ಬೆಂಗಳೂರು: ಪ್ರವಾಸಿ ಶ್ರೀಲಂಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಹೊಸ ದಾಖಲೆ ಬರೆದಿದ್ದಾರೆ. ಕೇವಲ 28 ಎಸೆತದಲ್ಲಿ ಅರ್ಧಶತಕ ಬಾರಿಸಿದ ಪಂತ್, ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಭಾರತೀಯ ಎಂಬ ದಾಖಲೆ ಬರೆದದರು.
ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ರಿಷಭ್ ಪಂತ್ ತಮ್ಮ ಎಂದಿನ ಶೈಲಿಯಲ್ಲೇ ಬ್ಯಾಟ್ ಬೀಸಿದರು. 31 ಎಸತೆದ ಇನ್ನಿಂಗ್ಸ್ ನಲ್ಲಿ ಪಂತ್ ಎರಡು ಸಿಕ್ಸ್ ಮತ್ತು ಏಳು ಬೌಂಡಿ ಬಾರಿಸಿದ ಅವರು ಭರ್ತಿ 50 ರನ್ ಗಳಿಸಿದರು.
ಇದೇ ವೇಳೆ ಪಂತ್ ಸುಮಾರು 40 ವರ್ಷಗಳ ಹಿಂದಿನ ಕಪಿಲ್ ದೇವ್ ಅವರ ದಾಖಲೆ ಮುರಿದರು. 1982ರಲ್ಲಿ ಕಪಿಲ್ ದೇವ್ ಪಾಕಿಸ್ಥಾನ ವಿರುದ್ಧ ಕರಾಚಿ ಟೆಸ್ಟ್ ಪಂದ್ಯದಲ್ಲಿ 30 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ ಈ ಪಂದ್ಯವನ್ನು ಪಾಕಿಸ್ಥಾನ ಇನ್ನಿಂಗ್ ಮತ್ತು 86 ರನ್ ಅಂತರದಿಂದ ಜಯಿಸಿತ್ತು.
ಇದನ್ನೂ ಓದಿ:ಆರ್‌ಆರ್‌ಆರ್ ಪ್ರೀ ರಿಲೀಸ್ ಇವೆಂಟ್‌ಗೆ ಸಿದ್ಧತೆ; ಚಿಕ್ಕಬಳ್ಳಾಪುರದಲ್ಲಿ ಅದ್ದೂರಿ ಸಮಾರಂಭ
ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 252 ರನ್ ಗಳಿಸಿದ್ದರೆ, ಲಂಕಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 109 ರನ್ ಗೆ ಆಲೌಟಾಗಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ 9 ವಿಕೆಟ್ ಗೆ 303 ರನ್ ಗಳಿಸಿ ಡಿಕ್ಲೇರ್ ಮಾಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಲಂಕಾ ತಂಡ ಒಂದು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ. ಲಂಕಾ ಗೆಲುವಿಗೆ ಇನ್ನೂ 419 ರನ್ ಅಗತ್ಯವಿದೆ.