“ಯಕ್ಷ ಸಂಭ್ರಮ’ ಸಂಸ್ಥೆಯು ತನ್ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಹತ್ತಾರು ಹಿಮ್ಮೇಳ ವಾದಕರ ಚಂಡೆ ವಾದನದ ಸದ್ದಿನಿಂದ ಕಾರ್ಯಕ್ರಮ ಆರಂಭವಾಗಲಿದೆ. ಉದಯೋನ್ಮುಖ ಭಾಗವತರಿಂದ ಗಾನ ವೈಭವ, ತೆಂಕು ತಿಟ್ಟಿನ “ಮಹಿಷಿ ಮರ್ಧಿನಿ’ ಯಕ್ಷಗಾನ ಪ್ರದರ್ಶನ, ಕುಂದಾಪ್ರ ಕನ್ನಡದ ಮನುಹಂದಾಡಿಯವರಿಂದ ಹಾಸ್ಯಯಾನ, “ಯಕ್ಷ ಸಂಭ್ರಮ’ ತಂಡದವರಿಂದ “ಸುಕನ್ಯಾ ಕಲ್ಯಾಣ’ ಯಕ್ಷಗಾನ ಹಾಗೂ ವಿದ್ವಾನ್ ಗಣಪತಿ ಭಟ್, ಎ.ಪಿ. ಪಾಠಕ್, ಬಾಳುRದ್ರು , ಶಶಿಕಾಂತ ಶೆಟ್ಟಿ , ಮಂಕಿ ಈಶ್ವರ ನಾಯ್ಕ, ಪ್ರಪುಲ್ ಚಂದ್ರ ನೆಲ್ಯಾಡಿ , ರಮಣಶ್ರೀ ಕಾರ್ಕಳ , ಶಿವಕುಮಾರ್ ಬೆಗಾರ್ ಅವರಿಂದ ತೆಂಕು ಬಡಗು ಸಮ್ಮಿಲನದಲ್ಲಿ “ಸುಧನ್ವ ಮೋಕ್ಷ’ ಯಕ್ಷ ಪ್ರಸಂಗ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ರಂಗ ನಿರ್ದೇಶಕ ಗೋಪಾಲ ಕೃಷ್ಣ ನಾಯರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ನಿರ್ದೇಶಕ ರಿಷಭ್ ಶೆಟ್ಟಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಆರ್‌ಜೆ ರಜಸ್ ಜೈನ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.
ಎಲ್ಲಿ?:ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ
ಯಾವಾಗ?:ಅ.21, ಭಾನುವಾರ ಮಧ್ಯಾಹ್ನ 1.40-9
ಪ್ರವೇಶ: ಉಚಿತ
ಹೆಚ್ಚಿನ ಮಾಹಿತಿಗೆ: 9880236161