ನವದೆಹಲಿ : ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಿದ್ಯಾರ್ಥಿ ರಿಷಬ್ ಕೌಶಿಕ್ ಮತ್ತು ಅವರ ಪ್ರೀತಿಯ ನಾಯಿ ಮಲಿಬು ಭಾರತಕ್ಕೆ ಮರಳಿದ್ದಾರೆ.
ಖಾರ್ಕಿವ್‌ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಉತ್ತರಾಖಂಡ್‌ನ ಡೆಹ್ರಾಡೂನ್ ನ ಕೌಶಿಕ್ ಹಂಗೇರಿಯ ಬುಡಾಪೆಸ್ಟ್ ಮೂಲಕ ಮನೆಗೆ ಮರಳು ವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತಕ್ಕೆ ಕರೆ ತರುವಲ್ಲಿ ಸಾಕಷ್ಟು ದಾಖಲೆಗಳು ಬೇಕಿದ್ದವು, ಕಾರ್ಯವಿಧಾನವು ದೀರ್ಘವಾಗಿತ್ತು. ಆದರೆ ಯುದ್ಧದಂತಹ ಸಂದರ್ಭಗಳಲ್ಲಿ, ಅವರು ಅನುಮತಿಸಬೇಕು. ಹಾಗಾಗಿ ಮೇಲ್ಮನವಿ ಸಲ್ಲಿಸಿದ್ದೆ. ಎನ್‌ಒಸಿ ಇಲ್ಲದೆ ಸಾಕುಪ್ರಾಣಿಗಳನ್ನು ತರಲು ಸಹ ಈಗ ಅನುಮತಿಸಲಾಗುತ್ತಿದೆ ಎಂದು ರಿಷಬ್ ಹೇಳಿದ್ದಾರೆ.
ಕೌಶಿಕ್ ತನ್ನ ಪ್ರೀತಿಯ ನಾಯಿಯನ್ನು ಭಾರತಕ್ಕೆ ಕರೆತರಲು ಎದುರಿಸುತ್ತಿರುವ ತೊಂದರೆಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಎನ್‌ಒಸಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.
ತನ್ನ ಸಹಪಾಠಿಗಳೆಲ್ಲ ಏರ್‌ಇಂಡಿಯಾ ವಿಮಾನಗಳನ್ನು ಹತ್ತಿ ಭಾರತಕ್ಕೆ ಮರಳಿದರೂ ಕೌಶಿಕ್ ಮಾತ್ರ ಬಂಕರ್‌ನಿಂದ ಕದಲಿರಲಿಲ್ಲ. ತನ್ನ ಪುಟ್ಟ ನಾಯಿಮರಿಯನ್ನು ತನ್ನೊಂದಿಗೆ ಭಾರತಕ್ಕೆ ಕರೆತರುವ ಸಲುವಾಗಿ, ಕೌಶಿಕ್ ಎಲ್ಲ ದಾಖಲೆ ಪತ್ರಗಳನ್ನೂ ಸಿದ್ಧಪಡಿಸಿದ್ದರು.