Advertisement

ಇಸ್ಲಾಮಿಕ್ ಉಗ್ರವಾದದ ಮೇಲೆ ಕಠಿಣ ಕ್ರಮ: ರಿಷಿ ಸುನಕ್ ಪ್ರತಿಜ್ಞೆ

03:57 PM Aug 03, 2022 | Team Udayavani |

ಲಂಡನ್ : ”ಅಸ್ತಿತ್ವದಲ್ಲಿರುವ ಭಯೋತ್ಪಾದನಾ ವಿರೋಧಿ ಕಾನೂನನ್ನು ಇನ್ನಷ್ಟು ಬಲಪಡಿಸುವ ಮೂಲಕ ಇಸ್ಲಾಮಿಸ್ಟ್ ಉಗ್ರವಾದದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ” ಎಂದು ಬ್ರಿಟಿಷ್ ಪ್ರಧಾನ ಮಂತ್ರಿ ಅಭ್ಯರ್ಥಿ ರಿಷಿ ಸುನಕ್ ಬುಧವಾರ ಪ್ರತಿಜ್ಞೆ ಮಾಡಿದ್ದಾರೆ.

Advertisement

ಬ್ರಿಟನ್ ಅತೀ ಹೆಚ್ಚು ಭಯೋತ್ಪಾದಕ ಬೆದರಿಕೆ ಹೊಂದಿರುವ ವೇಳೆಯಲ್ಲಿ, 42 ರ ಹರೆಯದ ಸುನಕ್ ಕನ್ಸರ್ವೇಟಿವ್ ಪಕ್ಷದ ಪ್ರಚಾರದ ವೇಳೆ ಈ ಹೇಳಿಕೆ ನೀಡಿದ್ದಾರೆ.

ನಮ್ಮ ದೇಶ ಮತ್ತು ನಮ್ಮ ಜನರನ್ನು ಸುರಕ್ಷಿತವಾಗಿರಿಸಿಕೊಳ್ಳುವುದಕ್ಕಿಂತ ಪ್ರಧಾನ ಮಂತ್ರಿಗೆ ಯಾವುದೇ ಪ್ರಮುಖ ಕರ್ತವ್ಯವಿಲ್ಲ. ಇಸ್ಲಾಮಿಸ್ಟ್ ಉಗ್ರವಾದವನ್ನು ನಿಭಾಯಿಸಲು ನಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಲಿದ್ದೇವೆ. ನಮ್ಮ ದೇಶದ ದ್ವೇಷದಲ್ಲಿ ಧ್ವನಿಯೆತ್ತುವವರನ್ನು ಬೇರುಸಹಿತ ಕಿತ್ತೊಗೆಯಲಿದ್ದೇವೆ. ಆ ಕರ್ತವ್ಯವನ್ನು ಪೂರೈಸಲು ನಾನು ಏನು ಬೇಕಾದರೂ ಮಾಡುತ್ತೇನೆ. ಬ್ರಿಟನ್ ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ವೈವಿಧ್ಯತೆಯ ದಾರಿದೀಪವಾಗಿದೆ. ನಮ್ಮ ಜೀವನ ವಿಧಾನವನ್ನು ದುರ್ಬಲಗೊಳಿಸಲು ಮತ್ತು ನಾಶಮಾಡಲು ಬಯಸುವವರನ್ನು ನಾವು ಎಂದಿಗೂ ಯಶಸ್ವಿಯಾಗಲು ಬಿಡಬಾರದು”ಎಂದು ಅವರು ಹೇಳಿದ್ದಾರೆ.

ಯುಕೆ ಪ್ರಧಾನಿ ಹುದ್ದೆಗಾಗಿ ಭಾರತ ಮೂಲದ ರಿಷಿ ಸುನಕ್‌ ಮತ್ತು ವಿದೇಶಾಂಗ ಸಚಿವೆ ಲಿಝ್ ಟ್ರಾಸ್‌ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next