ಕುಂದಾಪುರ: ʼಕಾಂತಾರʼ ಪ್ರೀಕ್ವೆಲ್ ಮುಹೂರ್ತ ಕಾರ್ಯಕ್ರಮ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಸೋಮವಾರ( ನ.27 ರಂದು) ನೆರವೇರಿದೆ.
ಮುಹೂರ್ತಕ್ಕೆ ಬರುವ ವೇಳೆ ಮಾಧ್ಯಮದ ಜೊತೆ ಮಾತನಾಡಿದ ನಟ ನಿರ್ದೇಶಕ ರಿಷಬ್ ಶೆಟ್ಟಿ, “ಕಾಂತಾರ ಚಾಪ್ಟರ್ -1” ಶುರು ಮಾಡಿದ್ದೇವೆ. ಅಧ್ಯಾಯ ಎರಡನ್ನು ನೋಡಿ ನೀವು ದೊಡ್ಡ ಹಿಟ್ ಮಾಡಿದ್ದೀರಿ. ಇದರ ಸಂಪೂರ್ಣ ಸಕ್ಸಸ್ ನ್ನು ಕನ್ನಡಿಗರಿಗೆ ಅರ್ಪಿಸಲು ಇಷ್ಟಪಡ್ತೇನೆ. ಇದರ ಮುಂದುವರೆದ ಪಯಣದಲ್ಲಿ ಮುನ್ನುಡಿ ಅಂದರೆ ಹಿಂದೆ ಏನು ನಡೆಯಿತು ಎನ್ನುವುದನ್ನು ಹೇಳಲು ಹೊರಟಿದ್ದೇನೆ. ಹಿಂದಿನಂತೆ ಈ ಸಿನಿಮಾಕ್ಕೂ ನಿಮ್ಮೆಲ್ಲರ ಹಾರೈಕೆ ಇರಲಿ. ಯಶಸ್ಸನ್ನು ಜವಬ್ದಾರಿಯಾಗಿ ತೆಗೆದುಕೊಂಡು ಅದ್ಭುತವಾಗಿ ಕೆಲಸ ಮಾಡಿಕೊಂಡು ಹೋಗುವತ್ತ ಇಡೀ ತಂಡ ಪ್ರಯತ್ನ ಮಾಡುತ್ತಿದೆ ಎಂದರು.
ಆನೆಗುಡ್ಡೆ ನಮ್ಮ ಪ್ರೊಡಕ್ಷನ್ ಹೌಸ್ ಗೆ ವಿಜಯ್ ಕಿರಗಂದೂರು ನಂಬಿದಂಥ ದೇವರು. ನಮಗಂತೂ ಆನೆಗುಡ್ಡೆ ಖಂಡಿತವಾಗಿ ಲಕ್ಕಿ. ನಾವು ನಮ್ಮದಂಥ ದೇವರು ಕೂಡ ಹೌದು. ಆದರೆ ಅವರು ಬೆಂಗಳೂರಿನಿಂದ ಆಗಾಗ ಇಲ್ಲಿಗೆ ಬರ್ತಾ ಇರುತ್ತಾರೆ. ಹಾಗಾಗಿ ʼಕಾಂತಾರʼ ಸಿನಿಮಾದ ಮುಹೂರ್ತ ಲಾಸ್ಟ್ ಟೈಮ್ ಕೂಡ ಇಲ್ಲೇ ಮಾಡಿದ್ದು. ಈಗ ಅದೇ ದಾರಿಯಲ್ಲಿ ಹೋಗ್ತಾ ಇದ್ದೇವೆ. ಶೀಘ್ರದಲ್ಲಿ ಶೂಟ್ ಆರಂಭಿಸುತ್ತೇವೆ . ಬಹುಶಃ ಡಿಸೆಂಬರ್ ನಲ್ಲಿ ಶುರು ಮಾಡುತ್ತೇವೆ ಎಂದರು.
ಇದನ್ನೂ ಓದಿ: Kantara Prequel: ರೌದ್ರ ಅವತಾರದಲ್ಲಿ ರಿಷಬ್: ಟೀಸರ್ ನಲ್ಲಿ ಗಮನ ಸೆಳೆದ ಮ್ಯೂಸಿಕ್
ಮೊದಲ ಅಧ್ಯಾಯದ ಬಗ್ಗೆ ಏನನ್ನು ಈಗ ಹೇಳಲ್ಲ. ಮಾತಿಗಿಂತ ಕೆಲಸ ಮುಖ್ಯ. ಸಣ್ಣ ಗ್ಲಿಂಪ್ಸ್ ಹಾಗೂ ಪೋಸ್ಟರ್ ಬಿಟ್ಟಿದ್ದೇವೆ. ಮುಂದೆ ಹೋಗ್ತಾ ಇರುವ ಹಾಗೆ ಸಿನಿಮಾನೇ ಮಾತನಾಡಿದರೆ ಚೆಂದ. ಇಡೀ ಸಿನಿಮಾ ಇಲ್ಲೇ ಸಾಗುವುದರಿಂದ ಸಿನಿಮಾದ ಶೂಟಿಂಗ್ ಬಹುಶಃ ಕರಾವಳಿಯಲ್ಲೇ ಶೂಟ್ ಆಗಲಿದೆ. ಸದ್ಯಕ್ಕೆ ನಾನೇ ಹೀರೋ, ನಾಯಕಿ ಹಾಗೂ ಇತರ ಪಾತ್ರದ ಹುಡುಕಾಟ ಇನ್ನಷ್ಟೇ ನಡೆಯಬೇಕಿದೆ. ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ ಇರಲಿದೆ. ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರ ಹುಡುಕಾಟ ನಡೆಯುತ್ತಿದೆ ಎಂದರು. ಕರಾವಳಿ ಹಾಗೂ ಇತರೆ ಭಾಗದ ಕಲಾವಿದರು ಕೂಡ ಇರಲಿದ್ದಾರೆ ಎಂದರು.
ಅಜನೀಶ್ ಮ್ಯೂಸಿಕ್ ಇರಲಿದೆ. ಅರವಿಂದ್ ಕಶ್ಯಪ್ ಛಾಯಗ್ರಹಣ ಇರಲಿದೆ. ಟೆಕ್ನಿಕಲ್ ಟೀಮ್ ಬದಲಾಗಿಲ್ಲ ಎಂದರು. ಸ್ಕ್ರಿಪ್ಟ್ ಕೆಲಸ ಮುಗಿದಿದೆ. ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದರು.