Advertisement

ಮುತ್ತಲ ಕೆರೆ ಕಾಮಗಾರಿಗೆ ಚಾಲನೆ

12:25 PM May 18, 2020 | Naveen |

ರಿಪ್ಪನ್‌ಪೇಟೆ: ಕೆರೆಗಳ ನಿರ್ಮಾಣ ಹಾಗೂ ಕೆರೆಗಳ ಹೂಳು ತೆಗೆಸುವುದರಿದ ಕೆರೆಗಳಲ್ಲಿ ಅಂತರ್ಜಲ ವೃದ್ಧಿಯಾಗುವುದು. ಈ ಸದುದ್ದೇಶದಿಂದಾಗಿ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ಖಾತ್ರಿ ಕಾಮಗಾರಿಯಿಂದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಸಹಕಾರಿ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯ್ತಿ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಸಮೀಪದ ಚಿಕ್ಕಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುತ್ತಲ ಗ್ರಾಮದಲ್ಲಿ ಸಾರಾ ಸಂಘ ಸಂಸ್ಥೆಯವರು ಕೇವಲ 10 ದಿನದಲ್ಲಿ 100×100 ಅಡಿ ಉದ್ದ ಹಾಗೂ 25 ಅಡಿ ಅಳದ ಕೆರೆಯ ನಿರ್ಮಾಣ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಇದೇ ಮಾದರಿಯಲ್ಲಿ ಸಂಘ-ಸಂಸ್ಥೆಯವರು ಕೆರೆಗಳ ಪುನಶ್ಚೇತನ ಕಾರ್ಯಕ್ಕೆ ಮುಂದಾದರೆ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಹೇಳಿದರು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂ.ಎಲ್‌.ಸಿ.ಆರ್‌. ಪ್ರಸನ್ನಕುಮಾರ್‌, ಜಿಪಂ ಸದಸ್ಯ ಕಲಗೋಡು ರತ್ನಾಕರ್‌, ಸುರೇಶ್‌ಸ್ವಾಮಿರಾವ್‌, ತಾಪಂ ಅಧ್ಯಕ್ಷ ವೀರೇಶ್‌ಅಲುವಳ್ಳಿ, ತಾಪಂ ಸದಸ್ಯರಾದ ಬಿ.ಜೆ. ಚಂದ್ರುಮೌಳಿಗೌಡ, ಶಕುಂತಲ ರಾಮಚಂದ್ರ, ಜಿಪಂ ಸಿಇಒ ಎಂ.ಎಸ್‌. ವೈಶಾಲಿ, ತಹಶೀಲ್ದಾರ್‌ ರಾಜೀವ್‌, ತಾಪಂ ಇಒ ಪ್ರವೀಣ್‌, ಚಿಕ್ಕಜೇನಿ ಗ್ರಾಪಂ ಅಧ್ಯಕ್ಷ ಭದ್ರಪ್ಪಗೌಡ, ಕೆ.ವೈ.ಜಯವಂತ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next