Advertisement

Tallest Dog: ಕ್ಯಾನ್ಸರ್‌ ನಿಂದ  ವಿಶ್ವದ ಅತೀ ಎತ್ತರದ ಶ್ವಾನ “ಜೀಯಸ್”‌ ಕೊನೆಯುಸಿರು…

11:56 AM Sep 15, 2023 | Team Udayavani |

ನವದೆಹಲಿ: ವಿಶ್ವದ ಅತೀ ಎತ್ತರದ ಶ್ವಾನ ಎಂಬುದಾಗಿ 2022ರಲ್ಲಿ ಗಿನ್ನಿಸ್‌ ದಾಖಲೆ ಹೊಂದಿದ್ದ ಜೀಯಸ್‌ ಸೆಪ್ಟೆಂಬರ್‌ 12ರಂದು ತೀವ್ರ ಅನಾರೋಗ್ಯದಿಂದ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Lift Collapse: ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಕುಸಿದು 4 ಮಂದಿ ಮೃತ್ಯು

ಕೇವಲ ಮೂರು ವರ್ಷ ಪ್ರಾಯದ ಜೀಯಸ್‌ ಗಂಡು ಶ್ವಾನ ನಿಧನವಾಗಿದ್ದು, ಇದಕ್ಕಾಗಿ ಶ್ವಾನ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ. ಜೀಯಸ್‌ ಶ್ವಾನ ಕ್ಯಾನ್ಸರ್‌ ನಿಂದ ಬಳಲುತ್ತಿದ್ದು, ನಂತರ ನ್ಯೂಮೋನಿಯಾದಿಂದ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.

ಮಾರಕ ಕ್ಯಾನ್ಸರ್‌ ರೋಗದ ಜತೆ ಹೋರಾಡಿ ಕೊನೆಗೂ ಜಗತ್ತಿನ ಅತೀ ಎತ್ತರದ ಶ್ವಾನ ಜೀಯಸ್‌ ಕೊನೆಯುಸಿರೆಳೆದಿರುವುದಾಗಿ GWR(Gunness world Records) ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿದೆ.

ನಮ್ಮ ಪ್ರೀತಿಯ ಶ್ವಾನ ಇನ್ನಿಲ್ಲ. ಈ ಸಂದರ್ಭ ನಮ್ಮ ಹೃದಯ ಭಾರವಾಗಿದೆ ಎಂಬುದಾಗಿ ಶ್ವಾನದ ಮಾಲೀಕ ಬ್ರಿಟ್ನಿ ಡೇವೀಸ್‌ ಕೂಡಾ GoFundMe ಪೇಜ್‌ ನಲ್ಲಿ ತಿಳಿಸಿದ್ದಾರೆ. ಜೀಯಸ್‌ ಶ್ವಾನ ಮೂರು ಅಡಿ ಮತ್ತು 5.18 ಇಂಚುಗಳಷ್ಟು ಎತ್ತರವಿದ್ದು, ಅತೀ ದೊಡ್ಡ ಪಂಜಗಳನ್ನು ಹೊಂದಿತ್ತು. ಜೀಯಸ್‌ ಶ್ವಾನ ಡಲ್ಲಾಸ್‌ ರೈತರ ಮಾರ್ಕೆಟ್‌ ನಲ್ಲಿ ತುಂಬಾ ಜನಪ್ರಿಯತೆ ಹೊಂದಿತ್ತು. ಗಿನಿಸ್‌ ವರ್ಲ್ಡ್‌ ರೆಕಾರ್ಡ್‌ ನಲ್ಲಿ ಜೀಯಸ್‌ ಹೆಸರು ದಾಖಲಾದ ನಂತರ ಎಲ್ಲೆಡೆ ಹೆಚ್ಚು ಪ್ರಚಾರ ಪಡೆದುಕೊಂಡಿದ್ದು, ಇದೀಗ ಜೀಯಸ್‌ ಶ್ವಾನದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next