ಲಂಡನ್: ಬ್ರಿಟನ್ ಸಂಸತ್ ಗೆ ಆಯ್ಕೆಯಾಗಿದ್ದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಶಿ ಸುನಾಕ್ ಅವರನ್ನು ನೂತನ ವಿತ್ತ ಸಚಿವರನ್ನಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನೇಮಕ ಮಾಡಿರುವುದಾಗಿ ವರದಿ ತಿಳಿಸಿದೆ.
ಬೋರಿಸ್ ಜಾನ್ಸನ್ ಸಂಪುಟ ಪುನರ್ ರಚನೆಯಲ್ಲಿ ರಿಶಿ ಅವರನ್ನು ವಿತ್ತ ಸಚಿವರನ್ನಾಗಿ ಆಯ್ಕೆ ಮಾಡಿರುವುದಾಗಿ ವರದಿ ವಿವರಿಸಿದೆ.
ನಾರಾಯಣಮೂರ್ತಿ, ಸುಧಾ ಪುತ್ರಿ ಅಕ್ಷತಾ ಮೂರ್ತಿಯನ್ನು ಸುನಾಕ್ ವಿವಾಹವಾಗಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಇಬ್ಬರಿಗೂ ಪರಿಚಯವಾಗಿದ್ದು, ನಂತರ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುನಾಕ್ ದಂಪತಿಗೆ ಇಬ್ಬರು ಪುತ್ರಿಯರು.
2014ರಲ್ಲಿ ವಿಲಿಯಮ್ ಹೇಗ್ ಸಂಸದ ಸ್ಥಾನದಿಂದ ಕೆಳಗಿಳಿದ ನಂತರ 39 ವರ್ಷದ ಸುನಾಕ್ ಅವರನ್ನು (ಉತ್ತರ ಯೋರ್ಕ್ ಶ್ಶೆರ್) ರಿಚ್ಮಂಡ್ ನ ಕನ್ಸರ್ ವೇಟಿವ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.
ಸೌತ್ ಆಪ್ಟೋನ್ ಹ್ಯಾಂಮ್ಶೀಯರ್ ನಲ್ಲಿ ಸುನಾಕ್ ಜನಿಸಿದ್ದು, ಆಕ್ಸ್ ಫೋರ್ಡ್ ವಿವಿಯಲ್ಲಿ ರಾಜಕೀಯ ಮತ್ತು ಅರ್ಥಶಾಸ್ತ್ರ, ಹಾಗೂ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ನಂತರ ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ಎಂಬಿಎ ಪದವಿ ಪಡೆದಿದ್ದರು.