ಬೆಳ್ತಂಗಡಿ: ಜಗತ್ತಿನ ಚಿತ್ರೋದ್ಯಮವನ್ನೇ ತನ್ನತ್ತ ಸೆಳೆಯುವಂತೆ ಮಾಡಿದ್ದ ಕಾಂತಾರ ಚಲಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ದಂಪತಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬುಧವಾರ ಭೇಟಿ ನೀಡಿದರು.
ಕಾಂತಾರ ಚಿತ್ರ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ರಿಷಬ್ ಅವರು ಇದೀಗ ಕಾಂತಾರ ಭಾರತದಾದ್ಯಂತ ಅನೇಕ ಭಾಷೆಗಳಲ್ಲಿ ತೆರೆಕಾಣುವ ವರೆಗೆ ಸಕ್ಸಸ್ ಕಂಡಿರುವುದರಿಂದ ಅದೇ ಹರ್ಷದಲ್ಲಿ ಧರ್ಮಸ್ಥಳಕ್ಕೆ ಭೇಟಿ ಮಾಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಸೇವೆ ಸಲ್ಲಿಸಿದರು.
ಬಳಿಕ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಸಿನಿಮಾದ ಯಶಸ್ಸಿನ ಕುರಿತು ಮಾತುಕತೆ ನಡೆಸಿದರು.
ಡಾ.ಹೆಗ್ಗಡೆಯವರು ಕ್ಷೇತ್ರದ ಪರವಾಗಿ ರಿಷಬ್ ದಂಪತಿಯನ್ನು ಅಭಿನಂದಿಸಿ ಗೌರವಿಸಿದರು. ಈ ವೇಳೆ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಟ ಪ್ರಮೋದ್ ಶೆಟ್ಟಿ, ರಿಷಬ್ ಪತ್ನಿ, ಕಾಂತಾರ ಚಲನ ಚಿತ್ರದ ಕಾಷ್ಟೂಮ್ಯ ಡಿಸೈನರ್ ಪ್ರಗತಿ ಶೆಟ್ಟಿ ಸಹಿತ ಇತರರು ಜತೆಗಿದ್ದರು.
Related Articles
ದೇವಳದ ವತಿಯಿಂದ ಹೆಗ್ಗಡೆ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ, ದೇವಸ್ಥಾನದ ಕಚೇರಿ ವ್ಯವಸ್ಥಾಪಕ ಪಾರ್ಶ್ವವನಾಥ ಜೈನ್, ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಸ್ವಾಗತಿಸಿದರು.
ಬಳಿಕ ಮಣ್ಣಿನ ಹರಕೆಗೆ ಹೆಸರುವಾಸಿಯಾದ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ ಭೇಟಿ ಮಾಡಿ ದೇವರ ಆಶೀರ್ವಾದ ಪಡೆದರು. .
ಇದನ್ನೂ ಓದಿ : ಹೂಡಿಕೆದಾರರ ಸಭೆಯಲ್ಲೂ ಕಾಂತಾರ ಹವಾ; ಹಾಡಿ ಹೊಗಳಿದ ಸಚಿವ ಗೋಯಲ್