Advertisement

ಡಿಸೆಂಬರ್‌ನಲ್ಲಿ ರಿಷಿ ಹೊಸ ಚಿತ್ರ

10:22 AM Oct 30, 2019 | Team Udayavani |

ಈ ಹಿಂದೆ ಯೋಗರಾಜ್‌ ಭಟ್‌ ಹಾಗೂ ಶಶಾಂಕ್‌ ಇವರಿಬ್ಬರ ನಿರ್ಮಾಣದಲ್ಲಿ ಸಿನಿಮಾವೊಂದು ಶುರುವಾಗಲಿದೆ ಎಂದು ಹೇಳಲಾಗಿತ್ತು. ಆ ಚಿತ್ರಕ್ಕೆ ರಿಷಿ ಹೀರೋ ಎನ್ನಲಾಗಿತ್ತು. ಆ ಚಿತ್ರ ಯಾವಾಗ ಶುರುವಾಗುತ್ತೆ ಎಂಬುದಕ್ಕೆ ಉತ್ತರ ಸಿಕ್ಕಿರಲಿಲ್ಲ. ಈಗ ಡಿಸೆಂಬರ್‌ನಲ್ಲಿ ಹೊಸ ಚಿತ್ರಕ್ಕೆ ಚಾಲನೆ ಸಿಗಲಿದೆ. ಸದ್ಯಕ್ಕೆ ಚಿತ್ರದ ಶೀರ್ಷಿಕೆ ಪಕ್ಕಾ ಆಗಿಲ್ಲ. ಈ ಕುರಿತು ಹೇಳುವ ಶಶಾಂಕ್‌, ” ಇದೇ ಮೊದಲ ಸಲ ಯೋಗರಾಜ್‌ಭಟ್‌ ಮತ್ತು ನಾನು ಸೇರಿಕೊಂಡು ರಿಷಿ ಚಿತ್ರ ನಿರ್ಮಿಸುತ್ತಿದ್ದೇವೆ.

Advertisement

ಇದೊಂದು ಮನರಂಜನೆಯ ಸಿನಿಮಾ. ಇಲ್ಲಿ “ಸೀರೆ’ ಪ್ರಮುಖ ಪಾತ್ರವಹಿಸಲಿದೆ. ಆದರೆ, ಆ ಸೀರೆ ಉಡುವ ನಾಯಕಿ ಯಾರು ಎಂಬುದು ಪಕ್ಕಾ ಆಗಿಲ್ಲ. ಇನ್ನು ಮೋಹನ್‌ ಸಿಂಗ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಯೋಗರಾಜ್‌ ಭಟ್‌ ಅವರೊಂದಿಗೆ ಕೆಲಸ ಮಾಡಿದ್ದ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ’ ಎಂದು ವಿವರ ಕೊಡುತ್ತಾರೆ ಶಶಾಂಕ್‌. ಸದ್ಯಕ್ಕೆ ಈ ಚಿತ್ರದ ಹೀರೋ ರಿಷಿ. ಅವರನ್ನು ಹೊರತುಪಡಿಸಿದರೆ, ಕಲಾವಿದರ ಆಯ್ಕೆ ನಡೆಯಬೇಕಿದೆ.

ಅರ್ಜುನ್‌ ಜನ್ಯ ಅವರ ಸಂಗೀತವಿದೆ. ಜ್ಞಾನಮೂರ್ತಿ ಅವರ ಛಾಯಾಗ್ರಹಣವಿದೆ.ಅದೇನೆ ಇರಲಿ, ಇಬ್ಬರು ನಿರ್ದೇಶಕರು ಸೇರಿ ರಿಷಿಗೆ ಬಂಡವಾಳ ಹೂಡುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರತಿಭಾವಂತ ನಿರ್ದೇಶಕರಿಗೆ ಅವಕಾಶ ಕೊಡುತ್ತಿದ್ದಾರೆ. ಅಂದಹಾಗೆ, ಯೋಗರಾಜ್‌ಭಟ್‌ ನಿರ್ದೇಶಿಸುತ್ತಿರುವ “ಗಾಳಿಪಟ 2′ ಚಿತ್ರಕ್ಕೆ ರಿಷಿ ಹೀರೋ ಎನ್ನಲಾಗಿತ್ತು. ಕೊನೆಯ ಕ್ಷಣದಲ್ಲಿ ರಿಷಿ ಆ ಚಿತ್ರದಲ್ಲಿ ಇಲ್ಲ ಎಂದು ಹೇಳಲಾಯಿತು. ಈಗ ಯೋಗರಾಜ್‌ ಭಟ್‌ ಅವರು ಶಶಾಂಕ್‌ ಜೊತೆ ನಿರ್ಮಿಸುತ್ತಿರುವ ಚಿತ್ರಕ್ಕೆ ರಿಷಿ ಅವರನ್ನು ಹೀರೋ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.