Advertisement
ಅಂದಾಜು 20 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ʼಕಾಂತಾರʼ ವರ್ಲ್ಡ್ ವೈಡ್ 400 ಕೋಟಿ ಗಳಿಕೆ ಕಾಣುವ ಮೂಲಕ ಕನ್ನಡ ಚಿತ್ರರಂಗದಲ್ಲಿ ʼಕೆಜಿಎಫ್ʼ ಬಳಿಕ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿದ ಮತ್ತೊಂದು ಚಿತ್ರವಾಗಿ ಹೊರಹೊಮ್ಮಿತ್ತು.
Related Articles
Advertisement
ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿ ಎಲ್ಲಾ ಭಾಷೆಯ ಡಿಜಿಟಲ್ ರೈಟ್ಸ್ ಪ್ರೈಮ್ ಗೆ ಮಾರಾಟವಾಗಿದೆ. ʼಕಾಂತಾರ -1ʼ ಬಿಗ್ ಬಜೆಟ್ ಚಿತ್ರವಾಗಿರುವುದಿಲ್ಲ, ಆದರೆ ಇದೊಂದು ಹೈ ಕಾನ್ಸೆಪ್ಟ್ ಸಿನಿಮಾವಾಗಿರಲಿದೆ ಎಂದು ವರದಿ ತಿಳಿಸಿದೆ.
ಥಿಯೇಟ್ರಿಕಲ್ ನಂತರದ ಡಿಜಿಟಲ್ ಹಕ್ಕುಗಳು ಚಲನಚಿತ್ರದ ಬಜೆಟ್‌ಗಿಂತ ಹೆಚ್ಚಿದೆ.
‘ಕಾಂತಾರʼ ಸಿನಿಮಾವನ್ನು ದೇಶದ ಅತಿದೊಡ್ಡ ಫ್ರಾಂಚೈಸಿಗಳಲ್ಲಿ ಒಂದನ್ನಾಗಿ ಮಾಡಲು ಚಿತ್ರತಂಡ ಯೋಜಿಸಿದೆ. ʼಕಾಂತಾರ ಚಾಪ್ಟರ್ -1ʼ ರ ಬಳಿಕ ಮುಂದೆ ಕೂಡ ಇದರ ಮುಂದುವರೆದ ಭಾಗಗಳು ಬರಲಿವೆ. ʼಕಾಂತಾರ ಪ್ರೀಕ್ವೆಲ್ʼ ಬಳಿಕ ಅದರ ಲಾಭದ ಬಳಿಕವಷ್ಟೇ ಸಿನಿಮಾದ ಮುಂದಿನ ಭಾಗಗಳ ಬಗ್ಗೆ ನಿರ್ಧಾರವಾಗಲಿದೆ ಎಂದು ವರದಿ ತಿಳಿಸಿದೆ.
ʼಕಾಂತಾರ ಚಾಪ್ಟರ್ -1ʼ ಇದೇ ವರ್ಷದಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.