Advertisement
ರಿಷಭ್ ಪಂತ್ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ 97 ರನ್ ಬಾರಿಸಿ ಭಾರತವನ್ನು ಸೋಲಿನಿಂದ ಪಾರುಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬಳಿಕ ಬ್ರಿಸ್ಬೇನ್ ಪಂದ್ಯದಲ್ಲಿ ಅಜೇಯ 89 ರನ್ ಹೊಡೆದು ಭಾರತದ ಐತಿಹಾಸಿಕ ಗೆಲುವಿನ ರೂವಾರಿಯಾಗಿ ಮೂಡಿ ಬಂದಿದ್ದರು. ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದಿಬ್ಬರೆಂದರೆ ಜೋ ರೂಟ್ ಮತ್ತು ಪಾಲ್ ಸ್ಟರ್ಲಿಂಗ್.
ಐಸಿಸಿಯ ಮೊದಲ “ತಿಂಗಳ ಆಟಗಾರ’ನಾಗಿ ಮೂಡಿಬಂದ ರಿಷಭ್ ಪಂತ್ ಈ ಪ್ರಶಸ್ತಿಯನ್ನು ತಂಡದ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ. “ಕ್ರೀಡಾಪಟುವೋರ್ವ ತಂಡದ ಗೆಲುವಿಗೆ ನೀಡುವ ಕೊಡುಗೆ ಅತ್ಯಂತ ಮಹತ್ವದ್ದು. ಇಂಥ ಪ್ರಶಸ್ತಿಯಿಂದ ಯುವ ಆಟಗಾರರಿಗೆ ಸ್ಫೂರ್ತಿ ಲಭಿಸುತ್ತದೆ. ಈ ಪ್ರಶಸ್ತಿಯನ್ನು ಆಸ್ಟ್ರೇಲಿಯದಲ್ಲಿ ಸರಣಿ ಜಯಿಸಿದ ತಂಡದ ಸದಸ್ಯರಿಗೆ ಮತ್ತು ಮತದಾನ ಮಾಡಿದ ಅಭಿಮಾನಿಗಳಿಗೆ ಅರ್ಪಿಸು ತ್ತೇನೆ’ ಎಂದು ಪಂತ್ ಹೇಳಿದರು.
Related Articles
ದಕ್ಷಿಣ ಆಫ್ರಿಕಾದ ಬಲಗೈ ವೇಗಿ ಶಬಿ°ಮ್ ಇಸ್ಮಾಯಿಲ್ 7 ವಿಕೆಟ್ ಕೀಳುವ ಮೂಲಕ ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದಕ್ಕೂ ಮೊದಲು ನಡೆದ ಪಾಕ್ ಎದುರಿನ 2ನೇ ಟಿ20 ಪಂದ್ಯದಲ್ಲಿ 5 ವಿಕೆಟ್ ಉಡಾಯಿಸಿದ್ದರು.
Advertisement