Advertisement

ಸಿನಿ ಕನಸಿನ ಹುಡುಗನ ಸುತ್ತ ಹರಿಕಥೆ: ರಿಷಭ್‌ ಚಿತ್ರ ಜೂ.23ಕ್ಕೆ ತೆರೆಗೆ

03:59 PM Jun 17, 2022 | Team Udayavani |

ರಿಷಭ್‌ ಶೆಟ್ಟಿ ನಾಯಕರಾಗಿ ನಟಿಸಿರುವ “ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಜೂ.23ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರತಂಡ ಟ್ರೇಲರ್‌ ಬಿಡುಗಡೆ ಮಾಡಿದ್ದು, ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಸಂದೇಶ್‌ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್‌. ಎನ್‌ ನಿರ್ಮಿಸಿರುವ ಈ ಚಿತ್ರವನ್ನು ಕರಣ್‌ ಅನಂತ್‌ ಹಾಗೂ ಅನಿರುದ್ಧ್ ಮಹೇಶ್‌ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ರಿಷಭ್‌ ಶೆಟ್ಟಿ, “ಸಿನಿಮಾ ನಿರ್ದೇಶಕನಾಗುವ ಆಸೆ ಹೊತ್ತ ಮಧ್ಯಮ ವರ್ಗದ ಯುವಕನೊಬ್ಬನ ಸುತ್ತ ನಡೆಯುವ ಕಥೆ ಇದು. ಇದರಲ್ಲಿ ನಾನು ಗಿರಿಕೃಷ್ಣ ಎಂಬ ಪಾತ್ರ ಮಾಡಿದ್ದೀನಿ. ಗಿರಿ ಅಂದರೆ ನಾನೊಬ್ಬನ ಹೆಸರಲ್ಲ. ಹೀರೋಯಿನ್‌ ಹೆಸರು ಗಿರಿಜಾ ಥಾಮಸ್‌ ಹಾಗೂ ವಿಲನ್‌ ಹೆಸರು ಗಿರಿ ಅಂತ. ಹೀಗೆ ನಮ್ಮ ಚಿತ್ರದಲ್ಲಿ ಹಲವು ಗಿರಿಗಳ ಸಂಗಮವಾಗಿದೆ.ಸಿನಿಮಾ ಮಾಡಲು ಹೊರಟಿರುವ ಅನೇಕರ ಕಥೆಯಿದು. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು ರಿಷಭ್‌ ಶೆಟ್ಟಿ.

“ನಮ್ಮ ಚಿತ್ರತಂಡದ ಸಹಕಾರದಿಂದ ಚೆನ್ನಾಗಿ ಬಂದಿದೆ. ನಾನು ಹಾಗೂ ರಿಷಭ್‌ ಕಥಾಸಂಗಮ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೆವು. ಗಿರಿಕೃಷ್ಣ ಈ ಚಿತ್ರದ ಕಥೆ ಬರೆದಿದ್ದರು. ಆ ನಂತರ ನಾನು ಹಾಗೂ ಅನಿರುದ್ಧ್ ಮಹೇಶ್‌ ಸೇರಿ ಈ ಚಿತ್ರ ನಿರ್ದೇಶನ ಮಾಡಿದ್ದೇವೆ’ ಎನ್ನುವುದು ನಿರ್ದೇಶಕರಲ್ಲೊಬ್ಬರಾದ ಕರಣ್‌ ಅನಂತ್‌ ಮಾತು.

ಇದನ್ನೂ ಓದಿ:ರಜನಿಕಾಂತ್ 169 ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ; ಶಿವರಾಜ್ ಕುಮಾರ್ ಮುಖ್ಯಪಾತ್ರದಲ್ಲಿ !

Advertisement

ನಾಯಕಿ ರಚನಾ ಇಂದರ್‌ಗೆ ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. “ನಾನು ಈ ಚಿತ್ರದಲ್ಲಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ನಟಿಯಾಗಬೇಕೆಂಬ ಆಸೆ ಹೊತ್ತ ಹುಡುಗಿ’ ಎಂದು ಪಾತ್ರದ ಬಗ್ಗೆ ಹೇಳಿಕೊಂಡರು.

“ನಾನು ಈ ಹಿಂದೆ ಜೋಕುಮಾರಸ್ವಾಮಿ ನಾಟಕದಲ್ಲಿ ಅಭಿನಯಿಸಿದ್ದೆ. ಇದರಲ್ಲೂ ಅದೇ ಹೆಸರು. ಆದರೆ ಮಂತ್ರಿಯಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುವುದು ನಟ ದಿನೇಶ್‌ ಮಂಗಳೂರು ಮಾತು.

ನಿರ್ಮಾಪಕ ಸಂದೇಶ್‌ ಮಾತನಾಡಿ, “ನಾನು ಎಲ್ಲ ಜವಾಬ್ದಾರಿಗಳನ್ನು ರಿಷಭ್‌ ಅವರಿಗೆ ನೀಡಿದ್ದೇನೆ. ಅವರ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗಿದೆ. ಜಯಣ್ಣ ಈ ಚಿತ್ರದ ಹಂಚಿಕೆದಾರರು. ಚಿತ್ರವನ್ನು ನೋಡಿ. ಪ್ರೋತ್ಸಾಹಿಸಿ’ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next