Advertisement

ವಂಶಾಡಳಿತ : ರಾಹುಲ್‌ ಗಾಂಧಿ ಹೇಳಿಕೆಗೆ ರಿಷಿ ಕಪೂರ್‌ ತರಾಟೆ

03:27 PM Sep 13, 2017 | udayavani editorial |

ಮುಂಬಯಿ : ”ಭಾರತದಲ್ಲಿ ರಾಜಕೀಯ ರಂಗದಿಂದ ಹಿಡಿದು ಸಿನೇಮಾದಿಂದ ಉದ್ಯಮ ರಂಗದ ವರೆಗೂ ವಂಶಾಡಳಿತ ಸರ್ವಸಾಮಾನ್ಯ ಸಂಗತಿ; ಆದುದರಿಂದ ವಂಶಾಡಳಿತದ ವಿಷಯದಲ್ಲಿ ಯಾರೂ ನನ್ನನ್ನು ದೂರುವ ಅಗತ್ಯವಿಲ್ಲ” ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅಮೆರಿಕದ ಬರ್‌ಕ್ಲೇ ಯಲ್ಲಿನ ಕ್ಯಾಲಿಫೋರ್ನಿಯ ವಿವಿಯಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಸಂವಾದ ಕಾರ್ಯಕ್ರಮದಲ್ಲಿ ಹೇಳಿರುವುದಕ್ಕೆ ಬಾಲಿವುಡ್‌ನ‌ ಹಿರಿಯ ನಟ ರಿಶಿ ಕಪೂರ್‌, ರಾಹುಲ್‌ ಅವರನ್ನು ಟ್ವೀಟರ್‌ನಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. 

Advertisement

ಪಿತಾಮಹಾ ಪ್ರಥ್ವೀರಾಜ್‌ ಕಪೂರ್‌ ಅವರದ್ದು ಬಾಲಿವುಡ್‌ನ‌ ಪ್ರಥಮ ಕುಟುಂಬವೆಂದು ಪರಿಗಣಿತವಾಗಿದ್ದು ರಿಷಿ ಕಪೂರ್‌ ಅವರು ಈ ಕುಟುಂಬದ ಮೂರನೇ  ತಲೆಮಾರಿನವರಾಗಿದ್ದಾರೆ. ಬಾಲಿವುಡ್‌ನ‌ಲ್ಲೀಗ ಕಪೂರ್‌ ಕುಟುಂಬದ ನಾಲ್ಕನೇ ತಲೆಮಾರಿನವರು ಮಿಂಚುತ್ತಿದ್ದಾರೆ. 

ರಿಷಿ ಕಪೂರ್‌ ಅವರು ಟ್ವಿಟರ್‌ನಲ್ಲಿ ರಾಹುಲ್‌ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ರೀತಿ ಹೀಗಿದೆ : 

ರಾಹುಲ್‌ ಗಾಂಧಿಯವರೇ, 106 ವರ್ಷಗಳ ಸುದೀರ್ಘ‌ ಇತಿಹಾಸದ ಭಾರತೀಯ ಚಿತ್ರರಂಗಕ್ಕೆ ಕಪೂರ್‌ ಕುಟುಂಬದವರಿಂದ 90 ವರ್ಷಗಳ ಕೊಡುಗೆ ಇದೆ. ದೇವರ ದಯೆಯಿಂದ ನಾವೀಗ ಕಪೂರ್‌ ಕುಟುಂಬದ ನಾಲ್ಕನೇ ತಲೆಮಾರನ್ನು ಕಾಣುತ್ತಿದ್ದೇವೆ – ಪ್ರಥ್ವೀರಾಜ್‌ ಕಪೂರ್‌, ರಾಜ್‌ ಕಪೂರ್‌, ರಣದೀರ್‌ ಕಪೂರ್‌, ರಣಬೀರ್‌ ಕಪೂರ್‌. ನೀವು ಕಠಿನ ಪರಿಶ್ರಮದಿಂದ ಜನರ ಪ್ರೀತಿ, ವಿಶ್ವಾಸವನ್ನು ಗೆಲ್ಲಬೇಕೇ ಹೊರತು ವಂಶಪಾರಂಪರ್ಯತೆಯಿಂದ ಅಲ್ಲ; ಜಬರ್‌ದಸ್ತಿ, ಗೂಂಡಾಗರ್ದಿಯಿಂದಲೂ ಅಲ್ಲ’.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next