡ ಸಿನಿಮಾರಂಗಕ್ಕೆ ಬೇರೆಯದ್ದೇ ಸಿನಿಮಾ ಆಗಲಿದೆಯಂತೆ. ಬಾಲಿವುಡ್‌ನ‌ ಪ್ರೊಡಕ್ಷನ್‌ವೊಂದರಿಂದ ಬಂದಿರುವ ಕಥೆ ಅದು. ಬಾಲಿವುಡ್‌ನ‌ಲ್ಲಿ  ಶೇಖರ್‌ ಕಪೂರ್‌ ಬಳಿ ಕೆಲಸ ಮಾಡಿದ್ದ ಇಸ್ಲಾಂವುದ್ದೀನ್‌ ಎಂಬುವರು ಕಥೆ ಹೇಳಿದ್ದಾರೆ. ಸದ್ಯ ರಿಷಿ ಕೈಯಲ್ಲಿರುವ ಮೂರು ಚಿತ್ರ ಮುಗಿಸಿ, ಆಮೇಲೆ ಆ ಸಿನಿಮಾದತ್ತ ಚಿತ್ತ ಹರಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next