Advertisement
ಇನ್ನೊಂದು ವಿಶೇಷವೆಂದರೆ ಹೀರೋ’ ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಚಿತ್ರತಂಡ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಮಾಡಿ ಮುಗಿಸಿರುವುದ ಈ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಟ ಕಂ ನಿರ್ಮಾಪಕ ರಿಷಭ್ ಶೆಟ್ಟಿ, “ಎಲ್ಲ ಸಿಗುತ್ತಿರುವ ಸಮಯದಲ್ಲೇ ಪ್ಲಾನಿಂಗ್ ಪ್ರಕಾರ ಸಿನಿಮಾ ಶೂಟಿಂಗ್ ಮಾಡೋದು ಕಷ್ಟ. ಹೀಗಿರುವಾಗ, ಲಾಕ್‌ಡೌನ್ ಟೈಮ್‌ನಲ್ಲಿ ನಾವು ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದೆವು. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು, ಕಡಿಮೆ ಕಲಾವಿದರು – ತಂತ್ರಜ್ಞರನ್ನು ಇಟ್ಟುಕೊಂಡ ಶೂಟಿಂಗ್ ಮಾಡಲು ಮುಂದಾದೆವು. ತುಂಬಾ ರಿಸ್ಕ್ ಇದ್ದರೂ, ನಮಗೆ ಬೇರೆ ದಾರಿ ಇರಲಿಲ್ಲ. ಅಂದುಕೊಂಡಂತೆ ಸಿನಿಮಾ ಶೂಟಿಂಗ್ ಮಾಡಿ ಮುಗಿಸುವುದು ನಮಗಿದ್ದ ದೊಡ್ಡ ಚಾಲೆಂಜ್ ಆಗಿತ್ತು. ಅದರಂತೆ, ಕೊನೆಗೂ ಕೇವಲ 24 ಜನರ ಟೀಮ್ ಇಟ್ಟುಕೊಂಡು ಅಂದುಕೊಂಡಂತೆ ಶೂಟಿಂಗ್ ಮಾಡಿ ಮುಗಿಸಿದೆವು. ಇಡೀ ಟೀಮ್ ಎಫರ್ಟ್‌ನಿಂದ ಇಂಥದ್ದೊಂದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ನಿಜವಾಗ್ಲೂ ಹೇಳಬೇಕು ಅಂದ್ರೆ, “ಹೀರೋ’ ಸಿನಿಮಾದಲ್ಲಿ ತೆರೆಮುಂದೆ, ತೆರೆಹಿಂದೆ ಎಲ್ಲರೂ, ಎಲ್ಲ ಕೆಲಸವನ್ನೂ ಮಾಡಿದ್ದಾರೆ. ಇವರೇ ಸಿನಿಮಾದ ನಿಜವಾದ “ಹೀರೋ’ಗಳು’ ಎನ್ನುತ್ತಾರೆ.
Related Articles
Advertisement
“ಈ ವಾರ ಕರ್ನಾಟಕ ರಾಜ್ಯಾದ್ಯಂತ ಸುಮಾರು 160ಕ್ಕೂ ಅಧಿಕ ಸೆಂಟರ್‌ಗಳಲ್ಲಿ “ಹೀರೋ’ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜೊತೆಗೆ ಕರ್ನಾಟಕದ ಹೊರಗಿನ ಕೆಲವು ರಾಜ್ಯಗಳಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ನಾಲ್ಕು ವಾರಗಳ ನಂತರ ಸಿನಿಮಾವನ್ನು ಓವರ್‌ಸೀಸ್ ಕೂಡ ರಿಲೀಸ್ ಮಾಡುವ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ರಿಷಭ್ ಶೆಟ್ಟಿ.
ಒಟ್ಟಾರೆ ಹೊಸ ವರ್ಷದಲ್ಲಿ ತೆರೆಮೇಲೆ “ಹೀರೋ’ ಮೂಲಕ ಹೊಸ ಎಂಟ್ರಿ ಕೊಡಲು ರೆಡಿಯಾಗಿರುವ ರಿಷಭ್ ಶೆಟ್ಟಿ, ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ಜಿ. ಎಸ್. ಕಾರ್ತಿಕ ಸುಧನ್