Advertisement
ಕಳೆದ ವರ್ಷ ಐಪಿಎಲ್, ಏಕದಿನ ವಿಶ್ವಕಪ್ ಮತ್ತು ಕೆಲವು ಪ್ರಮುಖ ಟೆಸ್ಟ್ ಸರಣಿಗಳನ್ನು ಕಳೆದುಕೊಂಡಿದ್ದ ಪಂತ್ ಈ ವರ್ಷದ ಐಪಿಎಲ್ ಸಮಯದಲ್ಲಿ ಮರಳಲು ಸಮರ್ಥರಿದ್ದಾರೆ. ವಿಕೆಟ್ ಕೀಪಿಂಗ್ ಮಾಡುವ ಬಗ್ಗೆ ಅಥವಾ ನಾಯಕರಾಗಿ ಮುಂದುವರಿಯುವ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದು ಹೇಳಿದ್ದಾರೆ.
Related Articles
Advertisement
2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ 14 ಪಂದ್ಯಗಳಲ್ಲಿ ಕೇವಲ ಐದು ಪಂದ್ಯಗಳನ್ನು ಮಾತ್ರ ಗೆದ್ದು ಕೊನೆಯ ಎರಡನೇ ಸ್ಥಾನವನ್ನು ಗಳಿಸಿತ್ತು. ಪಾಂಟಿಂಗ್ ಈ ವರ್ಷದ ಋತುವಿನ ಕಡೆಗೆ ಆಶಾವಾದದ ಪ್ರಜ್ಞೆಯೊಂದಿಗೆ ಸಾಗುವುದಾಗಿ ಹೇಳಿದ್ದಾರೆ.
“ಹ್ಯಾರಿ ಬ್ರೂಕ್ ಸಹ ಬರುತ್ತಾರೆ, ವಾರ್ನರ್, ಮಾರ್ಷ್ ಸೇರಿ ಕೆಲವು ಉತ್ತಮ ಸಾಗರೋತ್ತರ ಬ್ಯಾಟರ್‌ಗಳನ್ನು ಪಡೆದುಕೊಂಡಿದ್ದೇವೆ. ಆನ್ರಿಚ್ ನಾರ್ಟ್ಜೆ ಮತ್ತು ಝೈ ರಿಚರ್ಡ್ಸನ್ ಫಿಟ್ ಆಗಲು ಸಾಧ್ಯವಾದರೆ, ಮತ್ತು ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರೊಂದಿಗೆ ನಾವು ಪಡೆದಿರುವ ಎರಡು ಸ್ಪಿನ್ ಆಯ್ಕೆಗಳೊಂದಿಗೆ ನಾವು ನಿಜವಾಗಿಯೂ ಉತ್ತಮ ತಂಡವನ್ನು ಹೊಂದಿದ್ದೇವೆ,ನಾವು ಮಾಡಲು ಸ್ವಲ್ಪ ಕೆಲಸವಿದೆ” ಎಂದು ಪಾಂಟಿಂಗ್ ಹೇಳಿದ್ದಾರೆ.
ಪಂತ್ ಅವರು ತಮ್ಮ ಕುಟುಂಬವನ್ನು ಭೇಟಿ ಮಾಡಲು ದೆಹಲಿಯಿಂದ ತನ್ನ ತವರು ರೂರ್ಕಿಗೆ ತೆರಳುತ್ತಿದ್ದಾಗ ಕಾರು ರಸ್ತೆಯ ಡಿವೈಡರ್‌ಗೆ ಅಪ್ಪಳಿಸಿತ್ತು. ಮಿರ್‌ಪುರದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಅವರು ಬಾಂಗ್ಲಾದೇಶದಿಂದ ಹಿಂತಿರುಗಿದ್ದರು. ರಜತ್ ಕುಮಾರ್ ಮತ್ತು ನಿಶು ಕುಮಾರ್ ಎಂಬ ಇಬ್ಬರು ವ್ಯಕ್ತಿಗಳು ಪಂತ್ ಅವರ ಎಸ್‌ಯುವಿ ಬೆಂಕಿಗೆ ಆಹುತಿಯಾಗುವ ಮೊದಲು ಅವರನ್ನು ರಕ್ಷಿಸಲು ಸಾಧ್ಯವಾಗಿತ್ತು.