Advertisement

ಬ್ರಿಟನ್‌ ಪ್ರಧಾನಿ ಹುದ್ದೆ: 4ನೇ ಸುತ್ತಿನಲ್ಲೂ ರಿಷಿ ಸುನಕ್‌ ಪಾಸ್‌!

09:32 AM Jul 20, 2022 | Team Udayavani |

ಲಂಡನ್‌: ಬ್ರಿಟನ್‌ ಪ್ರಧಾನಿ ಹುದ್ದೆಗೆ ಸ್ಪರ್ಧಿಸಿರುವ ಭಾರತ ಮೂಲದ ರಿಷಿ ಸುನಕ್‌, ಆ ಪದವಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

Advertisement

ಸೋಮವಾರ ಕರ್ನರ್ವೇಟಿವ್‌ ಪಕ್ಷದ ಸಂಸದರು ನಾಲ್ಕನೇ ಸುತ್ತಿನ ಮತದಾನ ನಡೆಸಿದ್ದಾರೆ. ಕಣದಲ್ಲಿದ್ದ ರಿಷಿಗೆ 115 ಮತ, ಹಾಲಿ ವಾಣಿಜ್ಯ ಸಚಿವ ಪೆನ್ನಿ ಮಾರ್ಡಾಂಟ್‌ ಅವರಿಗೆ 92, ಹಾಲಿ ವಿದೇಶಾಂಗ ಸಚಿವ ಲಿಝ್ ಟ್ರಸ್‌ 82 ಹಾಗೂ ಕೆಮಿ ಬಡೆನೊಚ್‌ ಅವರಿಗೆ 59 ಮತ ಬಂದಿವೆ.

ನಿಯಮಗಳ ಪ್ರಕಾರ, ಕಡಿಮೆ ಮತ ಪಡೆದ ಕೆಮಿ ಬಡೆನೊಚ್‌, ಸ್ಪರ್ಧೆಯಿಂದ ದೂರ ಸರಿದಿದ್ದಾರೆ. ಹಾಗಾಗಿ, ಮುಂದಿನ ಸುತ್ತಿಗೆ ರಿಷಿ ಸುನಕ್‌, ಪೆನ್ನಿ ಹಾಗೂ ಟ್ರಸ್‌ ಮಾತ್ರವೇ ಉಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next